Advertisment

ಬಹುದಿನಗಳ ಕನಸು ನನಸು ಮಾಡಿಕೊಂಡ ‘ಎದೆ ತುಂಬಿ ಹಾಡುವೆನು’ ವಿನ್ನರ್​ ರಕ್ಷಿತಾ ಭಾಸ್ಕರ್; ಏನದು?

author-image
Veena Gangani
Updated On
ಬಹುದಿನಗಳ ಕನಸು ನನಸು ಮಾಡಿಕೊಂಡ ‘ಎದೆ ತುಂಬಿ ಹಾಡುವೆನು’ ವಿನ್ನರ್​ ರಕ್ಷಿತಾ ಭಾಸ್ಕರ್; ಏನದು?
Advertisment
  • ಹೊಸ ಹೆಜ್ಜೆಯಿಟ್ಟ ಕನ್ನಡ ಕಿರುತೆರೆ ಕ್ಯೂಟ್​ ನಟಿ ರಕ್ಷಿತಾ ಭಾಸ್ಕರ್
  • ನಟನೆಯ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ನಟಿ ರಕ್ಷಿತಾ ಜಯಭೇರಿ
  • ಸತ್ಯ ಸೀರಿಯಲ್​ ನಟಿ ರಕ್ಷಿತಾ ಭಾಸ್ಕರ್ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡ ಕಿರುತೆರೆ ಕ್ಯೂಟ್​ ನಟಿ ಅಂದರೆ ಅದು ರಕ್ಷಿತಾ ಭಾಸ್ಕರ್. ಸತ್ಯ ಸೀರಿಯಲ್​ನಲ್ಲಿ ರೀತು ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ ನಟಿ ರಕ್ಷಿತಾ ಭಾಸ್ಕರ್. ಈ ರೀತು ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ನಟಿ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ.

Advertisment

publive-image

ಇದನ್ನೂ ಓದಿ:ತರುಣ್​​ ಕೈ ಹಿಡಿಯುತ್ತಿರುವ ಸೋನಲ್​ ಯಾರು? ಮೂಲತಃ ಎಲ್ಲಿಯವ್ರು? ಇಲ್ಲಿದೆ ಮಾಹಿತಿ

ಹೌದು, ನಟಿ ರಕ್ಷಿತಾ ಭಾಸ್ಕರ್ ಅವರು​ ಅಭಿನಯದ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗ ನಟಿ ರಕ್ಷಿತಾ ಬಗ್ಗೆ ಕೆಲವೊಂದಿಷ್ಟು ಇಂಟ್ರಸ್ಟಿಂಗ್​ ಸಂಗತಿಗಳು ಇಲ್ಲಿವೆ. ಸದ್ಯ ಹಲವು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರೋ ರಕ್ಷಿತಾ ಅವರು ಅದ್ಭುತ ಹಾಡುಗಾರ್ತಿ. ಸಂಗೀತ ದಿಗ್ಗಜ, ಗಾನ ಕೋಗಿಲೆ ಎಸ್.​ಪಿ ಬಾಲಸುಬ್ರಮಣ್ಯಂ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮವಾದ ಎದೆ ತುಂಬಿ ಹಾಡುವೆನು 2006ರ ವಿನ್ನರ್​ ಆಗಿದ್ದವರು.

Advertisment

ಬಾಲ ಕಲಾವಿದೆ ಆಗಿ ರಂಜಿಸಿದ್ದ ಇವರು ಗಾಯಕ ವಾಸುಕಿ ವೈಭವ್​ ಅವರ ಪತ್ನಿ ಬೃಂದಾ ಅವರ ತಂಡದಲ್ಲಿ ಸರಿಗಮಪ ಶೋನ ವಿನ್ನರ್​ ದರ್ಶನ್​ ನಾರಾಯಣ ಜೊತೆ ರಂಗಭೂಮಿಯಲ್ಲೂ ರಕ್ಷಿತಾ ಸಕ್ರಿಯರಾಗಿದ್ರು. ಅಭಿನಯದ ಜೊತೆಗೆ ರಕ್ಷಿತಾ ಹಾಡಿನ ಮಾಧುರ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿವೆ. ಸಾಕಷ್ಟು ಪ್ರತಿಭೆಯನ್ನು ಹೊಂದಿರೋ ರಕ್ಷಿತಾ ಸಂಗೀತಕ್ಕೆ ಮಾರು ಹೋಗಿದ್ದಾರೆ.

ಇದೀಗ ನಟಿ ರಕ್ಷಿತಾ ಅವರು ‘ತ್ರಿಧಾ ಮ್ಯೂಸಿಕ್ ಅಕಾಡೆಮಿ’ ಒಂದನ್ನು ಶುರು ಮಾಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತ್ರಿಧಾ ಮ್ಯೂಸಿಕ್ ಅಕಾಡೆಮಿ ಹೊಸ ಪೇಜ್​ವೊಂದನ್ನು ಕ್ರಿಯೇಟ್ ಮಾಡಿದ್ದಾರೆ. ಅದರ ಜೊತೆಗೆ ಎಲ್ಲರಿಗೂ ನಮಸ್ಕಾರ.. ಸರ್ವಶಕ್ತ ಮತ್ತು ನನ್ನ ಹೆತ್ತವರ ಆಶೀರ್ವಾದದೊಂದಿಗೆ, ನನ್ನ ಕನಸಿನ ಯೋಜನೆಯಾದ "ತ್ರಿಧಾ ಮ್ಯೂಸಿಕ್ ಅಕಾಡೆಮಿ" ಅನ್ನು ಪರಿಚಯಿಸಲು ನಾನು ರೋಮಾಂಚನಗೊಂಡಿದ್ದೇನೆ. ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಲೋಗೋವನ್ನು ಅನಾವರಣಗೊಳಿಸಲು ನಾನು ಉತ್ಸುಕನಾಗಿದ್ದೇನೆ. ನಿಮ್ಮ ಆಶೀರ್ವಾದವನ್ನು ನನ್ನ ಮೇಲೆ ಧಾರೆಯೆರೆಯುತ್ತಿರಿ ಎಂದು ಬರೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment