/newsfirstlive-kannada/media/post_attachments/wp-content/uploads/2024/10/Sarfaraz_Khan.jpg)
ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಯುವ ಬ್ಯಾಟರ್ ಸರ್ಫರಾಜ್ ಖಾನ್ ಅಮೋಘ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ್ದಾರೆ. ಶತಕ ಸಿಡಿಸಿ ಸಂಭ್ರಮಿಸುವಾಗ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಸೇರಿದಂತೆ ಉಳಿದ ಆಟಗಾರರು ನಕ್ಕು ಖುಷಿ ಪಟ್ಟಿದ್ದಾರೆ.
ಸರ್ಫರಾಜ್ ಖಾನ್ ಟೀಮ್ ಇಂಡಿಯಾದ ಯುವ ಪ್ಲೇಯರ್. ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿ ನಿಂತಿರುವ ಸರ್ಫರಾಜ್ ಯಾವಾಗಲೂ ತುಸು ಅಗ್ರೆಸ್ಸೀವ್ ಆಗಿಯೇ ಇರುತ್ತಾರೆ. ಅದರಲ್ಲಿ ಬ್ಯಾಟಿಂಗ್ ಮಾಡುವಾಗ ಅರ್ಧ ಶತಕ, ಶತಕ ಬಾರಿಸಿದಾಗ ಅವರ ಸೆಲೆಬ್ರೆಷನ್ ನೋಡುವುದೇ ಒಂದು ಖುಷಿ ಎನಿಸಬಹುದು. ಏಕೆಂದರೆ ಸರ್ಫರಾಜ್ ಸೆಂಚುರಿ ಬಾರಿಸಿದಾಗ ಸಂಭ್ರಮಿಸುವ ಆ ಪರಿ ಇರುತ್ತದೆ. ಯುವ ಬ್ಯಾಟರ್ ತುಂಬಾ ಎಕ್ಸೈಟ್ ಆಗಿ ಸೆಲೆಬ್ರೆಟ್ ಮಾಡುತ್ತಾರೆ.
ಇದನ್ನೂ ಓದಿ: 10 ಕ್ಯಾಪ್ಟನ್ ಬಿಟ್ಟು ಹೊಡಿಬಡಿ ಪ್ಲೇಯರ್ ಮೇಲೆ ಕಣ್ಣು.. 3 ಪಟ್ಟು ಹೆಚ್ಚಿನ ಹಣ ನೀಡ್ತಿದೆಯಾ ಈ ಫ್ರಾಂಚೈಸಿ?
ಅದರಂತೆ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಕೇವಲ 112 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಸಮೇತ 101 ರನ್ ಸಿಡಿಸಿದ್ದಾರೆ. ಭರ್ಜರಿಯಾದ ಶತಕ ಸಿಡಿಸಿದ್ದೆ ತಡ ಸರ್ಫರಾಜ್ ಮೈದಾನದಲ್ಲಿ ಓಡಾಡಿ ಸಂಭ್ರಮಿಸಿದರು. ಡ್ರೆಸ್ಸಿಂಗ್ ರೂಮ್ ಕಡೆ ಬ್ಯಾಟ್ ತೋರಿಸಿ ತುಟಿ ಕಚ್ಚಿಕೊಂಡು ಖುಷಿ ಪಟ್ಟರು. ಈ ವೇಳೆ ಇದನ್ನೆಲ್ಲ ಡ್ರೆಸ್ಸಿಂಗ್ ರೂಮ್ನಿಂದ ನೋಡುತ್ತಿದ್ದ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ, ಆರ್.ಅಶ್ವಿನ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಸಿಬ್ಬಂದಿ ಎಲ್ಲರೂ ಮುಸಿ ಮುಸಿ ನಕ್ಕರು. ಸರ್ಫರಾಜ್ ಅವರ ಅಗ್ರೆಸ್ಸೀವ್ ಆಗಿ ಸಂಭ್ರಮಿಸುವುದು ಅವರಿಗೆಲ್ಲ ನಗು ತರಿಸಿತು. ಇದು ಅಲ್ಲದೇ ಸರ್ಫರಾಜ್ರನ್ನ ನೋಡಿ ನ್ಯೂಜಿಲೆಂಡ್ ಪ್ಲೇಯರ್ಸ್ ಕೂಡ ಇದು ಏನಿದು ಎನ್ನುವಂತೆ ಗುರಾಯಿಸಿಕೊಂಡು ನೋಡಿದ್ದಾರೆ.
ಸದ್ಯ ಸರ್ಫರಾಜ್ ಖಾನ್ 150 ರನ್ಸ್, ರಿಷಬ್ ಪಂತ್ 90 ರನ್ಗಳಿಂದ ಕ್ರೀಸ್ನಲ್ಲಿದ್ದಾರೆ. ಟೀಮ್ ಇಂಡಿಯಾ 3 ವಿಕೆಟ್ಗೆ 408 ರನ್ ಗಳಿಸಿ 52 ರನ್ಗಳ ಮುನ್ನಡೆ ಕಾಯ್ದುಕೊಂಡು ಆಡುತ್ತಿದೆ.
Kohli and entire dressing room were laughing hard after watching Sarfaraz’s celebration ??
— ? (@DilipVK18) October 19, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ