/newsfirstlive-kannada/media/post_attachments/wp-content/uploads/2025/06/SUNIL-AMRUTHA.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ದಿನದಿಂದ ದಿನಕ್ಕೆ ಬ್ಯಾಚುಲರ್ಸ್ಗಳು ಸಖತ್ ಪರ್ಫಾರ್ಮೆನ್ಸ್ ನೀಡುತ್ತಾರೆ.
ಇದನ್ನೂ ಓದಿ: ಪ್ರಸಿದ್ಧ ದೇಗುಲದ ಹುಂಡಿಗೆ 4 ಕೋಟಿ ಮೌಲ್ಯದ ಆಸ್ತಿ ಪತ್ರ ಹಾಕಿದ ನಿವೃತ್ತ ಸೇನಾಧಿಕಾರಿ.. ಕಾರಣ ಇಬ್ಬರು ಹೆಣ್ಮಕ್ಕಳು!
ಇದೀಗ ಎಲ್ಲ ಟಾಪ್ 10 ಮಂದಿ ಬ್ಯಾಚುಲರ್ಸ್ ತಮ್ಮ ಮೆಂಟರ್ಸ್ಗಳಿಗೆ ಸರ್ಪ್ರೈಸ್ಗಳನ್ನು ಕೊಟ್ಟಿದ್ದಾರೆ. ಹೌದು, ಈ ವಾರ ಬ್ಯಾಚುಲರ್ಸ್ಗಳಿಗೆ ಜಡ್ಜಸ್ ಟಾಸ್ಕ್ವೊಂದನ್ನು ಕೊಟ್ಟಿದ್ದರು. ಅದುವೇ ಪ್ರಪೋಸಲ್ ರೌಂಡ್.
ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಒಬ್ಬೋಬ್ಬರಾಗಿ ಬಂದು ತಮ್ಮ ಮೆಂಟರ್ಸ್ಗಳಿಗೆ ಬ್ಯಾಚುಲರ್ಸ್ ಪ್ರಪೋಸ್ ಮಾಡಿದ್ದಾರೆ. ಭಿನ್ನ ವಿಭಿನ್ನ ಥೀಮ್ನಲ್ಲಿ ವೇದಿಕೆ ರೆಡಿ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ. ಅದರಲ್ಲೂ ಈ ಬಾರಿ ಯಾವಾಗಲೂ ಲವ್ ಬರ್ಡ್ಸ್ಗಳ ತರ ಇರೋ ಸುನಿಲ್ ಹಾಗೂ ಅಮೃತಾ ಜೋಡಿಯನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
View this post on Instagram
ವೇದಿಕೆ ಮೇಲೆ ಅಮೃತಾಳ ಕಣ್ಣು ಮುಚ್ಚಿ ಕರೆದುಕೊಂಡು ಬಂದ ಸುನಿಲ್, ನನ್ನ ಪ್ರೀತಿಯ ಅಮ್ಮು ಹೂವಿನ ಲೋಕಕ್ಕೆ ಸ್ವಾಗತ. ಎಷ್ಟು ಚೆನ್ನಾಗಿ ಕಾಣ್ತಾ ಇದ್ದೀಯಾ ಗೊತ್ತಾ, ಯಾರದು ದೃಷ್ಟಿ ಬಿಳದಿರಲಿ. ನನ್ನ ಎಲ್ಲರೂ ದಡ್ಡ ಅಂದ್ರು ಆದ್ರೆ ನೀನು ಸುನಿಲ್ ಅನ್ನ ಸುನಿಲ್ನಾಗಿ ಎಲ್ಲರ ಮುಂದೆ ಕರೆದುಕೊಂಡು ಇಷ್ಟು ದಿನ ಬಂದಿದ್ದಿಯಾ. ನೀನು ಅಂದ್ರೆ ತುಂಬಾ ಇಷ್ಟ ಅಂತ ಮಂಡಿಯೂರಿ ಹೂವಿನ ಬೊಕ್ಕೆ ಕೊಟ್ಟು ಪ್ರಪೋಸ್ ಮಾಡಿದ್ದಾರೆ. ಇದನ್ನೇ ನೋಡಿದ ಜಡ್ಜಸ್ ಫುಲ್ ಥ್ರೀಲ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ