/newsfirstlive-kannada/media/post_attachments/wp-content/uploads/2025/06/SHIVANI.jpg)
ಕನ್ನಡದ ಸರಿಗಮಪ ಸೀಸನ್ 21ರಲ್ಲಿ ಬೀದರ್‌ನ ಶಿವಾನಿ ಸ್ವಾಮಿ ಅದ್ಭುತವಾಗಿ ಹಾಡುವ ಮೂಲಕ ಇಡೀ ರಾಜ್ಯದ ಜನರನ್ನು ಸೆಳೆದು ಕೊನೆಗೆ ವಿನ್ನರ್ ಆಗಿದ್ದರು. ಈ ಸಲದ ಸರಿಗಮಪ ಟ್ರೋಫಿ ಮುಡಿಗೇರಿಸಿಕೊಂಡ ಶಿವಾನಿ ಅವರು ಹಲವು ಅಚ್ಚರಿ ಬಹುಮಾನಗಳನ್ನು ಪಡೆದಿದ್ದರು. ಇದರ ಬೆನ್ನಲ್ಲೇ 15 ಲಕ್ಷ ರೂಪಾಯಿ ಮೌಲದ್ಯದ ಚಿನ್ನದ ನಾಣ್ಯಗಳನ್ನು ಶಿವಾನಿ ಸ್ವಾಮಿಗೆ ನೀಡಲಾಗಿದೆ.
ಸರಿಗಮಪ ಸೀಸನ್ 21 ಅದ್ಧೂರಿಯಾಗಿ ಅಂತ್ಯ ಕಂಡಿದೆ. ನಾಡಿನ ನಾನಾ ಭಾಗದ ಗಾನ ಕೋಗಿಲೆಗಳು ವೇದಿಕೆಗಾಗಿ ಹಂಬಲಿಸುತ್ತಾ ಅವಕಾಶ ಅರಸಿ ಬಂದವರು ಒಳ್ಳೆಯ ಪ್ರದರ್ಶನ ನೀಡಿದ್ದರು. ಇದರಲ್ಲಿ ಬೀದರ್‌ನ ಶಿವಾನಿ ಸ್ವಾಮಿ ಮೊದಲ ಸ್ಥಾನ ಪಡೆದು ಗೆಲುವು ಸಾಧಿಸಿದ್ದರು. ಇನ್ನುಳಿದಂತೆ ಉಡುಪಿಯ ಆರಾಧ್ಯ ರಾವ್ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿದ್ರೆ, ಮೈಸೂರಿನ ರಶ್ಮಿ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಫಿನಾಲೆ ತಲುಪಿದ್ದ 6 ಸ್ಪರ್ಧಿಗಳಿಗೆ ಹಲವಾರು ಬಹುಮಾನಗಳನ್ನ ನೀಡಲಾಗಿತ್ತು.
ಅದರಂತೆ ಮೊದಲ ಸ್ಥಾನ ಪಡೆದಿರುವ ವಿಜೇತೆ ಶಿವಾನಿಗೆ 15 ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಲಾಗಿದೆ. ವೈಟ್ ಗೋಲ್ಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಬಾಬು ಸಿ.ಜೆ ಅವರು ಸರಿಗಮಪ ಸೀಸನ್ 21ರ ವಿಜೇತೆ ಶಿವಾನಿಗೆ 15,00,000 ಮೌಲ್ಯದ ಬಂಗಾರದ ನಾಣ್ಯವನ್ನು ನೀಡಿ ಗೌರವಿಸಿದರು. ಅಲ್ಲದೆ, ಉಳಿದ ಸ್ಪರ್ಧಿಗಳಿಗೂ ಆಶ್ಚರ್ಯಕರ ನಗದು ಬಹುಮಾನಗಳನ್ನು ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಇದನ್ನೂ ಓದಿ:ಶಿವರಾಜ್‌ಕುಮಾರ್ ಜೀವನ ಚರಿತ್ರೆ ರಿಲೀಸ್.. ಸಮಾರಂಭದಲ್ಲಿ ಚಿರ ಯುವಕನಂತೆ ಹಾಡಿಕುಣಿದ ಕರುನಾಡ ಚಕ್ರವರ್ತಿ
ಈ ಟ್ರೋಫಿಯ ಜೊತೆಗೆ ಪರ್ಫಾಮರ್ ಆಫ್ ದಿ ಸೀಸನ್ ಪ್ರಶಸ್ತಿ ಕೂಡ ಶಿವಾನಿ ಸ್ವಾಮಿ ಪಾಲಾಗಿತ್ತು. ಇದಕ್ಕಾಗಿ ಶಿವಾನಿ ಅವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗಿಫ್ಟ್ ಆಗಿ ನೀಡಲಾಗಿತ್ತು. ಸ್ಪರ್ಧಿಯ ಅದ್ಭುತ ಪ್ರಯಾಣಕ್ಕೆ ಸಲ್ಲುತ್ತಿರುವ ಬಹುಮಾನವಾಗಿದೆ. ಇಷ್ಟು ವರ್ಷದಿಂದ ಈ ಟ್ರೋಫಿಗಾಗಿ ಕಾಯುತ್ತಾ ಇದ್ದೆ. ಕೊನೆಗೂ ಕೈಸೇರಿದೆ. ತಂದೆ, ತಾಯಿ, ಗುರುಗಳು ಹಾಗೂ ಕನ್ನಡಿಗರ ಆಶೀರ್ವಾದದಿಂದ ವಿನ್ನರ್ ಆಗಿದ್ದೇನೆ ಎಂದು ಶಿವಾನಿ ಹೇಳಿಕೊಂಡಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ