/newsfirstlive-kannada/media/post_attachments/wp-content/uploads/2025/04/PANIPURI-6.jpg)
ಕ್ರಿಕೆಟ್ ಜಗತ್ತಿನ ದಂತಕತೆ ಸಚಿನ್ ತೆಂಡೂಲ್ಕರ್​ ಅವರ ಪುತ್ರಿ ಸಾರಾ ತೆಂಡೂಲ್ಕರ್ ಈ ಐಪಿಎಲ್​ ಗದ್ದಲದ ನಡುವೆಯೇ ಒಂದು ಟೀಮ್ ಖರೀದಿ ಮಾಡಿದ್ದಾರೆ. ಈ ಮೂಲಕ ಅವರು ಕೂಡ ಒಂದು ತಂಡದ ಫ್ರಾಂಚೈಸಿ ಆಗಿ ಬದಲಾಗಿದ್ದಾರೆ. ಹಾಗಂತ ಇದು ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ನ ಟೀಮ್ ಅಲ್ಲ ಇದು ಗ್ಲೋಬಲ್ ಇ-ಕ್ರಿಕೆಟ್ ಪ್ರಿಮೀಯರ್ ಲೀಗ್​ನಲ್ಲಿ (GEPL) ಆಡುವ ತಂಡ.
ಜೆಟ್ ಸಿಂಥೆಸಿಸ್, ಡಿಜಿಟಲ್​ ಎಂಟೆಟೈನ್ಮೆಂಟ್​ ಆ್ಯಂಡ್ ಟೆಕ್ನಾಲಜಿಯ ಲೀಡರ್​, ಇವರ ಮೂಲಕ ನಡೆಸಲ್ಪಡುತ್ತಿರುವ ಪಂದ್ಯಗಳು. ಇದು ಜಗತ್ತಿನ ಅತ್ಯಂತ ದೊಡ್ಡ ಇ-ಕ್ರಿಕೆಟ್ ಮತ್ತು ಎಂಟೆಟೈನ್ಮೆಂಟ್ ಲೀಗ್. ಈ ಒಂದು ಗೇಮ್ ಅ​ನ್ನು ಒಟ್ಟು ಜಗತ್ತಿನಾದ್ಯಂತ ಸುಮಾರು 30 ಕೋಟಿ ಜನರು ಡೌನ್​ಲೋಡ್ ಮಾಡಿಕೊಂಡಿದ್ದಾರೆ.
ಇದು ಲಾಂಚ್ ಆದಾಗಿನಿಂದ ಇಂದಿನವರೆಗೂ ಇದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈ ಹಿಂದಿನ್ ಸೀಸನ್​ನಲ್ಲಿ ಒಟ್ಟು ರಿಜಿಸ್ಟರ್ ಆದವರ ಸಂಖ್ಯೆ ಸುಮಾರು 9 ಲಕ್ಷ 10 ಸಾವಿರದಷ್ಟಿತ್ತು. ಈಗ ಅದು 2 ಲಕ್ಷಕ್ಕೆ ತಲುಪಿದಿದೆ.
/newsfirstlive-kannada/media/post_attachments/wp-content/uploads/2025/04/PANIPURI-5.jpg)
ಇದನ್ನೂ ಓದಿ:ಬಿಗ್​ ಶಾಕ್ ಕೊಟ್ಟ ಬೂಮ್ರಾ​.. RCB ಜೊತೆಗಿನ ಮ್ಯಾಚ್ ಕೂಡ ಆಡಲ್ಲ.. ಯಾಕೆ?
ಈ ಒಂದು ಇ-ಕ್ರಿಕೆಟ್​ನಲ್ಲಿ ಸಾರಾ ತೆಂಡೂಲ್ಕರ್ ಮುಂಬೈ ಫ್ರಾಂಚೈಸಿ ಆಗಿದ್ದಾರೆ. ಪ್ರಾದೇಶಿಕತೆಯನ್ನು ಮರೆಯದ ಸಾರಾ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡವನ್ನು ಖರೀದಿ ಮಾಡಿದ್ದಾರೆ. ಜಿಪಿಎಲ್​ನಲ್ಲಿ ಫ್ರಾಂಚೈಸಿಯ ಒಡತಿಯಾಗಿರುವುದು ಕನಸೊಂದು ನನಸಾದಂತಾಗಿದೆ. ಕ್ರಿಕೆಟ್ ನಮ್ಮ ಕುಟುಂಬದ ಒಂದು ಭಾಗ. ಮುಂಬೈ ನಗರದ ಜೊತೆಗಿ ನನ್ನ ಪ್ರೀತಿ ಆಟದೊಂದಿಗೆ ಬೆರೆಯುತ್ತಿದೆ. ಪ್ರತಿಭಾನ್ವಿತ ತಂಡ ಕಟ್ಟಲು ಮತ್ತು ಎಲ್ಲರಿಗೂ ಸ್ಫೂರ್ತಿ ತುಂಬುವ ಮತ್ತು ಮನರಂಜನೆ ನೀಡುವ ಇ-ಸ್ಪೋರ್ಟ್ಸ್​ ತಂಡವನ್ನು ರೂಪಿಸಲು ಉತ್ಸುಕಳಾಗಿದ್ದೇನೆ ಎಂದು ಸಾರಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us