Advertisment

₹1 ಪಡೆಯದೇ ವಿನೋದ್ ದೋಂಡಾಲೆ ಜೊತೆ ಸಿನಿಮಾ ಮಾಡ್ತಿದ್ದೆ.. ಕಣ್ಣೀರು ಹಾಕಿ ಸತೀಶ್​ ನೀನಾಸಂ ಹೇಳಿದ್ದೇನು?

author-image
Bheemappa
Updated On
₹1 ಪಡೆಯದೇ ವಿನೋದ್ ದೋಂಡಾಲೆ ಜೊತೆ ಸಿನಿಮಾ ಮಾಡ್ತಿದ್ದೆ.. ಕಣ್ಣೀರು ಹಾಕಿ ಸತೀಶ್​ ನೀನಾಸಂ ಹೇಳಿದ್ದೇನು?
Advertisment
  • 15 ದಿನ ಶೂಟಿಂಗ್ ಆಗಿದ್ರೆ ಅಶೋಕ್ ಬ್ಲೇಡ್ ಮೂವಿ ಪೂರ್ಣ ಆಗ್ತಿತ್ತು
  • ಈ ಸಿನಿಮಾದ ಕಥೆ ಗೆಲ್ಲಲಿ ಅಂತ ಒಂದೂ ರೂಪಾಯಿ ಪಡೆದಿರಲಿಲ್ಲ
  • ‘ಇಬ್ರು ವಾರಕ್ಕೊಮ್ಮೆ ಭೇಟಿಯಾಗಿ ಖುಷಿ ಖುಷಿಯಾಗಿ ಮಾತಾಡ್ತಿದ್ದೇವು’

ಬೆಂಗಳೂರು: ಕರಿಮಣಿ ಧಾರಾವಾಹಿ ನಿರ್ದೇಶಕರಾಗಿದ್ದ ವಿನೋದ್ ದೋಂಡಾಲೆ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಸ್ಯಾಂಡಲ್​ವುಡ್​ ನಟ ಸತೀಶ್​ ನೀನಾಸಂ ಅವರು ವಿನೋದ್ ದೋಂಡಾಲೆ ಅವರ ಅಂತಿಮ ದರ್ಶನ ಪಡೆದು ತೀವ್ರ ದುಃಖಿತರಾಗಿದ್ದಾರೆ.

Advertisment

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​​ಗೆ​ ಬಿಗ್ ಶಾಕ್.. ರೋಹಿತ್, ಸೂರ್ಯ ಬೇರೆ ಟೀಮ್​ಗೆ ಹೋಗೋದು ಕನ್​ಫರ್ಮ್​?

ನಿರ್ದೇಶಕ ವಿನೋದ್ ದೋಂಡಾಲೆ ಅವರ ಅಂತಿಮ ದರ್ಶನ ಪಡೆದುಕೊಂಡ ಬಳಿಕ ಮಾತನಾಡಿದ ಸ್ಯಾಂಡಲ್​ವುಡ್​ ನಟ ಸತೀಶ್​ ನೀನಾಸಂ, ವಿನೋದ್ ಅವರು ಯಾಕೆ ಹೀಗೆ ಮಾಡಿಕೊಂಡರೆಂದು ನಮಗೆ ಮಾಹಿತಿ ಇಲ್ಲ. ಇನ್ನು 15 ದಿನದಲ್ಲಿ ಅಶೋಕ್ ಬ್ಲೇಡ್​ ಸಿನಿಮಾ ಶೂಟಿಂಗ್ ಮುಗಿದೇ ಹೋಗುತ್ತಿತ್ತು. ವಿಜಯ್ ಕಿರಗಂದೂರು ಸೇರಿದಂತೆ ಬೇರೆ ಬೇರೆಯವರಿಗೆಲ್ಲ ಸಿನಿಮಾ ತೋರಿಸಲಾಗಿತ್ತು. ಎಲ್ಲ ಸಖತ್ ಆಗೈತೆ ಎಂದಿದ್ದರು. ವಾರಕ್ಕೊಮ್ಮೆ ಭೇಟಿ ಮಾಡಿ ಖುಷಿ ಖುಷಿಯಾಗಿ ಮಾತಾಡುತ್ತಿದ್ದೇವು. ಸಿನಿಮಾಕ್ಕಾಗಿ ಎಲ್ಲ ಟೆಕ್ನಿಷಿಯನ್ಸ್ ಸಿಕ್ಕಾಪಟ್ಟೆ ಎಫೆಕ್ಟ್ ಹಾಕಿದ್ದರು. ಇನ್ನು ದುಡ್ಡು ಕೊಡೋದು ಬ್ಯಾಲೆನ್ಸ್ ಇದ್ದರು ಎಲ್ಲರೂ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಾಯಕ್ವಾಡ್​ಗೆ ಬಿಗ್​ ಶಾಕ್ ಕೊಟ್ಟ ರಿಷಬ್​ ಪಂತ್.. CSK ಕ್ಯಾಪ್ಟನ್ ಆಗ್ತಾರಾ ಯಂಗ್ ಪ್ಲೇಯರ್?

Advertisment

publive-image

ಇದು ಅಶೋಕ್ ಬ್ಲೇಡ್ ಸಿನಿಮಾದ ಸಮಸ್ಯೆಯಲ್ಲ. ನೋಡಿದವರೆಲ್ಲ ಸಿನಿಮಾ ಅಷ್ಟು ಚೆನ್ನಾಗಿ ಬಂದೈತೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಸಿನಿಮಾ ಸಮಸ್ಯೆಯಲ್ಲ. ಬೇರೆ ಏನೋ ಆಗಿದೆ. ಸಿನಿಮಾಕ್ಕೂ ಇದಕ್ಕೂ ಸಂಬಂಧನೇ ಇಲ್ಲ. ಒಂದು ರೂಪಾಯಿ ಪಡೆಯದೇ ಈ ಸಿನಿಮಾ ಮಾಡುತ್ತಿದ್ದೇನೆ. ಈ ಸಿನಿಮಾದ ಕಥೆಗಾಗಿ, ಈ ಸಿನಿಮಾ ಗೆಲ್ಲಲಿ ಅಂತ ಮಾಡಿದೆ. ಸಮುದಾಯಕ್ಕೆ ಆಗಿರೋ ನೋವು ಎಲ್ಲ ಕೇಳಿ ಅಭಿನಯ ಮಾಡಲು ಒಪ್ಪಿದೆ. ಅದಕ್ಕೆ ಗೆದ್ದ ಮೇಲೆ ಹಣ ಕೊಡಿ ಎಂದು ಜೊತೆಗಿದ್ದು ಮೂವಿ ಮಾಡಿದೆ. ಎಲ್ಲ ಮಾಡಿ ಒಳ್ಳೆ ಎಂಡ್​ ಆಗಬೇಕಿತ್ತು. ಅವರೇ ಇಲ್ಲ ಎಂದಾಗ ನೋವು ಇದ್ದೆ ಇರುತ್ತಲ್ವಾ. 3 ವರ್ಷ ಜೊತೆ ಇದ್ದೇವು. ಇದು ಆಗಿರುವುದು ನೋಡಿ ನೋವಾಗುತ್ತಿದೆ ಎಂದು ಸತೀಶ್​ ನೀನಾಸಂ ಹೇಳಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment