/newsfirstlive-kannada/media/post_attachments/wp-content/uploads/2024/10/Sarfaraz-Khan.jpg)
ನ್ಯೂಜಿಲೆಂಡ್​​ ತಂಡದ ವಿರುದ್ಧ ನಡೆಯುತ್ತಿರೋ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾದ ಪರ ಸರ್ಫರಾಜ್​ ಖಾನ್​​ ಅಬ್ಬರಿಸಿದ್ರು. ಈ ಮೂಲಕ ಹೊಸ ದಾಖಲೆ ಬರೆದ್ರು.
ಮೊದಲ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ ತಂಡ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ ಎಚ್ಚರಿಕೆಯ ಬ್ಯಾಟಿಂಗ್​​ ಮಾಡುತ್ತಿದೆ. 2ನೇ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 3 ವಿಕೆಟ್​ ನಷ್ಟಕ್ಕೆ 231 ರನ್​ ಕಲೆ ಹಾಕಿದೆ.
ಸರ್ಫರಾಜ್​ ಖಾನ್​ ಸ್ಫೋಟಕ ಬ್ಯಾಟಿಂಗ್​!
ಟೀಮ್​ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್​ಗೆ ಬಂದ ವಿರಾಟ್​​ ಕೊಹ್ಲಿ ಎಚ್ಚರಿಕೆಯ ಆಟವಾಡಿದ್ರು. ಇವರಿಗೆ ಸಾಥ್​ ನೀಡಿದ ಸರ್ಫರಾಜ್​ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ನ್ಯೂಜಿಲೆಂಡ್​ ಬೌಲರ್​ಗಳನ್ನು ಬೆಂಬಿಡದೆ ಕಾಡಿದ್ರು ಈ ಯುವ ಬ್ಯಾಟರ್.
70 ರನ್​ ಚಚ್ಚಿದ ಕೊಹ್ಲಿ
ಕಿವೀಸ್​ ಬೌಲರ್​ಗಳ ಕಿವಿ ಹಿಂಡಿದ ಸರ್ಫರಾಜ್​​ ಖಾನ್​ ಅಬ್ಬರಿಸಿದ್ರು. ಕ್ರೀಸ್​​ನಲ್ಲಿ ನಿಂತು ಅಗ್ರೆಸ್ಸಿವ್​ನಿಂದಲೇ ಬ್ಯಾಟ್​ ಬೀಸಿದ ಸರ್ಫರಾಜ್​ ಖಾನ್​ 78 ಬಾಲ್​ನಲ್ಲಿ 70 ರನ್​ ಸಿಡಿಸಿದ್ರು. ಬರೋಬ್ಬರಿ 7 ಫೋರ್​​, 3 ಸಿಕ್ಸರ್​​ ಸಿಡಿಸಿ ಅಜೇಯರಾಗಿ ಉಳಿದ್ರು.
ಬಿಗ್​ ಟಾರ್ಗೆಟ್​ ಕೊಟ್ಟ ನ್ಯೂಜಿಲೆಂಡ್​​
ಎಂ. ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​​ ನಡುವಿನ ಮೊದಲ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ಈ ಮಹತ್ವದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ. ಟೀಮ್​ ಇಂಡಿಯಾ ನೀಡಿರೋ ಕಡಿಮೆ ರನ್​​ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡವು ಈಗ 402 ರನ್​​ಗಳ ಬೃಹತ್​ ಮೊತ್ತ ಸೇರಿಸಿ ಆಲೌಟ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us