/newsfirstlive-kannada/media/post_attachments/wp-content/uploads/2024/10/SATISH-3.jpg)
ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಕೇಳಿ ಬಂದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಸಿಎಂ ಕುರ್ಚಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ನಡುವೆ ನಿನ್ನೆ ಸಿಎಂ ತವರಲ್ಲೇ ಮೂವರು ಸಚಿವರು ರಹಸ್ಯ ಸಭೆ ನಡೆಸಿ ಕುತೂಹಲ ಮೂಡಿಸಿದ್ದಾರೆ.
ಸಿದ್ದು ತವರಲ್ಲೇ ರಹಸ್ಯ ಸಭೆ
ಹೊರಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಯ ಅಗತ್ಯವೇ ಇಲ್ಲ ಅನ್ನುವ ಸಚಿವರು ಒಳಗೊಳಗೆ ರಹಸ್ಯ ಸಭೆ ಮಾಡ್ತಾ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕ್ತಾನೇ ಇದ್ದಾರೆ. ಅದರಲ್ಲೂ ದಲಿತ ಸಿಎಂ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೇ ನಿಟ್ಟಿನಲ್ಲಿ ಕಾಂಗ್ರೆಸ್ನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ. 3-4 ದಿನಗಳ ಹಿಂದೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯನ್ನ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ರು. ಬಳಿಕ ಮೊನ್ನೆ ಪರಮೇಶ್ವರ್, ಸತೀಶ್ ಜಾರಕಿಹೊಳಿ ಭೇಟಿಯಾಗಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ರು. ಈ ಬೆನ್ನಲ್ಲೇ ಈಗ ಮತ್ತೆ ಸಚಿವರು ಭೇಟಿಯಾಗಿದ್ದಾರೆ.
ಇದನ್ನೂ ಓದಿ:ಹರಿಯಾಣ ಸೋಲು ಒಪ್ಪಿಕೊಳ್ಳದ ಕಾಂಗ್ರೆಸ್; ಬೇರೆಯದ್ದೇ ಆರೋಪ ಮಾಡಿದ ನಾಯಕರು..!
ಇಂದು ಸಿಎಂ ಜಾರಕಿಹೊಳಿ ಭೇಟಿ
ದಲಿತ ಸಿಎಂ ಚರ್ಚೆ ಇರುವಾಗಲೇ ಸಿದ್ದರಾಮಯ್ಯ ತವರು ಮೈಸೂರಿನಲ್ಲೇ ಕಳೆದ ರಾತ್ರಿ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ. ಮೂವರು ದಲಿತ ಸಚಿವರು ಮೀಟಿಂಗ್ ಮಾಡಿದ್ದಾರೆ. ಮಹದೇವಪ್ಪ, ಜಾರಕಿಹೊಳಿ, ಜಿ.ಪರಮೇಶ್ವರ್, ಮಹದೇವಪ್ಪರ ಮನೆಯಲ್ಲಿ ಸಮಾಗಮವಾಗಿದ್ದಾರೆ. ಈ ವೇಳೆ 10 ಶಾಸಕರು ಕೂಡ ಜೊತೆಗಿದ್ದರು. ಇಂದು ಸಂಜೆ ಸಚಿವ ಸತೀಶ್ ಜಾರಕಿಹೊಳಿ ಎಸ್ಟಿ ಶಾಸಕರ ನಿಯೋಗದ ಜೊತೆ ತೆರಳಿ ಸಿದ್ದರಾಮಯ್ಯ ಭೇಟಿ ಆಗಲಿದ್ದಾರೆ.
ಒಟ್ಟಾರೆ ಮುಡಾ ಪ್ರಕರಣ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಬೆನ್ನಲ್ಲೇ ದಲಿತ ಸಿಎಂ ವಿಚಾರ ಚರ್ಚೆಗೆ ಬಂದಿದೆ. ಹೀಗಾಗಿ ಸಚಿವರ ಮೇಲಿಂದ ಮೇಲೆ ಸಭೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಇದನ್ನೂ ಓದಿ:ಡಿ.ಕೆ ಶಿವಕುಮಾರ್ ಮೇಲೆ ಗರಂ ಆದ ಸಚಿವ ಸತೀಶ್ ಜಾರಕಿಹೊಳಿ; ನಾವೆಲ್ಲಾ ಹೆದರಲ್ಲ ಅಂದಿದ್ದೇಕೆ ಸಾಹುಕಾರ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ