BBK11: ಮನೆಗೆ ಬಂದ ಕೆಲವೇ ಹೊತ್ತಲ್ಲಿ ಹನುಮಂತನಿಗೆ ಖುಲಾಯಿಸದ ಅದೃಷ್ಟ; ಬಿಗ್​ಬಾಸ್​ ನಿರ್ಧಾರಕ್ಕೆ ಮನೆಮಂದಿ ಶಾಕ್

author-image
Veena Gangani
Updated On
BBK11: ಭಲೇ ಹನುಮಂತ.. ಕಿಲಾಡಿ ಆಟಕ್ಕೆ ಬೆಚ್ಚಿ ಬಿದ್ದ ಬಿಗ್ ಬಾಸ್‌ ಮನೆಯ ಸದಸ್ಯರು; ಆಗಿದ್ದೇನು?
Advertisment
  • ದೊಡ್ಮನೆಯ 14 ಸ್ಪರ್ಧಿಗಳಿಗೆ ಶಾಕ್​​ ಕೊಟ್ಟ ಬಿಗ್​ಬಾಸ್​
  • ಬಿಗ್​ಬಾಸ್​ ಮನೆಗೆ ಮೊದಲ ವೈಲ್ ಕಾರ್ಡ್​ ಎಂಟ್ರಿ
  • ಜಗದೀಶ್​ ರಂಜಿತ್ ಹೊರ ಬಂದ ಬೆನ್ನಲ್ಲೆ ಗಾಯಕ ಎಂಟ್ರಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಗೆ ಮೊದಲ ವೈಲ್ ಕಾರ್ಡ್​ ಎಂಟ್ರಿ ಆಗಮನವಾಗಿದೆ.

ಇದನ್ನೂ ಓದಿ:ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿಯನ್ನು ತಬ್ಬಿ ಅತ್ತ ಸುದೀಪ್​.. ಅಮ್ಮನನ್ನು ಕಳೆದುಕೊಂಡ ಮಾಣಿಕ್ಯ

publive-image

ಹೌದು, ಈಗಾಗಲೇ ಬಿಗ್​ಬಾಸ್​ ಮನೆಯಲ್ಲಿ 14 ಸ್ಪರ್ಧಿಗಳು ಉಳಿದುಕೊಂಡಿದ್ದರು. ಇದೀಗ ಆ ಸ್ಪರ್ಧಿಗಳ ಜೊತೆಗೆ ಮತ್ತೊಂದು ವೈಲ್ ಕಾರ್ಡ್​ ಎಂಟ್ರಿಯಾಗಿದೆ. ಬಿಗ್​ಬಾಸ್​ ಮನೆಗೆ ಗಾಯಕ ಹನುಮಂತ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಒಲಿದಿದೆ. ಮೂರನೇ ವಾರ ವೈಲ್ಡ್‌ ಕಾರ್ಡ್‌ ಆಗಿ ಬಂದ ಸ್ಪರ್ಧಿಯನ್ನೇ ಬಿಗ್​ಬಾಸ್​ ಕ್ಯಾಪ್ಟನ್ ಎಂದು ಘೋಷಣೆ ಮಾಡಿದ್ದರು. ಈ ಘೋಷಣೆಯಿಂದ ಮನೆಯಲ್ಲಿನ ಎಲ್ಲಾ ಸದಸ್ಯರು ಒಂದು ಕ್ಷಣ ಶಾಕ್ ಆಗಿದ್ದಾರೆ.

publive-image

publive-image

ಇನ್ನು, ಬಿಗ್​ ಮನೆಯಲ್ಲಿ ಗಲಾಟೆ ಉಂಟಾದ ಕಾರಣ ವಾರದ ಮಧ್ಯೆಯೇ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರ ಬಂದಿದ್ದರು. ಹಾಗಾಗಿ ಈ ವಾರ ಮನೆಯಿಂದ ಮತ್ತೊಬ್ಬರು ಹೊರ ಹೋಗುವುದು ಅನುಮಾನವಾಗಿದೆ. ಮೊದಲನೇ ವಾರ ಹಂಸ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಎರಡನೇ ವಾರ ಶಿಶಿರ್ ಮನೆಯ ಕ್ಯಾಪ್ಟನ್ ಆಗಿದ್ದರು. ಇದೀಗ ಬಿಗ್​ಬಾಸ್​ ಮನೆಗೆ ವೈಲ್ಡ್‌ ಕಾರ್ಡ್‌ ಆಗಿ ಎಂಟ್ರಿ ಕೊಟ್ಟ ಗಾಯಕ ಹನುಮಂತ ಕ್ಯಾಪ್ಟನ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment