/newsfirstlive-kannada/media/post_attachments/wp-content/uploads/2024/10/Rohit-Sharma_Sarfaraz-Khan.jpg)
ಇಂಡೋ-ಕಿವೀಸ್​​ 2ನೇ ಟೆಸ್ಟ್​ ಫೈಟ್​ ಈಗಾಗಲೇ ನಡೆಯುತ್ತಿದೆ. ಯಂಗ್​ ಬ್ಯಾಟರ್​​ ಸರ್ಫರಾಜ್​ ಖಾನ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಮೊದಲ ಟೆಸ್ಟ್​ನಲ್ಲಿ ಮಿಂಚಿದ ಜೂನಿಯರ್​ ಡಾನ್​ ಬ್ರಾಡ್ಮನ್​, 2ನೇ ಟೆಸ್ಟ್​ನಲ್ಲೂ ಕಿವೀಸ್​ ಕಿವಿ ಹಿಂಡ್ತಾರೆ ಅನ್ನೋದು ಎಲ್ಲರ ವಿಶ್ವಾಸವಾಗಿದೆ. ಅಷ್ಟಕ್ಕೂ ಯುವ ಆಟಗಾರನ ಮೇಲೆ ಯಾಕಿಷ್ಟು ನಿರೀಕ್ಷೆ.?
ಇಂಡೋ-ನ್ಯೂಜಿಲೆಂಡ್​ 2ನೇ ಟೆಸ್ಟ್​ ಪಂದ್ಯ ಶುರುವಾಗಿದೆ. ಬೆಂಗಳೂರಿನ ಟೆಸ್ಟ್​ ಫೈಟ್​ನಲ್ಲಿ ಸೋಲಿನ ಕಹಿಯುಂಡ ಟೀಮ್​ ಇಂಡಿಯಾ, 2ನೇ ಟೆಸ್ಟ್​ನಲ್ಲಿ ವಿಜಯಪತಾಕೆ ಹಾರಿಸೋ ಲೆಕ್ಕಾಚಾರದಲ್ಲಿದೆ. ಇದಕ್ಕಾಗಿ ಭರ್ಜರಿ ಪ್ಲಾನ್​ಗಳನ್ನ ರೋಹಿತ್​ ಶರ್ಮಾ ಪಡೆ ರೂಪಿಸಿದೆ.
ಸರ್ಫರಾಜ್​ ಖಾನ್​ ಟೆಸ್ಟ್​​ನ ಸೆಂಟರ್​ ಆಫ್​ ಅಟ್ರಾಕ್ಷನ್​.!
ಬೆಂಗಳೂರು ಟೆಸ್ಟ್​ನ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಸಾಲಿಡ್​ ಆಟವಾಡಿದ ಸರ್ಫರಾಜ್​ ಖಾನ್​ ಸದ್ಯ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸರ್ಫರಾಜ್​ ಖಾನ್​, ಮನಮೋಹಕ ಇನ್ನಿಂಗ್ಸ್​ ಕಟ್ಟಿದ್ದರು. ಸರ್ಫರಾಜ್​ ಆಟಕ್ಕೆ ಕಿವೀಸ್​ ಬೌಲರ್​ಗಳು ಬೆಸ್ತು ಬಿದ್ರೆ, ಫೀಲ್ಡರ್ಸ್​ ಸುಸ್ತು ಹೊಡೆದಿದ್ದರು.
2ನೇ ಟೆಸ್ಟ್​ನಲ್ಲೂ ಬೊಂಬಾಟ್​ ಆಟದ ನಿರೀಕ್ಷೆ.!
ಬೆಂಗಳೂರು ಟೆಸ್ಟ್​ನ ಶತಕವೀರ ಸರ್ಫರಾಜ್​ ಖಾನ್​ ಮೇಲೆ ಇದೀಗ ನಿರೀಕ್ಷೆ ಹೆಚ್ಚಿದೆ. 2ನೇ ಟೆಸ್ಟ್​ನಲ್ಲೂ ರೆಡ್​ ಹಾಟ್​ ಫಾರ್ಮ್​ನಲ್ಲಿರೋ ಸರ್ಫರಾಜ್​, ನ್ಯೂಜಿಲೆಂಡ್​ ಬೌಲರ್​ಗಳ ಬೆವರಿಳಿಸ್ತಾರೆ ಅನ್ನೋದು ಕ್ರಿಕೆಟ್​ ವಲಯದ ವಿಶ್ವಾಸವಾಗಿದೆ. ಯಾಕಂದ್ರೆ, ಪುಣೆ ಪಿಚ್​ ಸರ್ಫರಾಜ್​ ಖಾನ್​ಗೆ ಹೇಳಿ ಮಾಡಿಸಿದಂತಿದೆ. ಈ ಪಿಚ್​​ನಲ್ಲಿ ಹಲವು ಡೊಮೆಸ್ಟಿಕ್ ಪಂದ್ಯಗಳನ್ನ ಆಡಿದ ಅನುಭವ ಸರ್ಫರಾಜ್​ಗಿದೆ.
ಕನ್ಸಿಸ್ಟೆಂಟ್​​ ಕಿಂಗ್​, ಡೆಮೊಸ್ಟಿಕ್​ ಕ್ರಿಕೆಟ್​ನ ‘ಡಾನ್​ ಬ್ರಾಡ್ಮನ್​’.!
ಸರ್ಫರಾಜ್​ ಖಾನ್​ 2ನೇ ಟೆಸ್ಟ್​ನಲ್ಲೂ ರನ್ ​ಹೊಳೆ ಹರಿಸ್ತಾರೆ ಅನ್ನೋ ನಿರೀಕ್ಷೆ ಹೆಚ್ಚಿರೋದಕ್ಕೆ ಕಾರಣ ಇದೆ. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಸರ್ಫರಾಜ್​ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​​ ನೀಡಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ, ಟೂರ್ನಿಯಿಂದ ಟೂರ್ನಿಗೆ ಸರ್ಫರಾಜ್​ ಬ್ಯಾಟ್​ ಸಖತ್​ ಸೌಂಡ್​ ಮಾಡಿದೆ. ಕಳೆದ 2 ಸೀಸನ್​ಗಳ ರಣಜಿ ಟೂರ್ನಿ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.
ಕಿವೀಸ್​ ವಿರುದ್ಧ ಶತಕ ಸಿಡಿಸಿರೋ ಸರ್ಫರಾಜ್​, ಈ ತಿಂಗಳ ಆರಂಭದಲ್ಲಿ ನಡೆದ ಇರಾನಿ ಕಪ್​ನಲ್ಲಿ ದ್ವಿಶತಕ ಸಿಡಿಸಿದರು. ಇಂಗ್ಲೆಂಡ್​ ಟೆಸ್ಟ್​ ಸರಣಿಯಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಿದ್ದ ಸರ್ಫರಾಜ್​, ಅದಕ್ಕೂ ಹಿಂದೆ ಇಂಡಿಯಾ ಎ, ರಣಜಿಯಲ್ಲಿ ಮುಂಬೈ ಪರ ಕನ್ಸಿಸ್ಟೆಂಟ್​ ಆಗಿ ರನ್​ ಕೊಳ್ಳೆ ಹೊಡೆದಿದ್ರು. ಈ ಕಾರಣಕ್ಕೇ ಸರ್ಫರಾಜ್​ನ ಆಸಿಸ್​​ ಲೆಜೆಂಡ್​ ಡಾನ್​​ ಬ್ರಾಡ್ಮನ್​ಗೆ ಹೋಲಿಸೋದು. ಜೂನಿಯರ್​ ಡಾನ್​ ಬ್ರಾಡ್ಮನ್​ ಅನ್ನೋ ಪಟ್ಟ ಒಲಿದಿರೋದು.
ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ವೇಳೆ ಖರ್ಗೆಯನ್ನೇ ಕಡೆಗಣಿಸಿದ್ರಾ? AICC ಅಧ್ಯಕ್ಷ ಬಾಗಿಲ ಸೆರೆಯಲ್ಲಿ ಇಣುಕುವ ದೃಶ್ಯ ವೈರಲ್
‘2024ರ ಜಾವೆದ್​ ಮಿಯಾಂದಾದ್​’ ಎಂದ ಮಾಂಜ್ರೆಕರ್​.!
ಕ್ರಿಕೆಟ್​ ಸರ್ಕಲ್​ ಕೆಲವರು ಡಾನ್​ ಬ್ರಾಡ್ಮನ್​ ಅಂತಿದ್ರೆ, ಮಾಜಿ ಕ್ರಿಕೆಟಿಗ ಸಂಜಯ್​ ಮಾಂಜ್ರೆಕರ್​ ಸರ್ಫರಾಜ್​ನ 2024ರ ಜಾವೆದ್​ ಮಿಯಾಂದಾದ್​ ಎಂದಿದ್ದಾರೆ. 1980ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಮಿಯಾಂದಾದ್​ ತನ್ನ ಕ್ಲಾಸಿಕ್​ ಆಟದಿಂದ ಪಾಕ್​ ಪಡೆಯ ಮ್ಯಾಚ್​ ವಿನ್ನರ್​ ಆಗಿ ರೂಪುಗೊಂಡಿದ್ದರು. ಟೆಸ್ಟ್​ ಕ್ರಿಕೆಟ್​ನಲ್ಲಿ 52.57ರ ಅತ್ಯದ್ಭುತ ಸರಾಸರಿಯಲ್ಲಿ ಬ್ಯಾಟ್​ ಬೀಸಿದರು. ಈಗ ಸರ್ಫರಾಜ್​ ಆ ಮಿಯಾಂದಾದ್​ ನೆನಪಿಸ್ತಾ ಇದೆ ಅನ್ನೋದು ಮಾಂಜ್ರೇಕರ್​ ಅಭಿಪ್ರಾಯ.
ಇಂಡೋ-ಕಿವೀಸ್​ ವಿರುದ್ಧದ 2ನೇ ಟೆಸ್ಟ್​​ಗೂ ಮುನ್ನ,​ ಕೊಹ್ಲಿ, ರೋಹಿತ್​ ಶರ್ಮಾಗಿಂತ ಹೆಚ್ಚು ಸರ್ಫರಾಜ್​ ಮೇಲೆ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಆಡಿದಂತೆ, ಪುಣೆಯಲ್ಲೂ ಸರ್ಫರಾಜ್​ ಬೊಂಬಾಟ್​ ಆಟವಾಡಲಿ. ಫ್ಯಾನ್ಸ್​ ನಿರೀಕ್ಷೆ ನಿಜ ಮಾಡಿ, ತಂಡದ ಗೆಲುವಿಗೆ ಕಾರಣರಾಗಲಿ ಅನ್ನೋದು ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ