/newsfirstlive-kannada/media/post_attachments/wp-content/uploads/2025/06/sarfaraz-khan.jpg)
ಇಂಗ್ಲೆಂಡ್ ಪ್ರವಾಸಕ್ಕಾಗಿ ಮುಂಬೈಕರ್​​ ಸರ್ಫರಾಜ್​ ಖಾನ್​ ಭಾರೀ ಸಿದ್ಧತೆ ನಡೆಸಿದ್ರು. ತೂಕ ಕಡಿಮೆ ಮಾಡಿಕೊಂಡು, ತಿಂಗಳುಗಟ್ಟಲೇ ಅಭ್ಯಾಸ ನಡೆಸಿ ಸಿದ್ಧವಾಗಿದ್ರು. ಆದ್ರೆ ಸರ್ಫರಾಜ್​ ಕನಸು ಭಗ್ನವಾಯ್ತು. ಇದೀಗ ಭಾರತ ಎ ಪರ ಸಿಕ್ಕ ಅವಕಾಶದಲ್ಲೇ ಶತಕ ಸಿಡಿಸಿ ಸರ್ಫರಾಜ್​​​, ಕಡೆಗಣಿಸಿದ ಸೆಲೆಕ್ಷನ್ ಕಮಿಟಿಗೆ ಬ್ಯಾಟ್​​ನಿಂದ ಉತ್ತರಕೊಟ್ಟಿದ್ದಾರೆ.
ಸರ್ಫರಾಜ್ ಖಾನ್​, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್. ಸೆಲೆಕ್ಷನ್ ಕಮಿಟಿಯ ಕೃಪೆ ಇದಿದ್ರೆ, ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಆಡೋಕೆ ಸಜ್ಜಾಗಿ ನಿಂತಿದ್ರು. ಸರ್ಫರಾಜ್ ಖಾನ್​ಗೆ ಅನ್ಯಾಯ ಎಸಗಿದ್ದ ಸೆಲೆಕ್ಷನ್ ಕಮಿಟಿಗೆ ಟೂರ್​​ನಿಂದ ಡ್ರಾಪ್​ ಮಾಡ್ತು. ಕಾರಣವನ್ನೇ ನೀಡದೆ ತಂಡವನ್ನ ಕೈ ಬಿಟ್ಟ ಕಮಿಟಿಗೆ ಮುಂಬೈಕರ್ ಇದೀಗ ಖಡಕ್ ಅನ್ಸರ್ ನೀಡಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಸರ್ಫರಾಜ್​ ಸೆಂಚುರಿ..!
ಇಂಗ್ಲೆಂಡ್​ನ ಬೆಕನ್​ಹ್ಯಾಮ್​ನ ಇನ್​​​ಟ್ರಾ ಸ್ಕ್ಯಾಡ್​​ ಮ್ಯಾಚ್​ನಲ್ಲಿ ಸ್ಟಾರ್​ ಬ್ಯಾಟರ್​ಗಳೇ ಮಕಾಡೆ ಮಲಗಿದ್ದಾರೆ. ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ಸರ್ಫರಾಜ್ ಖಾನ್ ಶತಕ ಸಿಡಿಸಿ ಮಿಂಚಿದ್ದಾರೆ. ಅದ್ಭುತ ಬ್ಯಾಟಿಂಗ್ ನಡೆಸಿದ ಸರ್ಫರಾಜ್​ ಖಾನ್, ಟೀಮ್ ಇಂಡಿಯಾದ ಅನುಭವಿ ಬೌಲರ್​ಗಗಳನ್ನೇ ಬೆಂಡೆತ್ತಿದ್ದಾರೆ. ಬೂಮ್ರಾ, ಸಿರಾಜ್​ ಎಸೆತಗಳನ್ನು ನಿರಾಯಾಸವಾಗಿ ಎದುರಿಸಿದ ಸರ್ಫರಾಜ್​​​, ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ್ದಾರೆ.
ಇಂಗ್ಲೆಂಡ್​ ಲಯನ್ಸ್ ಎದುರು ಸರ್ಫರಾಜ್ ಸಿಡಿಲಬ್ಬರ
ಟೀಮ್ ಇಂಡಿಯಾ ಎದುರಿನ ಇನ್​ಟ್ರಾ ಸ್ಕ್ಯಾಡ್​ ಮ್ಯಾಚ್​ನಲ್ಲೇ ಅಲ್ಲ. ಅದಕ್ಕೂ ಹಿಂದಿನ ಇಂಗ್ಲೆಂಡ್ ಲಯನ್ಸ್ ಎದುರಿನ ಮೊದಲ ಅನಧಿಕೃತ ಟೆಸ್ಟ್‌ನಲ್ಲೂ ಸರ್ಫರಾಜ್ ಅಬ್ಬರಿಸಿದ್ರು. ಅನಧಿಕೃತ ಟೆಸ್ಟ್​ನಲ್ಲಿ ತಾನೆದರಿಸಿದ 119 ಎಸೆತಗಳಲ್ಲಿ 13 ಬೌಂಡರಿ ಒಳಗೊಂಡ 92 ರನ್​ ಗಳಿಸಿ ಮಿಂಚಿದ್ರು.
ಇದನ್ನೂ ಓದಿ: 29ನೇ ವಯಸ್ಸಿನಲ್ಲೇ ವಿರಾಟ್​ ಕೊಹ್ಲಿನ ಮದುವೆ ಆಗಿದ್ದು ಏಕೆ.. ಕಾರಣ ಹೇಳಿದ ಪತ್ನಿ ಅನುಷ್ಕಾ ಶರ್ಮಾ!
ಕೌಂಟಿ ನೆಪ ನೀಡಿದ್ದ ಆಯ್ಕೆಗಾರರಿಗೆ ಮುಂಬೈಕರ್​ ಉತ್ತರ
ಇಂಗ್ಲೆಂಡ್ ಟೆಸ್ಟ್ ಸರಣಿಗೆ ಸರ್ಫರಾಜ್ ಆಯ್ಕೆ ಆಗ್ತಾರೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇತ್ತು. ಬಿಸಿಸಿಐ ಸೆಲೆಕ್ಷನ್ ಕಮಿಟಿ ಶಾಕ್​ ನೀಡ್ತು. ಇದಕ್ಕೆ ಅಜಿತ್ ಅಗರ್ಕರ್​ ನೇತೃತ್ವದ ಕಮಿಟಿ ಟೆಸ್ಟ್ ಅನುಭವ ಹಾಗೂ ಕೌಂಟಿ ಆಡಿದ ಅನುಭವದ ಕಥೆ ಹೇಳಿತ್ತು..
ಕೆಲವೊಮ್ಮೆ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸರ್ಫರಾಜ್, ಮೊದಲ ಟೆಸ್ಟ್‌ನಲ್ಲಿ 100 ರನ್ ಗಳಿಸಿದರು.
ನಂತರ ರನ್ ಗಳಿಸಲಿಲ್ಲ. ಅದೇ ಕರುಣ್ ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಸ್ವಲ್ಪ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಕೌಂಟಿ ಆಡಿದ್ದಾರೆ. ವಿರಾಟ್ ಇಲ್ಲದ ಕಾರಣ ಅನುಭವದ ಕೊರತೆ ಇದೆ. ಈ ಕಾರಣ ಅನುಭವಿ ಆಟಗಾರನ ಅಗತ್ಯವಿದೆ. ಕರುಣ್ ನಾಯರ್ ಆ ಸ್ಥಾನವನ್ನು ತುಂಬಬಲ್ಲರು. ಅನುಭವ ಸಹಾಯ ಮಾಡುತ್ತದೆ ಎಂದು ಭಾವಿಸಿದ್ದೇವೆ. ಈ ಎಲ್ಲಾ ಕಾರಣಗಳಿಂದ ಸರ್ಫರಾಜ್ ಖಾನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿಲ್ಲ-ಅಜಿತ್ ಅಗರ್ಕರ್​, ಸೆಲೆಕ್ಷನ್ ಕಮಿಟಿ ಮುಖ್ಯಸ್ಥ
ಅನುಭವದ ಕಾರಣ ನೀಡಿ ಸರ್ಫರಾಜ್​ ಖಾನ್​ ಡ್ರಾಪ್​ ಮಾಡಲಾಯ್ತು. ಆದ್ರೀಗ ಅದೇ ಆಂಗ್ಲರ ನಾಡಲ್ಲಿ ಸರ್ಫರಾಜ್ ಘರ್ಜಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ಎದುರು 92 ರನ್, ಟೀಮ್ ಇಂಡಿಯಾ ಎದುರು ಶತಕ ಸಿಡಿಸಿ ಮಿಂಚಿದ ಸರ್ಫರಾಜ್, ಈ ಚಾಲೆಂಜಿಂಗ್ ಕಂಡೀಷನ್ಸ್​ನಲ್ಲಿ ನಾನು ಆಡಬಲ್ಲೆ ಅನ್ನೋದನ್ನು ತೋರಿಸಿದ್ದಾರೆ. ತಿರಸ್ಕರಿಸಿದ ಬಿಸಿಸಿಐ ಸೆಲೆಕ್ಷನ್ ಕಮಿಟಿಗೆ ಬ್ಯಾಟ್​​ ಮೂಲಕ ಉತ್ತರ ನೀಡಿದ್ದಾರೆ.
4 ಇನ್ನಿಂಗ್ಸ್​ಗಳ ವೈಫಲ್ಯ..
ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಇದೇ ಮೊದಲ ಇಂಗ್ಲೆಂಡ್​ ಟೆಸ್ಟ್ ಸಿರೀಸ್. ಹಾಗಾಗಿ ಅಗರ್ಕರ್​ ಅನುಭವ ಕಥೆ ಕೇವಲ ಸರ್ಫರಾಜ್ ವಿಚಾರದಲ್ಲಿ ಮಾತ್ರವೇ ಅಪ್ಲೈ ಆಗಿದೆ. ವೈಫಲ್ಯದ ವಿಚಾರಕ್ಕೆ ಬಂದ್ರೂ ಸರ್ಫರಾಜ್​, ಕೇವಲ 4 ಇನ್ನಿಂಗ್ಸ್​ಗಳಲ್ಲಿ ರನ್​ಗಳಿಸಿಲ್ಲ. ಹೀಗಾಗಿ ಇದು ಸೈಡ್​ಲೈನ್ ಶಿಕ್ಷೆನಾ ಅಥವಾ ಡ್ರೆಸ್ಸಿಂಗ್ ರೂಮ್​ ಸೀಕ್ರೇಟ್ಸ್​ಗೆ ತೆತ್ತ ಬೆಲೆನಾ ಎಂಬ ಪ್ರಶ್ನೆ ಮೂಡಿದೆ. ಕಳೆದ ಆಸ್ಟ್ರೇಲಿಯಾ ಟೂರ್​ ವೇಳೆ ಡ್ರೆಸ್ಸಿಂಗ್​ ರೂಮ್​ನ ಮಾಹಿತಿಗಳು ಹೊರಗೆ ಲೀಕ್​ ಆಗಿದ್ದಕ್ಕೆ ಸರ್ಫರಾಜ್​ ಖಾನ್​ನ ಹೊಣೆಗಾರನನ್ನಾಗಿ ಮಾಡಲಾಗಿತ್ತು.
ಸ್ಟ್ಯಾಂಡ್ ಬೈ ಆಗಿ ಉಳಿಸಿಕೊಳ್ಳುತ್ತಾ ಮ್ಯಾನೇಜ್​ಮೆಂಟ್?
ಭಾರತ ಎ ಪರ ಅಬ್ಬರಿಸಿರುವ ಸರ್ಫರಾಜ್, ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ನಾನ್​ ಆಡಬಲ್ಲೆ ಅನ್ನೋ ಸಂದೇಶ ರವಾನಿಸಿದ್ದಾರೆ. ಇದೇ ಇಂಗ್ಲೆಂಡ್ ಟೂರ್​ಗೆ ಆಯ್ಕೆಯಾಗಬೇಕು ಅನ್ನೋ ಕಾರಣಕ್ಕೆ ಕಠಿಣಾಭ್ಯಾಸ ನಡೆಸಿ ತೂಕ ಬೇರೆ ಇಳಿಸಿಕೊಂಡಿದ್ರು. ಬೌನ್ಸಿ ಟ್ರ್ಯಾಕ್​ಗೆ ಅನುಗುಣವಾಗಿ ಅಭ್ಯಾಸವನ್ನೂ ನಡೆಸಿದ್ರು. ಈ ಕಠಿಣ ಶ್ರಮದ ಬಳಿಕ ಇದೀಗ ಇಂಗ್ಲೆಂಡ್​ ನಾಡಲ್ಲೂ ಅಬ್ಬರಿಸಿದ್ದಾರೆ. ಹೀಗಾಗಿ ಸರ್ಫರಾಜ್​ ಖಾನ್​ನ ಸ್ಟ್ರಾಂಡ್​ ಬೈ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳೋ ಅವಕಾಶ ಇದೆ. ಸಾಮರ್ಥ್ಯ ನಿರೂಪಿಸಿರೋ ಸರ್ಫರಾಜ್​ನ ಟೀಮ್ ಮ್ಯಾನೇಜ್​ಮೆಂಟ್ ಉಳಿಸಿಕೊಳ್ಳುತ್ತಾ? ಇಲ್ಲಾ ತವರಿಗೆ ಕಳಿಸುತ್ತಾ? ಕಾದು ನೋಡೋಣ.
ಇದನ್ನೂ ಓದಿ: ಇಂಡಿಯಾ vs ಇಂಡಿಯಾ A ಅಭ್ಯಾಸ​ ಪಂದ್ಯ.. KL ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ