newsfirstkannada.com

ಸಂತೋಷ್ ಲಾಡ್ 49ನೇ ವರ್ಷದ ಹುಟ್ಟುಹಬ್ಬ; ಕನ್ಹಯ್ಯ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿ; ಹೇಗಿತ್ತು ವಿಜೃಂಭಣೆ?

Share :

Published February 28, 2024 at 6:47am

    ಹೊಸಪೇಟೆಯಲ್ಲಿ ಸಂತೋಷ್ ಲಾಡ್ ಬರ್ತ್‌ಡೇ ಸಂಭ್ರಮ

    ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಸಂಗೀತ ರಸದೌತಣ

    ವೇದಿಕೆಯಲ್ಲಿ ಸಂವಿಧಾನ ಪ್ರಸ್ತಾವನೆ ಭೋದಿಸಿದ ಕಾಂಗ್ರೆಸ್ ಸಚಿವ

ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇದು ಕೇವಲ ಬರ್ತ್‌ ಡೇ ಸಂಭ್ರಮವಾಗಿರದೇ ಅಲ್ಲದೇ ಬುದ್ಧ, ಬಸವಣ್ಣ, ಅಂಬೇಡ್ಕರ್ ಸಂದೇಶವನ್ನ ಸಾರುವ ಅತ್ಯದ್ಭುತ ಕಾರ್ಯಕ್ರಮವಾಗಿತ್ತು. ಸಂತೋಷ್‌ ಲಾಡ್‌ರ ಹುಟ್ಟುಹಬ್ಬ ಹೊಸಪೇಟೆ ಜನರ ಕಣ್ಮನ ಸೆಳೆದಿತ್ತು.

ನೇರ ಮಾತುಗಾರ, ಏನೇ ವಿಚಾರಗಳಿದ್ರೂ ಸಾರಾ ಸಗಟಾಗಿ ವ್ಯಕ್ತಪಡಿಸುವ ನಾಯಕ ಅಂದ್ರೆ ಅದು ಸಂತೋಷ್ ಲಾಡ್. ಇದೀಗ ಜನಮೆಚ್ಚಿದ ನಾಯಕ ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ನಿನ್ನೆ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಸಂತೋಷ್ ಲಾಡ್ ಫೌಂಡೇಷನ್‌ ವತಿಯಿಂದ ಅವರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲಾಯ್ತು. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರೋ ಡಾ.‌ಪುನೀತ್ ರಾಜಕುಮಾರ್ ಮೈದಾನದಲ್ಲಿ ಬರ್ತ್‌ಡೇ ಸಂಭ್ರಮ ಕಳೆಗಟ್ಟಿತ್ತು.

ಸಿಎಂ ಸಿದ್ದರಾಮಯ್ಯ ಸಂಪುಟದ ಮೋಸ್ಟ್ ಪಾಪ್ಯುಲರ್ ಹಾಗೂ ಕ್ರಿಯಾಶೀಲ ಸಚಿವ ಸಂತೋಷ್ ಲಾಡ್ ಅವರು ಬಸವಣ್ಣ, ಅಂಬೇಡ್ಕರ್ ಅವರ ಮಾರ್ಗದರ್ಶನದ ಸ್ವರೂಪವನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದರಂತೆ ಹುಟ್ಟುಹಬ್ಬದ ಸಂಭ್ರಮದ ವೇದಿಕೆಯಲ್ಲಿ ಸಂವಿಧಾನ ಪ್ರಸ್ತಾವನೆ ಭೋದಿಸಿ ಸಂವಿಧಾನದ ಮಹತ್ವ ಸಾರಿದ್ರು. ವೇದಿಕೆ ಮೇಲೆ ಜ್ಯೋತಿ ಬೆಳಗಿಸುವ ಮೂಲಕ ಬಸವಣ್ಣ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದ್ರು.

ಬಳಿಕ ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದ ಕಾಯಕಯೋಗಿ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೀತೆಗಳನ್ನು ಸಂತೋಷ್​​ ಲಾಡ್​​ ಬಿಡುಗಡೆಗೊಳಿಸಿದ್ರು. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆ ಸಂಗೀತ ಕಾರ್ಯಕ್ರಮ ರಸದೌತಣ ನೀಡಿತು.

ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಯಾದ ಸಚಿವ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಚಿವ ಬಿ.ನಾಗೇಂದ್ರ, ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಎಐಸಿಸಿ ನಾಯಕ ಕನ್ಹಯ್ಯ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

ಅಂದ್ಹಾಗೆ ಸಂತೋಷ್ ಲಾಡ್ ಜನರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಾಗಿದ್ದಾರೆ. ತಮ್ಮ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡ ಹಾರೈಸಿದ ಎಲ್ಲಾ ಹಿತೈಷಿಗಳಿದೆ ಧನ್ಯವಾದ ತಿಳಿಸಿದ್ದಾರೆ. ಒಟ್ಟಾರೆ, ಸಚಿವ ಸಂತೋಷ್ ಲಾಡ್ ಅವರ ಸರಳ ಹಾಗೂ ಮಾದರಿ ಹುಟ್ಟುಹಬ್ಬ ಕಾರ್ಯಕ್ರಮ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿ ಅಂದ್ರೇ ತಪ್ಪಾಗಲಾರದು. ಸಂತೋಷ್ ಲಾಡ್ ಅವರ ಸಾಮಾಜಿಕ ಸೇವೆ, ಜನ ಸೇವೆ ಹೀಗೆಯೇ ಮುಂದುವರೆಯಲಿ ಅನ್ನೋದು ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂತೋಷ್ ಲಾಡ್ 49ನೇ ವರ್ಷದ ಹುಟ್ಟುಹಬ್ಬ; ಕನ್ಹಯ್ಯ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿ; ಹೇಗಿತ್ತು ವಿಜೃಂಭಣೆ?

https://newsfirstlive.com/wp-content/uploads/2024/02/santhosh-lad.jpg

Load More