/newsfirstlive-kannada/media/post_attachments/wp-content/uploads/2024/10/Sarfaraz_Khan_BOY.jpg)
ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸರ್ಫರಾಜ್ ಖಾನ್​ಗೆ ಗುಡ್​ನ್ಯೂಸ್ ಸಿಕ್ಕಿದೆ. ಸರ್ಫರಾಜ್ ಖಾನ್​ ದಂಪತಿಗೆ ಗಂಡು ಮಗು ಜನಿಸಿದೆ. ಈ ಮೂಲಕ ಮೊದಲ ಮಗುವಿಗೆ ಸರ್ಫರಾಜ್ ಫ್ಯಾಮಿಲಿ ವೆಲ್​ಕಮ್ ಹೇಳಿದೆ.
ಸರ್ಫರಾಜ್​ ಖಾನ್ ದಂಪತಿಗೆ ಗಂಡು ಮಗು ಜನನವಾದ ಹಿನ್ನೆಲೆಯಲ್ಲಿ ಅವರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚು ಆಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಸರ್ಫರಾಜ್ ಪತ್ನಿಗೆ ಮಗು ಜನಿಸಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮಗುವನ್ನು ಎತ್ತಿಕೊಂಡು ಖುಷಿ ವ್ಯಕ್ತಪಡಿಸಿರುವ ಸರ್ಫರಾಜ್ ಫೋಟೋಗೆ ಪೋಸ್ ಕೂಡ ಕೊಟ್ಟಿದ್ದಾರೆ. ಅಲ್ಲದೇ ಅಜ್ಜನಾಗಿದ್ದಕ್ಕೆ ಸರ್ಫರಾಜ್ ಅವರ ತಂದೆಯವರು ಫುಲ್ ಹ್ಯಾಪಿ ಆಗಿದ್ದಾರೆ.
ಇದನ್ನೂ ಓದಿ: ಕಿವೀಸ್ ಎದೆ ನಡುಗಿಸಿದ್ದ ರಿಷಬ್ ಪಂತ್.. ಇಂಜುರಿಯಾದ್ರೂ ಅತ್ಯದ್ಭುತ ಇನ್ನಿಂಗ್ಸ್ ಕಟ್ಟಿದ್ದ ಫೈಟರ್
ಈ ವರ್ಷದಲ್ಲಿ ಸರ್ಫರಾಜ್​ ಅವರ ಬದುಕಲ್ಲಿ ಸಾಕಷ್ಟು ಯಶ್ಸುಗಳು ಹರಿದು ಬಂದವು ಎನ್ನಬಹುದು. ಇದೇ ವರ್ಷದಲ್ಲಿ ಸರ್ಫರಾಜ್ ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ದುಲೀಫ್ ಟ್ರೋಫಿಯಲ್ಲಿ ಸರ್ಫರಾಜ್ ಸಹೋದರ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದರು. ಮೊನ್ನೆ ಮೊನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಸರ್ಫರಾಜ್ 150 ರನ್​ಗಳ ಗಳಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಇದೀಗ ಗಂಡು ಮಗು ಜನಿಸಿರುವುದು ದೊಡ್ಡ ಆನಂದವನ್ನೇ ತಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us