newsfirstkannada.com

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.. ಸಾರಾ- ಶುಭ್​ಮನ್​ ಲವ್ ಪಕ್ಕಾ ಅನ್ನೋದಕ್ಕೆ ಸಿಕ್ತು ಹೊಸ ಸಾಕ್ಷಿ; ಏನದು?

Share :

Published January 24, 2024 at 1:51pm

  ಗಿಲ್​- ಸಾರಾ​​ ಪ್ರೇಮ​ ಕಾವ್ಯದಲ್ಲಿ ಸದ್ದಿಲ್ಲದೇ ಹೊಸ ಬೆಳವಣಿಗೆ

  ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಗಿಲ್​- ಸಾರಾ​​ ಪ್ರೇಮ ಕಾವ್ಯ

  ಒಂದೇ ಕಾರಿನಲ್ಲಿ ಕಾಣಿಸಿಕೊಂಡಿರುವುದು ಯಾಱರು ಗೊತ್ತಾ?

ಸದ್ಯ ಎಲ್ಲರ ಚಿತ್ತ ಇಂಡೋ -ಇಂಗ್ಲೆಂಡ್​ ಟೆಸ್ಟ್​ ಸರಣಿಯತ್ತ ನೆಟ್ಟಿದೆ. ಇದ್ರ ನಡುವೆ ಶುಭ್​​ಮನ್​ ಗಿಲ್​- ಸಾರಾ ತೆಂಡೂಲ್ಕರ್​​ ಪ್ರೇಮ್​ ಕಾವ್ಯದಲ್ಲಿ ಸದ್ದಿಲ್ಲದೇ ಹೊಸ ಬೆಳವಣಿಗೆ ನಡೆದಿದೆ. ಹೊಸದಾಗಿ ಸಿಕ್ಕಿರುವ ಸಾಕ್ಷಿ ಲವ್​ ಗಾಸಿಪ್​​ಗೆ ಮತ್ತಷ್ಟು ಪುಷ್ಠಿ ಕೊಟ್ಟಿದೆ. ಅಷ್ಟಕ್ಕೂ ಸಿಕ್ಕಿರುವ ಆ ಸಾಕ್ಷಿ ಏನು?

ಇಂಡೋ -ಇಂಗ್ಲೆಂಡ್​ ಟೆಸ್ಟ್​ ಸರಣಿ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಟೀಮ್​ ಇಂಡಿಯಾ ಅಭಿಮಾನಿಗಳ ಚಿತ್ತ ಯಂಗ್​ ಸೆನ್ಸೇಷನ್​ ಶುಭ್​​ಮನ್​ ಗಿಲ್​ ಮೇಲಿದೆ. ಕಳೆದ ಕೆಲ ಸರಣಿಗಳಲ್ಲಿ ವೈಫಲ್ಯ ಅನುಭವಿಸಿರುವ ಗಿಲ್​, ಈ ಬಾರಿಯಾದ್ರೂ ಕಮ್​ಬ್ಯಾಕ್​ ಮಾಡ್ತಾರಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ಸಾಲಿಡ್​ ಪರ್ಫಾಮೆನ್ಸ್​ ನೀಡೋ ಪಣ ತೊಟ್ಟಿರೋ ಶುಭ್​ಮನ್​ ಗಿಲ್​ ಕೂಡ ಭರ್ಜರಿ ತಯಾರಿ ನಡೆಸ್ತಿದ್ದಾರೆ. ಎಲ್ಲರ ಚಿತ್ತ ಶುಭ್​ಮನ್​ ಆಟದ ಮೇಲಿದೆ. ಇದ್ರ ನಡುವೆ ಆಫ್​ ಫೀಲ್ಡ್​ನಲ್ಲಿ ಹೊಸ ಬೆಳವಣಿಗೆ ನಡೆದಿದೆ.

ಶುಭ್​ಮನ್​ – ಸಾರಾ ಪ್ರೇಮಕಾವ್ಯಕ್ಕೆ ಸಿಗ್ತು ಹೊಸ ಸಾಕ್ಷಿ.!

ಶುಭ್​ಮನ್​ ಗಿಲ್​ -ಸಾರಾ ತೆಂಡೂಲ್ಕರ್​ ಪ್ರೇಮ ಕಾವ್ಯದ ಗಾಸಿಪ್​ ಕಳೆದ ಕೆಲ ದಿನಗಳಿಂದ ಸೈಲೆಂಟ್​ ಆಗಿತ್ತು. ಆದ್ರೆ, ಇದೀಗ ಮತ್ತೆ ಹಾಟ್​ ಟಾಪಿಕ್​ ಆಗಿ ಮಾರ್ಪಟ್ಟಿದೆ. ಇಷ್ಟು ದಿನ ಗಾಸಿಪ್​ ಅಂತಿದ್ದವರೆಲ್ಲ ಇದೀಗ ಲವ್​ ಕಹಾನಿ ನಿಜವೇ ಅಂತಿದ್ದಾರೆ. ಯಾಕಂದ್ರೆ, ಈಗ ಸಿಕ್ಕಿರೋದು ವಿಡಿಯೋ ಸಾಕ್ಷಿ.

ಒಂದೇ ಕಾರಲ್ಲಿ ಶುಭ್​ಮನ್​ ತಂಗಿ, ಸಚಿನ್​ ಪುತ್ರಿ.!

ಹೌದು.. ಅಚ್ಚರಿ ಅನಿಸಿದ್ರು ಇದು ಸತ್ಯ.. ಕೆಲ ದಿನಗಳ ಹಿಂದೆ ಶುಭ್​ಮನ್​ ಗಿಲ್ ತಂಗಿ ಶಹನೀಲ್​ ಗಿಲ್​, ಸಚಿನ್​ ಪುತ್ರಿ ಸಾರಾ ತೆಂಡುಲ್ಕರ್​​ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಒಟ್ಟಾಗಿ ಸುತ್ತಾಡಿರುವ ಇಬ್ಬರೂ, ನಂತರದಲ್ಲಿ ಒಂದೇ ಕಾರಲ್ಲಿ ಪ್ರಯಾಣಿಸಿದ್ದಾರೆ. ಇದೇ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಸಾರಾ ಹಾಗೂ ಶಹನೀಲ್​ ಆರಂಭದಲ್ಲಿ ಯಾರ ಕೈಗೂ ಸಿಗದೇ ಓಡಾಡಿದ್ದಾರೆ. ಆದ್ರೆ, ಅಂತಿಮವಾಗಿ ಕಾರಿನೊಳಗೆ ಕೂತಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಸಚಿನ್​ ಪುತ್ರಿ ಮುಖ ಮುಚ್ಚಿಕೊಳ್ಳೋ ಪ್ರಯತ್ನ ಮಾಡಿದ್ರೆ, ಗಿಲ್​ ತಂಗಿ ಮಾಸ್ಕ್​​ ಧರಸಿ ಮುಖ ಹೈಡ್​ ಮಾಡಿಕೊಂಡಿದ್ದಾರೆ. ಕ್ಯಾಮೆರಾ ಕಂಡಾಗ ಇಬ್ಬರೂ ಮಾಡಿದ ಈ ಕಣ್ಣಾ ಮುಚ್ಚಾಲೆ ಆಟವೇ ಲವ್​​ ಗಾಸಿಪ್​ಗೆ ಮತ್ತಷ್ಟು ಪುಷ್ಟಿ ನೀಡಿದೆ.

ಮುಂಬೈ ಹೋಟೆಲ್​ನಲ್ಲಿ ಒಟ್ಟಾಗಿ ಕಂಡಿದ್ದ ಸಾರಾ- ಶುಭ್​ಮನ್​.!

ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಹಿಂದಿನ ದಿನ ನಡೆದ ಘಟನೆಯಿದು. ಖಾಸಗಿ ಕಾರ್ಯಕ್ರಮವೊಂದನ್ನ ಮುಗಿಸಿ ಮುಂಬೈನ ಹೋಟೆಲ್ ಒಂದರಿಂದ ಶುಭ್​​ಮನ್ ಗಿಲ್​ ಹೊರ ಬರ್ತಾರೆ. ಗಿಲ್​ ಹಿಂದೆನೇ ಸಾರಾ ಕೂಡ ಕಾಣಿಸಿಕೊಳ್ತಾರೆ. ಇಬ್ಬರೂ ಹೀಗೆ ಒಟ್ಟಾಗಿ ಕಾಣಿಸಿಕೊಂಡಿದ್ದ ವಿಡಿಯೋ ಸಖತ್​ ಸೆನ್ಸೇಷನ್​ ಸೃಷ್ಟಿಸಿತ್ತು.

ವಿಶ್ವಕಪ್​ ಪಂದ್ಯಗಳಲ್ಲೂ ಸಾರಾ-ಶುಭ್​ಮನ್​ ಧ್ಯಾನ.!

ವಿಶ್ವಕಪ್​ ಮೆಗಾ ಟೂರ್ನಿಯಲ್ಲೂ ಸಾರಾ​- ಶುಭ್​ಮನ್​ ಗಿಲ್​ ಪ್ರೇಮಕಾವ್ಯದ ಸದ್ದು ಜೋರಾಗಿತ್ತು. ಟೀಮ್​ ಇಂಡಿಯಾ ಪಂದ್ಯಗಳನ್ನ ನೋಡೋಕೆ ಸಾರಾ ಸ್ಟೇಡಿಯಂಗೆ ಬರ್ತಿದ್ರು. ಫೀಲ್ಡ್​​ನಲ್ಲಿ ಶುಭ್​ಮನ್​ ಬೌಂಡರಿ, ಸಿಕ್ಸರ್​ ಬಾರಿಸ್ತಿದ್ರೆ, ಗ್ಯಾಲರಿಯಲ್ಲಿ ಕೂತು ಸಾರಾ ಚಿಯರ್​ ಮಾಡ್ತಿದ್ರು.

ಶುಭ್​​ಮನ್ ಗಿಲ್ -ಸಾರಾ​ ನಡುವಿನ ಡೇಟಿಂಗ್​ ರೂಮರ್ಸ್​ ಇಂದು ನಿನ್ನೆಯದಲ್ಲ. ಕಳೆದ ಕೆಲ ವರ್ಷಗಳಿಂದ ಆಗಾಗ ಸುದ್ದಿಯಲ್ಲಿರೋ ವಿಚಾರ. ಸಿಕ್ಕಾಪಟ್ಟೆ ಟ್ವಿಸ್ಟ್​ & ಟರ್ನ್​​ಗಳನ್ನ ಕಂಡಿರೋ ಈ ಲವ್​ ಕಹಾನಿ, ಕೆಲ ತಿಂಗಳಿಂದ ಮತ್ತೆ ಮತ್ತೆ ಸದ್ದು ಮಾಡ್ತಿದೆ. ಸದ್ಯಕ್ಕಂತೂ ಇಬ್ಬರೂ ಪ್ರೇಮಪಾಶದಲ್ಲಿ ಸಿಲುಕಿರೋದು ಬಹುತೇಕ ಕನ್​​ಫರ್ಮ್​ ಅನ್ನೋ ನಿಲುವಿಗೆ ಎಲ್ಲರು ಬಂದಾಗಿದೆ. ಹಾಗಿದ್ರೂ ಮುಂದೇನಾಗುತ್ತೆ ಅನ್ನೋ ಕೂತೂಹಲವಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.. ಸಾರಾ- ಶುಭ್​ಮನ್​ ಲವ್ ಪಕ್ಕಾ ಅನ್ನೋದಕ್ಕೆ ಸಿಕ್ತು ಹೊಸ ಸಾಕ್ಷಿ; ಏನದು?

https://newsfirstlive.com/wp-content/uploads/2024/01/GILL_SARA-2.jpg

Load More