/newsfirstlive-kannada/media/post_attachments/wp-content/uploads/2025/06/sarigama.jpg)
ವೀಕ್ಷಕರ ನೆಚ್ಚಿನ ಶೋ ಮುಕ್ತಾಯ ಹಂತದಲ್ಲಿದೆ. ಇನ್ನೂ ಒಂದು ವಾರದಲ್ಲಿ ಸರಿಗಮಪ ಶೋ ಅಂತ್ಯವಾಗಲಿದೆ. ಇಷ್ಟು ದಿನ ಸ್ಪರ್ಧಿಗಳು ತಮ್ಮ ಹಾಡುಗಳ ಮೂಲಕವೇ ವೀಕ್ಷಕರ ಮನಸ್ಸಿಗೆ ಮುದ ನೀಡುತ್ತಿದ್ದರು. ಇದೀಗ ಟಾಪ್ 6 ಸ್ಪರ್ಧಿಗಳಿಗೆ ಅಗ್ನಿ ಪರೀಕ್ಷೆ ಶುರುವಾಗಿದೆ.
ಇದನ್ನೂ ಓದಿ:ಸ್ಟಾರ್ ನಟನ ಹೆಂಡತಿಯ ಬ್ಯುಸಿನೆಸ್ ಐಡಿಯಾ.. ಕೇವಲ ನಿದ್ದೆ ಮಾಡಲು ಲಕ್ಷ ಲಕ್ಷ ಹಣ, ಭಾರೀ ಟೀಕೆ!
ಹೌದು, ಸರಿಗಮಪ ವೇದಿಕೆಯಲ್ಲಿ ಪ್ರತಿಭೆಗಳ ಮಹಾ ಅನ್ವೇಷಣೆ ನಡೀತಿದೆ. ನಾಡಿನ ನಾನಾ ಭಾಗದ ಗಾನ ಕೋಗಿಲೆಗಳು ವೇದಿಕೆಗಾಗಿ ಹಂಬಲಿಸುತ್ತಾ ಅವಕಾಶ ಅರಸಿ ಬಂದವರು ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಸರಿಗಮಪ ರಿಯಾಲಿಟಿ ಶೋ ಫಿನಾಲೆ ಹತ್ತಿರ ಬರುತ್ತಿದ್ದಂತೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗುತ್ತಿದೆ.
ಅದರ ಜೊತೆಗೆ ಸ್ಪರ್ಧಿಗಳ ನಡುವಿನ ಕಠಿಣ ಪೈಪೋಟಿ ನಡೆಯುತ್ತಿದೆ. ಈ ವಾರ ನಡೆಯಲಿರುವ ‘ಟಿಕೆಟ್ ಟು ಫಿನಾಲೆ’ಯಲ್ಲಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ಬಾಳು ಬೆಳಗುಂದಿ, ದ್ಯಾಮೇಶ, ರಶ್ಮಿ ಡಿ, ಅಮೋಘ ವರ್ಷ, ಶಿವಾನಿ ಮತ್ತು ಆರಾಧ್ಯ ರಾವ್ ಆಯ್ಕೆಯಾಗಿದ್ದಾರೆ. ಈ ಆರು ಮಂದಿ ಅದ್ಭುತ ಹಾಡುಗಾರರು. ಈ ಆರು ಸ್ಪರ್ಧಿಗಳಲ್ಲಿ ಸರಿಗಮಪ ವಿನ್ನರ್ ಪಟ್ಟ ಯಾರಿಗೆ ಸೇರಲಿದೆ ಎಂದು ಮುಂದಿನ ವಾರ ಗೊತ್ತಾಲಿದೆ. ಶನಿವಾರ ಹಾಗೂ ಭಾನುವಾರದ ಎಪಿಸೋಡ್ನಲ್ಲಿ ಪ್ರೀ ಫಿನಾಲೆ ನಡೆದಿದೆ. ಅದರಲ್ಲೂ ಎಲ್ಲಾ ಸ್ಪರ್ಧಿಗಳು ಅದ್ಭುತವಾಗಿ ಹಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ