/newsfirstlive-kannada/media/post_attachments/wp-content/uploads/2025/06/lahari1.jpg)
ಸರಿಗಮಪ ಅದ್ಧೂರಿ ಫಿನಾಲೆಗೆ ಕೌಂಟ್ಡೌನ್ ಶುರುವಾಗಿದೆ. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದಾರೆ. ಆದ್ರೆ ಇಬ್ಬರು ಸ್ಪರ್ಧಿ ಬಗ್ಗೆ ಜನ ಬೇಸರ ಹೋರ ಹಾಗ್ತಿದ್ದಾರೆ. ಇವರು ಫಿನಾಲೆಯಲ್ಲಿ ಇರಲೇಬೇಕು ಅನ್ನೋ ಕೂಗು ಜೋರಾಗಿದೆ.
ಇದನ್ನೂ ಓದಿ:ಆಟೋ ಡ್ರೈವರ್ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ
ಹೌದು, ಒಟ್ಟು ಆರು ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದಾರೆ ತಲುಪಿದ್ದಾರೆ. ಇವರಲ್ಲಿ ಮೈಸೂರಿನ ಲಹರಿ ಇರ್ಬೇಕಿತ್ತು. ಅತ್ಯುತ್ತಮ ಪ್ರತಿಭೆ ಲಹರಿ. ಕನ್ನಡದ ಭವಿಷ್ಯದ ಶ್ರೇಯಾ ಘೋಷಲ್ ಲಹರಿ ಪುಟ್ಟ. ಪ್ರಾರಂಭದಿಂದಲೂ ಅದ್ಭುತವಾಗಿ ಹಾಡಿರೋ ಲಹರಿ ಫಿನಾಲೆಗೆ ಕೈಬಿಟ್ಟದ್ದು ಸರಿಯಲ್ಲ. ಇದು ಮೋಸ ಅಂತ ವೀಕ್ಷಕರು ಆಕ್ರೋಶ ಹೊರ ಹಾಕ್ತಿದ್ದಾರೆ.
ಶೋಗೆ ಅದರದೇ ಆದ ಆಯ್ಕೆಯ ಫಾರ್ಮೆಟ್ ಇರಬಹುದು, ಆದ್ರೆ ಲಹರಿ ಸರಿಗಮಪ ಜರ್ನಿ ಮನಮುಟ್ಟುವಂತಹದ್ದು. ಸೆಮಿ ಫಿನಾಲೆಯಲ್ಲಿ ಗಂಟಲು ಡ್ರೈ ಆಗಿದ್ದಕ್ಕೆ ಕೊಂಚ ಆ ಕಡೆ ಈ ಕಡೆ ಆದ್ರೂ ಇಷ್ಟು ಜರ್ನಿಯಲ್ಲಿ ಲಹರಿ ಪುಟ್ಟ ನಮ್ಮ ಮನಸ್ಸು ಗೆದ್ದಿದ್ದಾಳೆ. ಸೀಕ್ರೆಟ್ ಸ್ಕೋರ್ ಹೇಗೆ ಕೊಟ್ರಿ? ಸ್ಕ್ರಿಪ್ಟೆಡ್ ಶೋ. ಅಂತೆಲ್ಲಾ ನೂರಾರು ಕಾಮೆಂಟ್ಗಳ ಮೂಲಕ ಬೇಸರ ಹೊರ ಹಾಕ್ತಿದ್ದಾರೆ ವೀಕ್ಷಕರು.
14 ವರ್ಷದ ಲಹರಿ ಮಹೇಶ್ ಮೈಸೂರಿನ ಪ್ರತಿಭೆ. ನಾಗಾರಾಜ್ ಟೀಮ್ಗೆ ಆಯ್ಕೆ ಆಗಿದ್ರು. ಸರಿಗಮಪ ಸೀಸನ್ಗೆ ಗೆಸ್ಟ್ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದಾರೆ. ಇನ್ಫ್ಯಾಕ್ಟ್ ಸೆಮಿ ಫಿನಾಲೆಯಲ್ಲಿ ಅರ್ಜುನ್ ಜನ್ಯ ಅವರು ಸಿನಿಮಾಗೆ ಹಾಡಲು ಲಹರಿಗೆ ಆಫರ್ ಕೊಟ್ಟಿದ್ದಾರೆ. ಲಹರಿ ಹಾಗೂ ಸಂಚಿತ್ ಹೆಗ್ಡೆ ಅವರನ್ನ ಹೊಲಿಸುತ್ತಿದ್ದು, ಶೋ ಫಿನಾಲೆಗೆ ಬರದಿದ್ರು ದೇಶ ಮೆಚ್ಚುವಂತೆ ಸಾಧನೆ ಮಾಡು ಲಹರಿ ಭವಿಷ್ಯದ ಸೂಪರ್ ಸ್ಟಾರ್ ಶ್ರೇಯಾ ಘೋಷಾಲ್ ಅಂತ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
View this post on Instagram
ಇನ್ನೂ, ಲಹರಿ ಕೂಡ ವಿಡಿಯೋ ಬೈಟ್ ರಿಲೀಸ್ ಮಾಡಿದ್ದು, ಇಷ್ಟು ದಿನ ಸಪೋರ್ಟ್ ಮಾಡಿದ್ದ ಸಂಗೀತ ಪ್ರಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಒಟ್ಟಿನಲ್ಲಿ ಸೆಮಿ ಫಿನಾಲೆ ಮುಗಿದು ವಾರ ಕಳೆದ್ರು ಲಹರಿ ಪರ ಚರ್ಚೆ ಆಗ್ತಾನೆ ಇದೆ. ಸೋಲು ಗೆಲುವು ಇದ್ದಿದ್ದೇ ಆದ್ರೇ ಜನರ ಮನಸ್ಸು ಗೆಲ್ಲೋದು ಮುಖ್ಯ, ಈ ವಿಚಾರದಲ್ಲಿ ಲಹರಿ ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ