newsfirstkannada.com

ಕಾಂಗ್ರೆಸ್, ಕುಮಾರಸ್ವಾಮಿ ಕರೆಂಟ್ ಕಳ್ಳತನ ಫೈಟ್‌ಗೆ ಹೊಸ ಟ್ವಿಸ್ಟ್.. ಜೆಡಿಎಸ್‌ ಕಾಂಪೌಂಡ್‌ಗೆ ಪೋಸ್ಟರ್ ಅಂಟಿಸಿ ವ್ಯಂಗ್ಯ

Share :

Published November 15, 2023 at 7:28am

  JDS ಕಚೇರಿ ಬಳಿ ಕರೆಂಟ್​ ಕಳ್ಳ ಕುಮಾರಸ್ವಾಮಿ ಎಂಬ ಪೋಸ್ಟರ್​ ಸದ್ದು

  ‘ಕರೆಂಟ್​ ಕಳ್ಳ ಕುಮಾರಸ್ವಾಮಿ’ ಎಂಬ ಬರಹವಿರುವ 8 ಪೋಸ್ಟರ್‌ಗಳು

  ಕೊನೆಗೆ ಪೋಸ್ಟರ್ ತೆರವುಗೊಳಿಸಲು ಆಗಮಿಸಿದ ಶ್ರೀರಾಂಪುರ ಪೊಲೀಸರು

ಬೆಂಗಳೂರು: ವಿದ್ಯುತ್ ಖರೀದಿ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಕಮಿಷನ್ ಕೊಳ್ಳೆ ಹೊಡೀತಿದೆ ಅಂತ ಹೆಚ್‌ಡಿಕೆ ಆರೋಪಿಸಿದ್ದರು. ಲೋಡ್‌ಶೆಡ್ಡಿಂಗ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೂಟಿಯ ಚಾಟಿ ಬೀಸಿದ್ದರು. ಹೀಗೆ ಕರೆಂಟ್‌ ಹಿಡಿದು ಸರ್ಕಾರಕ್ಕೆ ಕಾಟ ಕೊಟ್ಟಿದ್ದ ದಳಪತಿಗೆ ವಿದ್ಯುತ್‌ ಶಾಕ್‌ ತಟ್ಟಿದೆ.

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಹೆಚ್‌.ಡಿ. ಕುಮಾರಸ್ವಾಮಿ, ಜೆ.ಪಿ. ನಗರದ ತಮ್ಮ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿಸಿದ್ದರು. ಮನೆಗೆಲ್ಲಾ ಝಗಮಗಿಸುವ ದೀಪಗಳನ್ನ ಹಾಕಿಸಿ ಸಿಂಗಾರ ಮಾಡಿಸಿದ್ದರು. ಆದರೆ ಮನೆಗೆ ಹಾಕಿಸಿದ್ದ ಲೈಟಿಂಗ್ಸ್‌ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರೋ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್ ಪಾಳಯ ಕರೆಂಟ್ ಕಳ್ಳತನದ ಆರೋಪ ಹೊರಿಸಿತ್ತು. ಇದು ಕಾಂಗ್ರೆಸ್​ ಮತ್ತು ಕುಮಾರಸ್ವಾಮಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ಈ ಕರೆಂಟ್​ ವಾರ್​, ಮತ್ತೊಂದು ಹಂತ ತಲುಪಿದೆ.

ಕರೆಂಟ್​ ಕಳ್ಳ ಕುಮಾರಸ್ವಾಮಿ ಎಂಬ ಪೋಸ್ಟರ್​ ಸದ್ದು

ಈ ಹಿಂದೆಯೂ ರಾಜ್ಯ ರಾಜಕೀಯದಲ್ಲಿ ಪೋಸ್ಟರ್​ ಸದ್ದು ಮಾಡಿತ್ತು. ಇದೀಗ ಕುಮಾರಸ್ವಾಮಿಗೆ ಪೋಸ್ಟರ್​ ಪಂಚ್​ ನೀಡಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆ.ಪಿ.ಭವನದ ಕಾಂಪೌಂಡ್​ಗೆ ಯಾರೋ ಕಿಡಿಗೇಡಿಗಳು ವಿದ್ಯುತ್​ ಕಳ್ಳ ಕುಮಾರಸ್ವಾಮಿ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಕರೆಂಟ್​ ಕದ್ದರೂ ಕುಮಾರಸ್ವಾಮಿಯವರ ಪ್ರಾಮಾಣಿಕತೆಯನ್ನು ಮೆಚ್ಚಬೇಕು. ‘ಕರೆಂಟ್​ ಕಳ್ಳ ಕುಮಾರಸ್ವಾಮಿ’ ಎಂಬ ಬರಹವಿರುವ ಪೋಸ್ಟರ್​ ಅಂಟಿಸಿದ್ದಾರೆ.

ಶ್ರೀರಾಂಪುರ ಪೊಲೀಸರಿಂದ ಪೋಸ್ಟರ್ ತೆರವು

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದ ಕಾಂಪೌಂಡ್ ಮೇಲೆ ವಿದ್ಯುತ್ ಕಳ್ಳ, ಕುಮಾರಸ್ವಾಮಿ ಎಂದು ವ್ಯಂಗ್ಯವಾಗಿ 8 ಪೋಸ್ಟರ್​ಗಳನ್ನು ಅಂಟಿಸಲಾಗಿತ್ತು. ಈ ವಿಷ್ಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶ್ರೀರಾಂಪುರ ಪೊಲೀಸರು, ಪೋಸ್ಟರ್​ಗಳನ್ನು ತೆರವು ಮಾಡಿದ್ದಾರೆ. ನಿನ್ನೆಯಿಂದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿಗೆ ವಿದ್ಯುತ್‌ ಕಳ್ಳತನದ ಆರೋಪ ಮುಜುಗರ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್, ಕುಮಾರಸ್ವಾಮಿ ಕರೆಂಟ್ ಕಳ್ಳತನ ಫೈಟ್‌ಗೆ ಹೊಸ ಟ್ವಿಸ್ಟ್.. ಜೆಡಿಎಸ್‌ ಕಾಂಪೌಂಡ್‌ಗೆ ಪೋಸ್ಟರ್ ಅಂಟಿಸಿ ವ್ಯಂಗ್ಯ

https://newsfirstlive.com/wp-content/uploads/2023/11/hd-kumaraswamy-2.jpg

Load More