Advertisment

ಸಾರಾ, ಸನಾ ಏನ್​ ಮಾಡ್ತಿದ್ದಾರೆ.. ಸಚಿನ್, ಗಂಗೂಲಿ ಪುತ್ರಿಯರ ಲೈಫ್​​ಸ್ಟೈಲ್​​​ ಹೇಗೆಲ್ಲಾ ಇದೆ?

author-image
Bheemappa
Updated On
ಸಾರಾ, ಸನಾ ಏನ್​ ಮಾಡ್ತಿದ್ದಾರೆ.. ಸಚಿನ್, ಗಂಗೂಲಿ ಪುತ್ರಿಯರ ಲೈಫ್​​ಸ್ಟೈಲ್​​​ ಹೇಗೆಲ್ಲಾ ಇದೆ?
Advertisment
  • ಸಾರಾ ಮಾಡೆಲ್ ಮಾತ್ರ ಅಲ್ಲ, ಬಯೋಮೆಡಿಕಲ್​​ ಸೈಂಟಿಸ್ಟ್‌
  • Beauty With Brain ಟ್ಯಾಗ್​​ ಲೈನ್ ಯಾರಿಗೆ ಶೂಟ್ ಆಗುತ್ತೆ?
  • ಸಾರಾ ತೆಂಡುಲ್ಕರ್, ಸನಾ ಗಂಗೂಲಿ ಇಬ್ರು ಏನ್​ ಮಾಡ್ತಿದ್ದಾರೆ?

ಕ್ರಿಕೆಟ್​ ಜಗತ್ತಿನಲ್ಲೇ ಯಾರು ಬೆಸ್ಟ್ ಅನ್ನೋ ಚರ್ಚೆ ಕಾಲ ಕಾಲಕ್ಕೆ ನಡೀತಾನೇ ಇರುತ್ತೆ. ಸಚಿನ್​ ತೆಂಡುಲ್ಕರ್​​ vs ಸೌರವ್​ ಗಂಗೂಲಿ ವಿಚಾರದಲ್ಲೂ ಈ ಡಿಬೆಟ್​ ನಡೆದಿದೆ. ಇದೀಗ ಇವರಿಬ್ಬರ ಮಕ್ಕಳಾದ ಸಾರಾ ತೆಂಡುಲ್ಕರ್ ಹಾಗೂ ಸನಾ ಗಂಗೂಲಿ​​ ವಿಚಾರದಲ್ಲಿ ಯಾರು ಬೆಸ್ಟ್.? ಎಂಬ ಚರ್ಚೆ ಫ್ಯಾನ್ಸ್ ವಲಯದಲ್ಲಿ ನಡೀತಿದೆ. ಯಾಕೆ ಗೊತ್ತಾ?.

Advertisment

ಸಚಿನ್ ತೆಂಡುಲ್ಕರ್​, ಸೌರವ್ ಗಂಗೂಲಿ. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಇವರಿಬ್ಬರು ಹೆಸರು ಎಂದಿಗೂ ಅಜರಾಮರ. ಒಬ್ಬರು ಕ್ರಿಕೆಟ್ ದೇವರಾದ್ರೆ. ಮತ್ತೊಬ್ಬರು ಅಭಿಮಾನಿಗಳ ಪಾಲಿನ ನೆಚ್ಚಿನ ದಾದಾ. ಸಚಿನ್, ಬ್ಯಾಟಿಂಗ್​ನಿಂದ ವಿಶ್ವ ಕ್ರಿಕೆಟ್ ಲೋಕವನ್ನಾಳಿದ್ರೆ. ಕೊಲ್ಕತ್ತಾ ಪ್ರಿನ್ಸ್​, ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ಕೊಟ್ಟ ಮಹಾನ್​​ ನಾಯಕ. ಕ್ರಿಕೆಟ್​ನಿಂದ ಇವರಿಬ್ಬರು ದೂರವಾಗಿ ವರ್ಷಗಳೇ ಉರುಳಿದರೂ, ಒಂದಿಲ್ಲೊಂದು ಕಾರಣಕ್ಕೆ ಇವರಿಬ್ಬರ ಹೆಸರುಗಳು ಚರ್ಚೆಗೆ ಬರ್ತಾನೆ ಇರುತ್ತೆ. ಇದೀಗ ಇವರಿಬ್ಬರ ಹೆಸರು ಮುನ್ನಲೆಗೆ ಬರಲು ಕಾರಣ ಇವರಿಬ್ಬರ ಪುತ್ರಿಯರು.

publive-image

ಸೆಲೆಬ್ರಿಟಿಗಳು ಎಂದ ಮೇಲೆ ಕುಟುಂಬ ಸದಸ್ಯರಿಗೂ ಪ್ರತ್ಯೇಕ ಅಟೆನ್ಸನ್ ಸಿಕ್ಕೇ ಸಿಗುತ್ತೆ. ಅದರಂತೆಯೇ ಸಚಿನ್ ಪುತ್ರಿ ಸಾರಾ ತೆಂಡುಲ್ಕರ್, ಗಂಗೂಲಿ ಪುತ್ರಿ ಸನಾ ಗಂಗೂಲಿ ಕೂಡಾ ಫೇಮಸ್. ಅವರದ್ದೇ ಆಸಕ್ತಿಯ ಕ್ಷೇತ್ರಗಳಲ್ಲಿ ಸಕ್ಸಸ್​​​ಫುಲ್ ವುಮೆನ್ಸ್. ಸಕ್ಸಸ್​​ಫುಲ್ ವುಮೆನ್ಸ್​ ಎಂದ್ಮೇಲೆ ಇವರು, ಏನ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್​ಗೂ ಇದ್ದೇ ಇರುತ್ತೆ.

ಕ್ಯೂರಿಯಾಸಿಟಿ ಹುಟ್ಟಿಸುತ್ತೆ ಸಾರಾ ತೆಂಡುಲ್ಕರ್​ ಜೀವನ..!

ಸಾರಾ ತೆಂಡುಲ್ಕರ್ ಕ್ರಿಕೆಟ್ ಅಭಿಮಾನಿಗಳ ಕ್ರಶ್​. ಸಚಿನ್ ಅಭಿಮಾನಿಗಳ ದೇವರಾದ್ರೆ. ಈಕೆ ಅಭಿಮಾನಿಗಳ ದಿಲ್ ಗೆದ್ದ ಅಪ್ಸರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಈಕೆ, ಪಬ್, ಪಾರ್ಟಿ, ನೈಟ್ ಲೈಫ್ ಅಂತೆಲ್ಲಾ ಎಂಜಾಯ್ ಮಾಡ್ತಾರೆ. ಅಷ್ಟೇ ಅಲ್ಲ, ಒಂದಿಲ್ಲೊಂದು ಕಾರಣಕ್ಕೆ ಟ್ರೆಂಡಿಂಗ್​ನಲ್ಲಿ ಇರ್ತಾರೆ. ಲವ್, ಗಾಸಿಪ್​ಗಳಿಂದ ಸುದ್ದಿಯಾಗುವ ಸುಂದರಿ ಸಾರಾ, ಸಕ್ಸಸ್​ಫುಲ್ ವುಮೆನ್.

Advertisment

ಫ್ಯಾಷನ್, ಮಾಡಲಿಂಗ್​, ಡೇಟಿಂಗ್, ಟ್ರಿಪ್ ಅಂತೆಲ್ಲಾ ಸುತ್ತಾಡುವ ಸಾರಾ ತೆಂಡುಲ್ಕರ್, ಶಿಕ್ಷಣ, ಬ್ಯುಸಿನೆಸ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಷ್ಟೇ ಅಲ್ಲ, ಬುದ್ಧಿವಂತಿಕೆಗೂ ಈಕೆ ಹೆಸರುವಾಸಿ ಆಗಿದ್ದಾರೆ. ಒಂದು ರೀತಿ beauty with brain ಎಂಬ ಟ್ಯಾಗ್​​ ಲೈನ್​ಗೆ ಸಾರಾ ಪರ್ಫೆಕ್ಟ್​ ಎಕ್ಸಾಂಪಲ್..

ಸಾರಾ ತೆಂಡುಲ್ಕರ್​ ಕರಿಯರ್​​

  • ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣ
  • ಲಂಡನ್‌ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಾರಾ
  • ಬಯೋಮೆಡಿಕಲ್, ಸಾರ್ವಜನಿಕ ಆರೋಗ್ಯ ಪೌಷ್ಟಿಕಾಂಶದಲ್ಲಿ PG
  • ಮಾಡೆಲ್​​​​, ಬಯೋಮೆಡಿಕಲ್‌ ಸೈಂಟಿಸ್ಟ್‌ ಆಗಿರುವ ಸಾರಾ ತೆಂಡುಲ್ಕರ್
  • ಸಾರಾ ತೆಂಡುಲ್ಕರ್ E-ಕಾಮರ್ಸ್ ಆನ್‌ಲೈನ್ ಸ್ಟೋರ್​​​ ನಡೆಸ್ತಿರುವ ಸಾರಾ
  • ಕೆಲ ಬ್ರ್ಯಾಂಡ್​ಗಳ ಪ್ರಮೋಶನ್​, ಈಕೆಗೆ ಮಿಲಿಯನ್ ಫಾಲೋವರ್ಸ್​
  • ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್​​​ನ ಮುಂಬೈ ಫ್ರಾಂಚೈಸಿ ಓನರ್
  • ಸಚಿನ್​ ತೆಂಡುಲ್ಕರ್​ ಫೌಂಡೇಷನ್​ನಲ್ಲಿ ನಿರ್ದೇಶಕಿ ಆಗಿ ಸಾರಾ ಸೇವೆ ಸಲ್ಲಿಕೆ
  • ವಾರ್ಷಿಕ 1 ಕೋಟಿಗೂ ಅಧಿಕ ಆದಾಯ ಗಳಿಸಲಿರುವ ಸಾರಾ ತೆಂಡುಲ್ಕರ್

ಬಯಲಾಜಿಯಲ್ಲಿ ಪದವಿ ಪಡೆದಿರುವ ಸಾರಾ ತೆಂಡುಲ್ಕರ್, ತಂದೆಗೆ ತಕ್ಕ ಮಗಳು ಎಂದೆನಿಸಿಕೊಳ್ತಿದ್ದಾರೆ. ಸಾರಾ ತೆಂಡುಲ್ಕರ್ ಮಾತ್ರವಲ್ಲ, ಸಾರಾಗಿಂತ ಚಿಕ್ಕವಳಾದ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಕೂಡ ನೆಚ್ಚಿನ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಿಂದ ದೂರವಿದ್ರೂ ಆಗಾಗ ಸುದ್ದಿಯಾಗ್ತಾರೆ. ದಾದಾ ಪುತ್ರಿ ಸನಾ ಗಂಗೂಲಿ, ವಿದ್ಯಾವಂತೆ ಹಾಗೂ ನಿಪುಣೆ.

Advertisment

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಸ್ಥಾನ ಇಲ್ವಾ.. ಇನ್ನು ಎಷ್ಟು ವರ್ಷ ಕಾಯಬೇಕು?

publive-image

ಕೋಲ್ಕತ್ತಾದ ಪ್ರತಿಷ್ಠಿತ ಲೊರೆಟೊ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಸನಾ ಗಂಗೂಲಿ, 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 98ರಷ್ಟು ಅಂಕಗಳಿಸಿದ್ದರು. ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ ಸನಾ, ಲಂಡನ್‌ನ ಯೂನಿವರ್ಸಿಟಿಯಲ್ಲೇ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅಷ್ಟೇ ಅಲ್ಲ, ಶಾಸ್ತ್ರೀಗ ಸಂಗೀತ ಕಲಿತಿದ್ದ ಸನಾ, ದೊಡ್ಡ ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಿದೆ. ಪದವಿಯ ನಂತರ ಬಹುರಾಷ್ಟ್ರೀಯ ಕಂಪನಿಗಳಲ್ಲಿ HSBC, KPMG, Goldman Sachs, Barclays, ICICIಯಂತಹ ಪ್ರಮುಖ ಕಂಪನಿಗಳಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದ ಸನಾ, ಸದ್ಯ ಲಂಡನ್​ನ InnoverV ಕಂಪನಿಯಲ್ಲಿ Consultant ಆಗಿ ಕೆಲಸ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಕೆಲ ಜಾಹೀರಾತುಗಳಲ್ಲಿ ಅಪ್ಪನ ಜೊತೆ ಕಾಣಿಸಿಕೊಂಡಿದ್ದಿದೆ.

ಅಪ್ಪನಂತೆ ಅಲ್ದೇ ಪ್ರತ್ಯೇಕ ಹಾದಿಯಲ್ಲಿ ಸಾಗಿರುವ ಇವರಿಬ್ಬರು, ಅವರದ್ದೇ ಹಾದಿಯಲ್ಲಿ ಸಕ್ಸಸ್ ಕಂಡಿದ್ದಾರೆ. ತಮ್ಮದೇ ಆದ ಬ್ರ್ಯಾಂಡ್​ ಕ್ರಿಯೇಟ್ ಮಾಡಿಕೊಂಡು ಅಪ್ಪಂದಿರು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ. ನಿಜವಾದ ಸಕ್ಸಸ್​ ಅಂದ್ರೆ ಇದೇ ಅಲ್ವಾ?.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment