/newsfirstlive-kannada/media/post_attachments/wp-content/uploads/2024/11/Varna-Chawan5.jpg)
ಸರಿಗಮಪ ಅದೇಷ್ಟೋ ಪ್ರತಿಭೆಗಳನ್ನು ಬೆಳಕಿಗೆ ತಂದಿರೋ ವೇದಿಕೆ. ಸಹಸ್ರಾರೂ ಹಾಡು ಕನಸುಗಳಿಗೆ ಧನಿಯಾದ ಮಾಂತ್ರಿಕ ಕಾರ್ಯಕ್ರಮ. ಇದೇ ವೇದಿಕೆ ಮೂಲಕ ಬದುಕಟ್ಟಿಕೊಂಡ ಚಲುವೆ ವರ್ಣಾ ಚವಾಣ್. ತಮ್ಮ ಇಂಪಾದ ಧ್ವನಿ ಮೂಲಕ ಕನ್ನಡದ ಕಂಪನ್ನ ಪಸರಿಸಿದ್ದರು.
/newsfirstlive-kannada/media/post_attachments/wp-content/uploads/2024/11/Varna-Chawan4.jpg)
ಸರಿಗಮಪ ಚಾಂಪಿಯನ್​ಶಿಪ್​ನ ಫಸ್ಟ್ ರನ್ನರಪ್ ಕೂಡ ಆಗಿದ್ದರು​. ಅಲ್ಲಿಂದ ಹಲವಾರು ವೇದಿಕೆ ಮೂಲಕ ರಂಜಿಸುತ್ತಿದ್ದಾರೆ ಗಾಯಕಿ ವರ್ಣಾ ಚವಾಣ್. ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲೂ ಧಮಾಕಾ ಮಾಡಿದ್ದರ ವರ್ಣಾ. ಇದೀಗ ಸರಿಗಮಪದ ಬೆಡಗಿ ವರ್ಣಾ ಚವಾಣ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳಯನ ಜೊತೆಗೆ ಸೆಪ್ಟೆಂಬರ್ 16ರಂದು ಮದುವೆ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/11/Varna-Chawan3.jpg)
ವರ್ಣಾ ಹೊಸ ಬಾಳಿಗೆ ಜೊತೆಯಾದ ಜೋಡಿ ಎಆರ್​ ಬಾಲಾಜಿ. ಮೂಲತಹ ತಮಿಳುನಾಡಿನ ಹುಡುಗ. ಸಂಗೀತ ಪ್ರಿಯ. ಹಾಡುಗಾರ, ಅದ್ಭುತವಾದ ಪಿಟೀಲು ವಾದಕರಾಗಿದ್ದಾರೆ. ಇಬ್ಬರ ಟೆಸ್ಟ್ ಜೊತೆಗೆ ಮನಸ್ಸು ಮ್ಯಾಚ್ ಆಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಈ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
View this post on Instagram
ಈ ಮದವೆ ವಿಶೇಷ ಅಂದ್ರೇ ಮ್ಯೂಜಿಕ್​ ಮಾಂತ್ರಿಕ ಸಂಗೀತ ದಂತಕಥೆ ಎಆರ್​ ರೆಹಮಾನ್ ಅವರು ನವ ಜೋಡಿಗೆ ಶುಭ ಕೋರಿದ್ದಾರೆ. ಮದುವೆಗೆ ಇನ್​ವೈಟ್​ ಮಾಡಿದ ಜೋಡಿಯನ್ನ ಕುರಿಸಿಕೊಂಡು ವಿಶ್​ ಮಾಡಿರೋ ಫೋಟೋಗಳನ್ನ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ ವರ್ಣಾ. ಇನ್​ಫ್ಯಾಕ್ಟ್​ ಬಾಲಾಜಿ ಅವರು ರೆಹಮಾನ್ ಸರ್​ ಗರಡಿಯಲ್ಲಿ ಪಳಗಿರೋ ಪ್ರತಿಭೆ.
/newsfirstlive-kannada/media/post_attachments/wp-content/uploads/2024/11/Varna-Chawan2.jpg)
ಮ್ಯಾರಿಡ್​ ಲೈಫ್​ನ ಎಂಜಾಯ್​ ಮಾಡ್ತಿರೋ ವರ್ಣಾಗೆ ನಿಜಕ್ಕೂ ಇದೊಂದು ಸ್ಪೆಷಲ್​ ಕ್ಷಣವಾಗಿದೆ. ರೆಹೆಮಾನ್​ ಸರ್​ ಒಂದ್ ಸ್ಮೈಲ್​ಗೋಸ್ಕರ ಕಾಯೋ ಅದೇಷ್ಟೋ ಅಭಿಮಾನಿಗಾಳಿದ್ದಾರೆ. ಅಂತಹದ್ರಲ್ಲಿ ನಮ್ಮ ಜೋಡಿಗೆ ಅವರ ಆಶೀರ್ವಾದ ಸಿಕ್ಕಿದೆ. ಪುಣ್ಯ ಮಾಡಿದ್ದೀವಿ ಎಂದು ಸಂಭ್ರಮಿಸಿದ್ದಾರೆ ಗಾಯಕಿ. ನಮ್ಮ ಕಡೆಯಿಂದಲೂ ನವ ಜೋಡಿಗೆ ಮದುವೆಯ ಶುಭಾಶಯಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us