/newsfirstlive-kannada/media/post_attachments/wp-content/uploads/2025/05/Prithvi-Bhat1.jpg)
ಸರಿಗಮಪ ಗಾಯಕಿಯಾಗಿ ಮಿಂಚಿದ್ದ ಪೃಥ್ವಿ ಭಟ್ ಸಖತ್ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಚಾರ ಭಾರೀ ಸದ್ದು ಮಾಡಿತ್ತು.
ಇದನ್ನೂ ಓದಿ:ತೆರೆಗೆ ಬರೋದಕ್ಕೆ ಸಜ್ಜಾದ ಕರ್ಣ ಸೀರಿಯಲ್.. ಭವ್ಯಾ, ನಮ್ರತಾ ಕ್ಯಾರೆಕ್ಟರ್ ಹೇಗಿರುತ್ತೆ?
ಗಾಯಕಿ ಪೃಥ್ವಿ ಭಟ್ ಅವರು ಪೋಷಕರ ವಿರೋಧದ ನಡುವೆಯೂ ದೇವಾಲಯವೊಂದರಲ್ಲಿ ಮಾರ್ಚ್ 27ರಂದು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.
ಇನ್ನೂ ಮಗಳು ಪೃಥ್ವಿ ಭಟ್ ಮದುವೆ ಬಗ್ಗೆ ತಂದೆ ಶಿವಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ.
ಪೃಥ್ವಿ ಭಟ್ ಹಾಗೂ ಅಭಿಷೇಕ್ ಆರತಕ್ಷತೆ ಸಮಾರಂಭದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಇಬ್ಬರಿಗೂ ಶುಭ ಹಾರೈಸುತ್ತಿದ್ದಾರೆ. ಇನ್ನೂ, ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ರಿಸೆಪ್ಶನ್ಗೆ ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್ಬಾಸ್ ಸೀಸನ್ 11ರ ವಿನ್ನರ್, ಗಾಯಕ ಹನುಮಂತ ಲಮಾಣಿ ಬಂದಿದ್ದಾರೆ.
ಅಲ್ಲದೇ ಸ್ಟಾರ್ ಗಾಯಕ ವಿಜಯ್ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ