/newsfirstlive-kannada/media/post_attachments/wp-content/uploads/2024/10/diya.jpg)
ಸರಿಗಮಪ ಸೀಸನ್ 19ರ ಪೋರಿ ದಿಯಾ ಹೆಗ್ಡೆ ಪ್ರತಿಭೆಗೆ ತಲೆದೂಗದವರೇ ಇಲ್ಲ. ಈ ಪುಟಾಣಿ ಹಾಡು, ಡ್ಯಾನ್ಸ್ ಪ್ರೆಸೆಂಟ್ ಮಾಡೋ ರೀತಿ ನಿಜಕ್ಕೂ ಅದ್ಭುತ. ಮುಗ್ಧ ನಗುವಿನ ದಿಯಾ ಹೆಗ್ಡೆ ಮೋಡಿಗೆ ವೀಕ್ಷಕರು ಫಿದಾ ಆಗಿದ್ರು. ದಿಯಾಗೆ ಹಿರಿಯರು-ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗ ಇದೆ.
ಇದನ್ನೂ ಓದಿ:ಹಿಂದಿ ರಿಯಾಲಿಟಿ ಶೋನಲ್ಲೂ ದಿಯಾ ಹೆಗ್ಡೆಯದ್ದೇ ಹವಾ; ಕನ್ನಡದ ಪುಟಾಣಿ ಕ್ಯೂಟ್ ವಿಡಿಯೋ ಇಲ್ಲಿದೆ!
ತನ್ನ ಪ್ರತಿಭೆ ಮೂಲಕ ಮನರಂಜನೆ ನೀಡುತ್ತಿದ್ದಾಳೆ ಈ ಪೋರಿ ದಿಯಾ. ಜೊತೆಗೆ ‘ಇಂಡಿಯನ್ ಐಡಲ್ 14 ಗ್ರ್ಯಾಂಡ್ ಫಿನಾಲೆ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಕಮಾಲ್ ಮಾಡುತ್ತಾ ಇರುತ್ತಾಳೆ. ಸೋನು ನಿಗಮ್ ಅವರು ಸಿಂಗಿಂಗ್ ರಿಯಾಲಿಟಿ ಶೋಗೆ ಅತಿಥಿಯಾಗಿ ಬರೋದು ಅಪರೂಪ. ಅದರಲ್ಲೂ ಈ ಶೋಗೆ ದಿಯಾ ಬಂದಿದ್ದು ಇನ್ನೂ ವಿಶೇಷ.
View this post on Instagram
ಜೀ ಕನ್ನಡ ಸರಿಗಮಪ ಸೀಸನ್ 10ರ ಫೈನಲಿಸ್ಟ್ ಆಗಿದ್ದ ದಿಯಾ ಹೆಗ್ಡೆ ವಿಭಿನ್ನವಾದ ಹಾಡು, ಡ್ಯಾನ್ಸ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದರು. ರಕ್ಷಿತಾ ಪ್ರೇಮ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಂಸಲೇಖ ಕೂಡ ಈ ಪೋರಿಯ ಹಾಡು ಕೇಳಿ ಚಪ್ಪಾಳೆ ತಟ್ಟಿ ಭೇಷ್ ಎಂದಿದ್ದರು. ಇದರ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ವೀವ್ ಆಗಿದ್ದಾರೆ ಪುಟ್ಟ ಹುಡುಗಿ ದಿಯಾ. ಹೊಸ ಹೊಸ ಫೋಟೋಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ.
ಈ ಮಧ್ಯೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾಳೆ ದಿಯಾ. ನವರಾತ್ರಿ ಹಬ್ಬದ ಪ್ರಯುಕ್ತ ದೇವಿಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಲುಕ್ನಲ್ಲಿ ತುಂಬಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪುಟ್ಟ ಹುಡುಗಿ ದಿಯಾಳ ಬಗ್ಗೆ ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್ ಹಾಕಿದ್ದಾರೆ. ಬೇಬಿ ಶ್ಯಾಮಿಲಿ ಅವರನ್ನ ನೋಡಿದ ಹಾಗೆ ಆಯ್ತು, ಸೂಪರ್ ದಿಯಾ ಅಂತಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ