/newsfirstlive-kannada/media/post_attachments/wp-content/uploads/2024/10/Rohit-Sharma_Sarfaraz-Khan.jpg)
ದೇಶೀಯ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಕದ ತಟ್ಟಿದವ್ರು ಯುವ ಬ್ಯಾಟರ್ ಸರ್ಫರಾಜ್ ಖಾನ್. ಇರಾನಿ ಟ್ರೋಫಿಯಲ್ಲಂತೂ ಬಿರುಸಿನ ದ್ವಿಶತಕ ಸಿಡಿಸಿ ಅಬ್ಬರಿಸಿದ್ರು. ಹಾಗಾಗಿಯೇ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಪ್ಲೇಯಿಂಗ್ ಎಲೆವೆನ್ನಲ್ಲಿ ಸ್ಥಾನ ಪಡೆದುಕೊಂಡರು. ಆದರೆ, ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾಗೆ ಸರಿಯಾಗಿ ಕೈ ಕೊಟ್ಟಿದ್ದಾರೆ.
ನಿರಾಸೆ ಮೂಡಿಸಿದ ಸರ್ಫರಾಜ್ ಖಾನ್
ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆಯೇ ಸರ್ಫರಾಜ್ ಖಾನ್ ಎಂಟ್ರಿ ಕೊಟ್ಟರು. ಎಲ್ಲರೂ ಸರ್ಫರಾಜ್ ಖಾನ್ ಇಂದು ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದೇ ಭಾವಿಸಿದ್ದರು. ಆದರೆ, ಮಳೆ ಬಂದಿದ್ದ ಕಾರಣ ಚಿನ್ನಸ್ವಾಮಿ ಸ್ಟೇಡಿಯಮ್ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ನಿಜಕ್ಕೂ ಸವಾಲ್ ಆಗಿತ್ತು. ಹಾಗಾಗಿ ತನಗೆ ಸಿಕ್ಕ ಅವಕಾಶವನ್ನು ಸರ್ಫರಾಜ್ ಖಾನ್ ಕೈ ಚೆಲ್ಲಬೇಕಾಯ್ತು.
ಸರ್ಫರಾಜ್ ಖಾನ್ ಅಗ್ರೆಸ್ಸಿವ್ ಬ್ಯಾಟರ್
ಟೀಮ್ ಇಂಡಿಯಾದ ಯುವ ಬ್ಯಾಟರ್ ಸರ್ಫರಾಜ್ ಖಾನ್ ಬಹಳ ಅಗ್ರೆಸ್ಸಿವ್ ಆಟಗಾರ. ಇವರ ಆಟ ಕೆಲವೊಮ್ಮೆ ರೋಹಿತ್ ಶರ್ಮಾ ಅವರನ್ನೇ ಹೋಲುತ್ತದೆ. ಇವರು ಟೀಮ್ ಇಂಡಿಯಾದ ಜೂನಿಯರ್ ರೋಹಿತ್ ಶರ್ಮಾ ಎಂದರು ತಪ್ಪಾಗಲಾರದು. ಪಿಚ್ ಯಾವುದೇ ಇರಲಿ, ಬೌಲರ್ ಯಾರೇ ಆಗಿರಲಿ, ಬಾಲ್ ಬಂದ್ರೆ ಬೌಂಡರಿ ದಾಟಿಸುವುದೇ ಇವರ ಗುರಿ. ಮೊದಲ ಇನ್ನಿಂಗ್ಸ್ನಲ್ಲಿ ಮೋಡಿ ಮಾಡೋಣ ಎಂದು ಬ್ಯಾಟ್ ಬೀಸಿದ್ರು. ಆದರೆ, ಅಂದುಕೊಂಡಂತೆ ಆಗದ ಕಾರಣ ಔಟಾದ್ರು.
ಕೇವಲ 46 ರನ್ಗೆ ಟೀಮ್ ಇಂಡಿಯಾ ಆಲೌಟ್
ಎಂ. ಚಿದಂಬರಂ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಮಹತ್ವದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ. ಹಾಗಾಗಿ ಟೀಮ್ ಇಂಡಿಯಾಗೆ ಮೊದಲ ಪಂದ್ಯ ಗೆಲ್ಲೋ ಅವಕಾಶ ಇದ್ಯಾ? ಅನ್ನೋ ಚರ್ಚೆ ಜೋರಾಗಿದೆ.
ಟೀಮ್ ಇಂಡಿಯಾ ನೀಡಿರೋ ಕಡಿಮೆ ರನ್ಗಳ ಗುರಿ ಬೆನ್ನತ್ತಿರೋ ನ್ಯೂಜಿಲೆಂಡ್ ತಂಡವು ಈಗ 402 ರನ್ಗಳ ಬೃಹತ್ ಮೊತ್ತ ಸೇರಿಸಿ ಆಲೌಟ್ ಆಗಿದೆ. ಅಲ್ಲದೆ 356 ರನ್ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಕಿವೀಸ್ ವಿರುದ್ಧ ಗೆಲ್ಲಲು ಇನ್ನೂ ಇದೆ ಸುವರ್ಣಾವಕಾಶ! ಟೀಮ್ ಇಂಡಿಯಾ ಮಾಡಬೇಕಾದ ಕೆಲಸ ಇಷ್ಟೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ