/newsfirstlive-kannada/media/post_attachments/wp-content/uploads/2025/07/lahari.jpg)
ಸರಿಗಮಪ ಖ್ಯಾತಿಯ ಲಹರಿ ಮಹೇಶ್ಗೆ ಬಂಪರ್ ಆಫರ್ ಒಲಿದು ಬಂದಿದೆ. ಈಗಾಗಲೇ ಸರಿಗಮಪ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಶಿವಾನಿ ವಿನ್ನರ್ ಆಗಿದ್ದು, ಆರಾಧ್ಯಾ ರಾವ್ ರನ್ನರ್ ಆಗಿದ್ದಾರೆ. ಆದ್ರೆ, ಈ ಬಾರಿಯ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಲಹರಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಲಹರಿ ಫಿನಾಲೆಯಲ್ಲಿ ಇರಲೇಬೇಕು ಅನ್ನೋ ಕೂಗು ಜೋರಾಗಿತ್ತು.
ಇದನ್ನೂ ಓದಿ: ಬೆಂಗಳೂರು ಭಾಗದಲ್ಲಿ ಕೈಕೊಟ್ಟ ಮಳೆ! ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ..!
ಒಟ್ಟು ಆರು ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದರು. ಅವರಲ್ಲಿ ಮೈಸೂರಿನ ಲಹರಿ ಇರ್ಬೇಕಿತ್ತು. ಅತ್ಯುತ್ತಮ ಪ್ರತಿಭೆ ಲಹರಿ. ಕನ್ನಡದ ಭವಿಷ್ಯದ ಶ್ರೇಯಾ ಘೋಷಲ್ ಲಹರಿ ಪುಟ್ಟ. ಪ್ರಾರಂಭದಿಂದಲೂ ಅದ್ಭುತವಾಗಿ ಹಾಡಿರೋ ಲಹರಿ ಫಿನಾಲೆಗೆ ಕೈಬಿಟ್ಟದ್ದು ಸರಿಯಲ್ಲ. ಲಹರಿ ಸರಿಗಮಪ ಜರ್ನಿ ಮನಮುಟ್ಟುತ್ತಿತ್ತು. ಸೆಮಿ ಫಿನಾಲೆಯಲ್ಲಿ ಗಂಟಲು ಡ್ರೈ ಆಗಿದ್ದಕ್ಕೆ ಕೊಂಚ ಆ ಕಡೆ ಈ ಕಡೆ ಆದ್ರೂ ಇಷ್ಟು ಜರ್ನಿಯಲ್ಲಿ ಲಹರಿ ಪುಟ್ಟ ನಮ್ಮ ಮನಸ್ಸು ಗೆದ್ದಿದ್ದಳು. ಸೀಕ್ರೆಟ್ ಸ್ಕೋರ್ ಹೇಗೆ ಕೊಟ್ರಿ? ಸ್ಕ್ರಿಪ್ಟೆಡ್ ಶೋ. ಅಂತೆಲ್ಲಾ ನೂರಾರು ಕಾಮೆಂಟ್ಗಳ ಮೂಲಕ ಬೇಸರ ಹೊರ ಹಾಕಿದ್ದರು ವೀಕ್ಷಕರು.
14 ವರ್ಷದ ಲಹರಿ ಮಹೇಶ್ ಮೈಸೂರಿನ ಪ್ರತಿಭೆ. ನಾಗಾರಾಜ್ ಟೀಮ್ಗೆ ಆಯ್ಕೆ ಆಗಿದ್ರು. ಸರಿಗಮಪ ಸೀಸನ್ಗೆ ಗೆಸ್ಟ್ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದರು. ಶೋ ಫಿನಾಲೆಗೆ ಬರದಿದ್ರು ದೇಶ ಮೆಚ್ಚುವಂತೆ ಸಾಧನೆ ಮಾಡು ಲಹರಿ ಭವಿಷ್ಯದ ಸೂಪರ್ ಸ್ಟಾರ್ ಶ್ರೇಯಾ ಘೋಷಾಲ್ ಅಂತ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದರು. ಅಷ್ಟೇ ಅಲ್ಲದೇ ಸೆಮಿ ಫಿನಾಲೆಯಲ್ಲಿ ಅರ್ಜುನ್ ಜನ್ಯ ಸಿನಿಮಾಗೆ ಹಾಡಲು ಲಹರಿಗೆ ಆಫರ್ ಕೊಟ್ಟಿದ್ದರು. ಇದೀಗ ಕೊಟ್ಟ ಮಾತಿನಂತೆ ಲಹರಿಗೆ ಕನ್ನಡದ ಸಿನಿಮಾದಲ್ಲಿ ಹಾಡುವ ಅವಕಾಶ ಕೊಟ್ಟಿದ್ದಾರೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ.
View this post on Instagram
ಅರ್ಜುನ್ ಜನ್ಯ ಅವರು ತಮ್ಮ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕಿ ಲಹರಿಗೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ಲಹರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ಈ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಸರ್’ ಎಂದು ಲಹರಿ ಬರೆದುಕೊಂಡು ಅರ್ಜುನ್ ಜನ್ಯ ಜೊತೆಗಿನ ಮತ್ತು ರೆಕಾರ್ಡ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಟ್ರೋಫಿ ಮುಖ್ಯ ಅಲ್ಲ, ಕಲೆ ಮುಖ್ಯ, ಸೋತು ಗೆದ್ದವಳು ನಮ್ಮ ಲಹರಿ, ತುಂಬಾ ಖುಷಿ ಆಯ್ತು ಅರ್ಜುನ್ ಜನ್ಯ ಸರ್ ಧನ್ಯವಾದಗಳು, ಸೋಲೆ ಗೆಲುವಿನ ಮೆಟ್ಟಿಲು ನಿನ್ನ ಗೆಲುವು ನೋಡಲು ಕಾಯುತ್ತಿದ್ದೇವೆ ಅಂತ ಕಾಮೆಂಟ್ಸ್ಗಳನ್ನು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ