ಪಾಗಲ್ ಪ್ರೇಮಿಯ ಒನ್​ ಸೈಡ್ ಲವ್ ಸ್ಟೋರಿ.. ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದು ನಿಂತ ಕಿರಾತಕ..! Video

author-image
Ganesh
Updated On
ಪಾಗಲ್ ಪ್ರೇಮಿಯ ಒನ್​ ಸೈಡ್ ಲವ್ ಸ್ಟೋರಿ.. ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದು ನಿಂತ ಕಿರಾತಕ..! Video
Advertisment
  • ಶಾಲಾ ಬಾಲಕಿ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ
  • ಸೈಕೋ ಪ್ರಿಯಕರನಿಂದ ಚಾಕು ಹಿಡಿದು ಹುಚ್ಚಾಟ
  • ಮಹಾರಾಷ್ಟ್ರದ ಸತಾರದಲ್ಲಿ ಭಯಾನಕ ಘಟನೆ

ಯುವಕನೊಬ್ಬನ ‘ಒನ್ ಸೈಡ್ ಲವ್’ ಸ್ಟೋರಿ ಹೈಡ್ರಾಮಕ್ಕೆ ಮಹಾರಾಷ್ಟ್ರದ ಸತಾರ್ ಜಿಲ್ಲೆ ಬೆಚ್ಚಿಬಿದ್ದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿಯನ್ನು ತಡೆದು ಕುತ್ತಿಗೆಗೆ ಚಾಕು ಹಿಡಿದು ನಿಂತಿದ್ದ. ನಾನು ನಿನ್ನ ಪ್ರೀತಿ ಮಾಡುತ್ತಿದ್ದೇನೆ, ನೀನು ಯಾಕೆ ಪ್ರೀತಿಸುತ್ತಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಬಾಲಕಿ ಪ್ರೀತಿ ಮಾಡೊದಿಲ್ಲ ಎಂದಿದ್ದಕ್ಕೆ ಆಕೆಯ ಕುತ್ತಿಗೆಗೆ ಚಾಕು ಹಿಡಿದು ನಿಂತಿದ್ದ.

ಇದನ್ನು ಪ್ರಶ್ನಿಸಿದಾಗ ಅಪ್ರಾಪ್ತೆಯ ಕುತ್ತಿಗೆಗೆ ಚಾಕು ಇರಿಯೋದಾಗಿ ಬೆದರಿಸಿದ್ದಾನೆ. ಹೀಗಾಗಿ ಆತನಿಂದ ಬಾಲಕಿಯನ್ನು ತಪ್ಪಿಸಲು ಜನ ಹಿಂದೇಟು ಹಾಕಿದ್ದಾರೆ. ಕೆಲವು ಹೊತ್ತು ಅದೇ ರೀತಿಯ ಹೈಡ್ರಾಮಾ ನಡೆಯಿತು. ನಂತರ ಹಿಂದಿನಿಂದ ಬಂದ ಯುವಕನೊಬ್ಬ ಆತನ ಕೈಯಲ್ಲಿದ್ದ ಚಾಕುವನ್ನ ಕಿತ್ಕೊಂಡಿದ್ದಾನೆ.

ನಂತರ ಆತನನ್ನು ಉಳಿದವರು ಹಿಡಿದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕೊನೆಗೆ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ. ಬಾಲಕಿಗೆ ಈ ಹಿಂದೆಯೂ ಆ ಯುವಕ ಕಿರುಕುಳ ನೀಡಿದ್ದ. ಈ ಬಾರಿ ಮಿತಿಮೀರಿ ವರ್ತಸಿದ್ದಾನೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? ಯಾರಿಗೆಲ್ಲಾ ವೋಟ್ ಹಾಕುವ ಹಕ್ಕಿದೆ ಗೊತ್ತಾ?

ಪಾಗಲ್ ಪ್ರೇಮಿಯಿಂದ ಅಪ್ರಾಪ್ತ ಬಾಲಕಿಯನ್ನ ರಕ್ಷಣೆ ಮಾಡಿದ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಂಜೆ ಎಂಬಲ್ಲಿ ಘಟನೆ ನಡೆದಿದೆ. ಸತಾರ ನಿವಾಸಿ ಆರ್ಯನ ವಾಘ್ಮಾಳೆ ಎಂಬಾತ ಆರೋಪಿ. ಈ ಯುವಕನ ವಿರುದ್ಧ ಪೋಕ್ಸೋ ಮತ್ತು ಕೊಲೆಗೆಯತ್ನ ಪ್ರಕರಣದಡಿ‌ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಸರ್ಫರಾಜ್​ ಖಾನ್​ಗೆ ಚಾಲೆಂಜ್; ಅಪ್ಪ-ಮಗ ಮಧ್ಯೆ ಫೈಟ್..! ಯಾವ ವಿಚಾರಕ್ಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment