Advertisment

VIDEO: ಪ್ರೇಯಸಿಯೊಂದಿಗೆ ಕದ್ದು ಮುಚ್ಚಿ ಜಾಲಿ ರೈಡ್.. ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸರಪಂಚ; ನಡುರೋಡಲ್ಲಿ ಡಿಶುಂ, ಡಿಶುಂ!

author-image
Gopal Kulkarni
Updated On
VIDEO: ಪ್ರೇಯಸಿಯೊಂದಿಗೆ ಕದ್ದು ಮುಚ್ಚಿ ಜಾಲಿ ರೈಡ್.. ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸರಪಂಚ; ನಡುರೋಡಲ್ಲಿ ಡಿಶುಂ, ಡಿಶುಂ!
Advertisment
  • ಪ್ರೇಯಸಿಯೊಂದಿಗೆ ಜಾಲಿ ರೈಡ್ ಹೊರಟಿದ್ದ ಸಿಕ್ಕಿಬಿದ್ದ ಪತಿ
  • ಕಾರಿನಲ್ಲಿ ಜೋಡಿಗಳನ್ನು ನೋಡಿದ ಪತ್ನಿ ಮಾಡಿದ್ದೇನು ಗೊತ್ತಾ?
  • ಪತ್ನಿ, ಪ್ರೇಯಸಿಯ ಡಿಶುಂ ಡಿಶುಂಗೆ ಸಾಕ್ಷಿಯಾದ ಉಜ್ಜೈನಿ ರಸ್ತೆ

ಕಳ್ಳ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂಬ ಭ್ರಮೆಯಲ್ಲಿ ಇರುತ್ತಂತೆ. ಅವರ ಹಾಗೆಯೇ ಈ ಕಳ್ಳ ಸಂಬಂಧ ಇಟ್ಟುಕೊಂಡವರು ಭಾವಿಸಿರುತ್ತಾರೆ. ನಮ್ಮ ಅಕ್ರಮ ಪ್ರೀತಿಯ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭ್ರಮಿಸಿರುತ್ತಾರೆ. ಆದ್ರೆ ಜಗತ್ತಿಗೆ ಸಾವಿರ ಕಣ್ಣುಗಳಿವೆ ಒಂದಲ್ಲ ಒಂದು ರೂಪದಲ್ಲಿ ಅದು ಬಹಿರಂಗಗೊಳ್ಳುತ್ತದೆ. ಮಧ್ಯಪ್ರದೇಶದಲ್ಲಿ ಗರ್ಲ್​ಫ್ರೆಂಡ್​ ಜೊತೆ ಕಳ್ಳ ಬೆಕ್ಕಿನ ಹಾಗೆ ಓಡಾಡುತ್ತಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ. ನಮ್ಮ ಸಂಬಂಧ ಯಾರಿಗೂ ಗೊತ್ತಿಲ್ಲ ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವಾಗಲೇ ಕಾರಿಗೆ ಅಡ್ಡವಾಗಿ ಬಂದು ನಿಂತಿದ್ದಳು ಪತ್ನಿ

Advertisment

ಇದನ್ನೂ ಓದಿ:ಮುಹೂರ್ತಕ್ಕೆ ಸರಿಯಾಗಿ ಮದುವೆ ಬೇಡ ಎಂದ ಮದುಮಗಳು.. ವರ ಹಾಗೂ ಆತನ ತಂದೆ ಅರೆಸ್ಟ್; ಅಸಲಿಗೆ ಆಗಿದ್ದೇನು?

ಮಧ್ಯಪ್ರದೇಶದ ಈ ಒಂದು ಘಟನೆ ನಡೆದಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಜೀತೆಂದರ್​, ಮನೆಯಲ್ಲಿ ಪತ್ನಿಯಿದ್ದರೂ ಕೂಡ ಮತ್ತೊಂದು ಗರ್ಲ್​ಫ್ರೆಂಡ್​ ಜೊತೆ ಕಾರಿನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದರು. ಇದನ್ನು ಅರಿತ ಅವರ ಪತ್ನಿ ಕಾರಿನಲ್ಲಿದ್ದ ಜಿತೇಂದರ್ ಮಾಲಿಯ ಪ್ರೇಯಸಿಯನ್ನು ಕಾರಿನಿಂದ ಹೊರಕ್ಕೆ ಎಳೆದು ಥಳಿಸಿದ್ದಾಳೆ.

Advertisment


">November 16, 2024


ಕಾರಿನಲ್ಲಿ ಹೋಗುತ್ತಿದ್ದ ಜೋಡಿಯನ್ನು ನೋಡಿದ ಪತ್ನಿಯ ರೋಷಾಗ್ನಿಯನ್ನು ರಸ್ತೆಯಲ್ಲಿ ಇಡೀ ಊರಿನ ಜನರೇ ನೊಡಿದ್ದಾರೆ. ಈ ಒಂದು ಘಟನೆ ಮಧ್ಯಪ್ರದೇಶದ ನಿಮುಚ್ ಜಿಲ್ಲೆಯ ಸವಾನ್ ಗ್ರಾಮದಲ್ಲಿ ನಡೆದಿದೆ. ತನ್ನನ್ನು ಹೀಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪತ್ನಿ ವಿರುದ್ಧ ಆತನ ಪ್ರೇಯಸಿ ಉಜ್ಜೈನಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment