/newsfirstlive-kannada/media/post_attachments/wp-content/uploads/2025/07/Sarfaraz_Khan_KOHLI.jpg)
ಕ್ರಿಕೆಟ್ನಲ್ಲಿ ಸಕ್ಸಸ್ ಅನ್ನೋದು ಸುಲಭಕ್ಕೆ ಸಿಗಲ್ಲ. ಇದಕ್ಕಾಗಿ ಕಠಿಣ ಪರಿಶ್ರಮ, ತ್ಯಾಗ ಅನಿವಾರ್ಯ. ಇದೀಗ ಯಶಸ್ಸಿಗಾಗಿ ಯವ ಕ್ರಿಕೆಟಿಗ ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿಯನ್ನ ಅನುಸರಿಸಿದ್ದಾರೆ. ಅಷ್ಟಕ್ಕೂ ಮುಂಬೈಕರ್ ಸರ್ಫರಾಜ್ ಮಾಡಿದ್ದೇನು?.
ಸರ್ಫರಾಜ್ ಖಾನ್..! ಭಾರತೀಯ ಕ್ರಿಕೆಟ್‌ನ ಡೊಮೆಸ್ಟಿಕ್ ಕ್ರಿಕೆಟ್‌ನ ಡಾನ್ ಬ್ರಾಡ್ಮನ್. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಈ ಮುಂಬೈಕರ್, ಟೀಮ್ ಇಂಡಿಯಾದ ಡೆಬ್ಯೂ ಸಿರೀಸ್ನಲ್ಲೇ ಸೃಷ್ಟಿಸಿದ್ದು ಸೆನ್ಸೇಷನ್. ಇದೀಗ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲೇ ಇಲ್ಲದ ಸರ್ಫರಾಜ್ ಖಾನ್, ಕಮ್ಬ್ಯಾಕ್ಗಾಗಿ ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಸರ್ಫರಾಜ್ ತೂಕದ ಬಗ್ಗೆ ಹಾಡಿಕೊಳ್ಳುತ್ತಿದ್ದವರ ಬಾಯಿಮುಚ್ಚಿಸಿದ್ದಾರೆ.
ಇಂಗ್ಲೆಂಡ್ ಎದುರಿನ ರಾಜಕೋಟ್ ಟೆಸ್ಟ್ನಲ್ಲಿ ಡೆಬ್ಯೂ ಮಾಡಿದ್ದ ಸರ್ಫರಾಜ್, ಈ ಸರಣಿಯಲ್ಲಿ ಸಾಲಿಡ್ ಆಟವಾಡಿದ್ದರು. ನ್ಯೂಜಿಲೆಂಡ್ ಎದುರಿನ ಬೆಂಗಳೂರು ಟೆಸ್ಟ್ನಲ್ಲಿ 150 ರನ್ ಸಿಡಿಸಿ ಗಮನ ಸೆಳೆದಿದ್ದ ಮುಂಬೈಕರ್ಗೆ ಟೆಸ್ಟ್ ತಂಡದಲ್ಲಿ ಸ್ಥಾನ ಖಾಯಂ ಆಗಿತ್ತು. ಆದ್ರೆ, ನಂತರದ ಎರಡೇ 2 ಟೆಸ್ಟ್ ಪಂದ್ಯಗಳು ಸರ್ಫರಾಜ್, ಬದುಕನ್ನೇ ಬದಲಿಸಿತ್ತು. ಟೀಮ್ ಇಂಡಿಯಾದಿಂದ ಹೊರಬೀಳುವಂತೆ ಮಾಡಿತ್ತು. ಇದೀಗ ಕಮ್ಬ್ಯಾಕ್ನತ್ತ ಚಿತ್ತ ಹರಿಸಿರುವ ಸರ್ಫರಾಜ್ ಖಾನ್, ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಇದಕ್ಕೆ ಕಾರಣ ಈ ಒಂದು ಪೋಟೋ..
ಹೊಸ ಲುಕ್ನಲ್ಲಿ ಸರ್ಫರಾಜ್ ಖಾನ್ ಮಿಂಚಿಂಗ್..!
ಮುಂಬೈಕರ್ ಸರ್ಫರಾಜ್, ಹೊಸ ಲುಕ್ನಲ್ಲಿ ಮಿಂಚ್ತಿದ್ದಾರೆ. ಇದಕ್ಕೆ ಕಾರಣ ವರ್ಕೌಟ್ ಹಾಗೂ ಕಟ್ಟುನಿಟ್ಟಿನ ಡಯಟ್. ಈ ಟಯಟ್ ಹಾಗೂ ವರ್ಕೌಟ್ನ ಕೃಪಾಕಟಾಕ್ಷವೇ ಸರ್ಫರಾಜ್ ಖಾನ್, ಸ್ಲಿಮ್ & ಟ್ರಿಮ್ ಆಗಿ ಕಾಣ್ತಿದ್ದಾರೆ. ಇದಕ್ಕಾಗಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಟಿದ್ದಾರೆ. ಹ್ಯಾಂಡ್ಸಮ್ ಲುಕ್ನಲ್ಲಿ ಕಾಣ್ತಿರುವ ಸರ್ಫರಾಜ್, ಮಟನ್ ಬಿರಿಯಾನಿ, ರೈಸ್, ಮೈದಾ ಮುಂತಾದ ಆಹಾರಗಳಿಗೆ ಕೊಕ್ ಕೊಟ್ಟಿದ್ದಾರೆ. ಗಂಟೆಗಟ್ಟಲೇ ಜಿಮ್ಗಳಲ್ಲಿ ವರ್ಕೌಟ್ ಮಾಡಿ ಬೆವರಿಳಿಸ್ತಿದ್ದಾರೆ. ವರ್ಕೌಟ್, ಡಯಟ್ನ ಫಲವಾಗಿ 17 ಕೆಜಿ ದೇಹ ತೂಕ ಇಳಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಟೀಕಾಕಾರರ ಬಾಯಿ ಮುಚ್ಚಿಸಿದ ಛಲದಂಕ ಮಲ್ಲ ಮುಂಬೈಕರ್!
ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ರನ್ ಗಳಿಸಿದರು ಸರ್ಫರಾಜ್, ದೇಹತೂಕದ ಟೀಕೆ ಇದ್ದೇ ಇತ್ತು. ಆದ್ರೀಗ ದೇಹದ ತೂಕವನ್ನೇ ಇಳಿಸಿರುವ ಮುಂಬೈಕರ್, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಟೀಮ್ ಇಂಡಿಯಾ ಕಮ್ಬ್ಯಾಕ್ಗಾಗಿ ಕೆಲ ಬದಲಾವಣೆಯ ಜೊತೆಗೆ ತ್ಯಾಗವನ್ನ ಮಾಡಿರುವ ಮುಂಬೈಕರ್, ತಾನೊರ್ವ ಛಲದಂಕ ಮಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಸರ್ಫರಾಜ್ ಡಯಟ್ ಪ್ಲಾನ್
- ಒಂದೂವರೆ ತಿಂಗಳಿನಿಂದ ರೈಸ್ ಹಾಗೂ ರೋಟಿಗೆ ಬ್ರೇಕ್
- ಕ್ಯಾರೆಟ್, ಸೌತೆಕಾಯಿ, ಹಸಿರು ತರಕಾರಿ ಸಲಾಡ್
- ಗ್ರಿಲ್ಡ್ ಫಿಶ್, ಗ್ರಿಲ್ಡ್ ಚಿಕನ್, ಬೇಯಿಸಿದ ಮೊಟ್ಟೆ ಸೇವನೆ
- ಗ್ರೀನ್ ಟೀ, ಬ್ಲಾಕ್ ಕಾಫಿ & ಊಟದಲ್ಲಿ ಕಡಿಮೆ ಎಣ್ಣೆ ಬಳಕೆ
- ಸಕ್ಕರೆ, ಮೈದಾ ಉತ್ಪನ್ನ, ಬೇಕರಿ ಉತ್ಪನ್ನಗಳಿಂದ ದೂರ
- MCAನಲ್ಲಿ ಪ್ರತಿ ನಿತ್ಯ ಒಂದು ಗಂಟೆ ಜಿಮ್ನಲ್ಲಿ ವರ್ಕೌಟ್
- 1 ಗಂಟೆ ವಾಕ್, ಜಾಗಿಂಗ್, 30 ನಿಮಿಷ ಸ್ವಿಮ್ಮಿಂಗ್ ಸೆಷನ್
ಸರ್ಫರಾಜ್ ಖಾನ್ಗೆ ವಿರಾಟ್ ಕೊಹ್ಲಿಯೇ ಸ್ಪೂರ್ತಿ..!
ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಫಿಟೆಸ್ಟ್ ಕ್ರಿಕೆಟರ್. 37 ವಯಸ್ಸಿನಲ್ಲೂ ಚಿರತೆಯಂತೆ ಓಡುವ ಕೊಹ್ಲಿ, ಬ್ಯಾಟಿಂಗ್ನಲ್ಲಿ ಮಾತ್ರವೇ ಎಲ್ಲರಿಗೂ ಮಾದರಿ ಅಲ್ಲ. ವಿರಾಟ್ ಕೊಹ್ಲಿಯ ಫಿಟ್ನಸ್ ಡಯಟ್ ಸಹ ಅದೆಷ್ಟೋ ಮಂದಿಗೆ ಸ್ಪೂರ್ತಿ. ಹೀಗಾಗಿ ಹಲವರು ಅವರನ್ನೇ ಫಾಲೋ ಮಾಡ್ತಾರೆ. ಈ ಪೈಕಿ ಸರ್ಫರಾಜ್ ಖಾನ್ ಸಹ ಒಬ್ಬರಾಗಿದ್ದಾರೆ. ಫಿಟ್ನೆಸ್ನಲ್ಲಿ ವಿರಾಟ್ ಕೊಹ್ಲಿಯನ್ನೇ ಫಾಲೋ ಮಾಡ್ತಿದ್ದಾರೆ.
ಇದನ್ನೂ ಓದಿ:ಭೀಮನ ಅಮಾವಾಸ್ಯೆ ದಿನವೇ ಗಂಡ- ಹೆಂಡತಿ ಗಲಾಟೆ.. ಮಗಳ ಜೀವ ತೆಗೆದ ತಾಯಿ
ವಿರಾಟ್ ಕೊಹ್ಲಿ ಡಯಟ್ ಪ್ಲಾನ್.!
- 3 ವೈಟ್ ಆಮ್ಲೇಟ್, 1 ಪೂರ್ಣ ಮೊಟ್ಟೆ, ಪಾಲಕ್, ಬ್ಲಾಕ್ ಪೆಪ್ಪರ್ & ಚೀಸ್
- ಗ್ರಿಲ್ಡ್ ಪೋರ್ಕ್, ಫಿಷ್ ಹಾಗೂ ಪಪ್ಪಾಯಿ, ಕಲ್ಲಂಗಡಿ, ಡ್ರ್ಯಾಗನ್ ಫ್ರೂಟ್ಸ್, ಬೆಣ್ಣೆ
- ಗೋಧಿ ರಹಿತ ಬ್ರೆಡ್, ದಿನಕ್ಕೆ ಮೂರ್ನಾಲ್ಕು ಕಪ್ ಗ್ರೀನ್ ಟೀ & ಲೆಮೆನ್ ಟೀ
- ಸ್ನಾಯುಗಳ ಬಲಕ್ಕಾಗಿ ರೆಡ್ ಮಟನ್, ಗ್ರಿಲ್ಡ್ ಚಿಕನ್, ಮ್ಯಾಶ್ ಆಲೂಗಡ್ಡೆ
- ರಾತ್ರಿಯ ಊಟಕ್ಕೆ ಪಾಲಕ್, ತರಕಾರಿ ಸಾಲಡ್ ಹಾಗೂ ಸೀ ಫೂಡ್
ಸದ್ಯ ವಿರಾಟ್ ಕೊಹ್ಲಿಯ ಡಯಟ್ ಅನ್ನೇ, ಕಟ್ಟು ನಿಟ್ಟಾಗಿ ಫಾಲೋ ಮಾಡ್ತಿರುವ ಮುಂಬೈಕರ್ ಸರ್ಫರಾಜ್ ಖಾನ್, ದೇಹತೂಕ ಇಳಿಸುವಲ್ಲಿ ಸಕ್ಸಸ್ ಕಂಡಿದ್ದಾರೆ. ಸರ್ಫರಾಜ್ ಖಾನ್ ಮಾತ್ರವೇ ಅಲ್ಲ. ವಿರಾಟ್ ಕೊಹ್ಲಿಯ ಡಯಟ್ ಅನ್ನೇ ಫಾಲೋ ಮಾಡುವ ಹಲವು ಕ್ರಿಕೆಟಿಗರು ವಿಶ್ವದಲ್ಲಿದ್ದಾರೆ. ಧಡೂತಿ ದೇಹದಿಂದ ಟೀಕೆಗೆ ಗುರಿಯಾಗಿದ್ದ ಸರ್ಫರಾಜ್, ಫುಲ್ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಮುಂದಿನ ದಿನಗಳಲ್ಲಾದರು ಈತನಿಗೆ ಟೀಮ್ ಇಂಡಿಯಾ ಡೋರ್ ಓಪನ್ ಆಗುತ್ತಾ? ಅನ್ನೋದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ