/newsfirstlive-kannada/media/post_attachments/wp-content/uploads/2025/03/sapthami.jpg)
ಸ್ಯಾಂಡಲ್ವುಡ್ ಸ್ಟಾರ್ ನಟಿ ಸಪ್ತಮಿ ಗೌಡ ಮನೆಯಲ್ಲಿ ನೀರವ ಮೌನ ಆವರಿಸಿದೆ. ನಟಿ ಸಪ್ತಮಿ ಗೌಡ ಅವರ ಪ್ರೀತಿಯ ಶ್ವಾನ ಮೃತಪಟ್ಟಿದೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮೊರೆ ಹೋದ ಬಾಲಿವುಡ್ ನಟಿ ಕತ್ರಿನಾ ಕೈಫ್; ಫೋಟೋ ಇಲ್ಲಿದೆ!
View this post on Instagram
ಸುಮಾರು 15 ವರ್ಷಗಳಿಂದ ನಟಿ ಸಪ್ತಮಿ ಗೌಡ ಅವರ ಮನೆಯಲ್ಲಿದ್ದ ಶ್ವಾನ ಮಾರ್ಚ್ 10ರಂದು ಕೊನೆಯುಸಿರೆಳೆದಿದೆ. ಇದೇ ದುಃಖದಲ್ಲಿ ನಟಿ ಸಪ್ತಮಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೀತಿಯ ಶ್ವಾನದ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗಳ ಜೊತೆಗೆ ಸಿಂಬಾ.. ಬೆಸ್ಟ್ ಬಾಯ್ ಎವರ್. 16-04-2010 ರಿಂದ 10-03-2025.
ನನಗೆ ಏನನ್ನು ಹೆಳಬೇಕು ಅಂತ ತಿಳಿಯುತ್ತಿಲ್ಲ. ನಮ್ಮ ಸಿಂಬಾ ಇಲ್ಲದೆ ನಾವು ಬದುಕಬೇಕು. ದಿನನಿತ್ಯ ಕಳೆಯಬೇಕು ಎಂದು ನಾವು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ನಾನು ಸದಾ ಸಿಂಬಾ ಬಗ್ಗೆ ಯೋಚನೆ ಮಾಡುತ್ತಿದ್ದೆ, ಆದರೆ ಈಗ ಅವನಿಲ್ಲ ನಮ್ಮ ಸುತ್ತಲು ಸದಾ ಇಲ್ಲದೆ ನಾವು ಬದುಕುವುದು ಹೇಗೆ ಅಂತೆಲ್ಲಾ ಭಾವುಕರಾಗಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ