/newsfirstlive-kannada/media/post_attachments/wp-content/uploads/2024/10/Satish-jarkiholi-Siddaramaiah.jpg)
ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ. ಆದ್ರೂ ಸಿಎಂ ಸ್ಥಾನದ ಆಕಾಂಕ್ಷಿಗಳ ಹೆಸರು ಮಾತ್ರ ಅಂತಿದ್ದಿತ್ತ, ಇತ್ತಿದ್ದಂತ ಓಡಾಡ್ತಿದೆ. ಈ ನಡುವೆ 2028ರಲ್ಲಿ ಕಾಂಗ್ರೆಸ್ ಗೆದ್ರೆ ಯಾರು ಸಿಎಂ ಆಗ್ತಾರೆ? ಅನ್ನೋ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬಂದ ಅದೊಂದು ಮಾತು.
ಇರೋದು ಒಂದು ಸೀಟು. ಅದಕ್ಕೆ ಹತ್ತಾರು ಟವಲ್​. ಇದು ಬಿಎಂಟಿಸಿ ಬಸ್ ಸೀಟ್ ಅಲ್ಲ. ಸಿಎಂ ಸೀಟು. ಸದ್ಯಕ್ಕೆ ಆ ಕುರ್ಚಿಯಲ್ಲಿ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದಾರೆ. ಆದರೆ, ಶಾಂತ ಮೋಡದಲ್ಲಿ ಎದ್ದ ಮುಡಾ ಅನ್ನೋ ಗುಡುಗು, ಸಿಎಂ ಸ್ಥಾನವನ್ನ ಗಢಗಢ ಮಾಡ್ತಿರೋ ಅನುಭವ ಕೊಡ್ತಿದೆ. ಈ ನಡುವೆ ನಾನು ನಾನು ಅಂತಾ ಸಿಎಂ ಸ್ಥಾನದ ಸುತ್ತಾ ಹಲವು ಹೆಸರುಗಳು ಸುಂಟರಗಾಳಿಯಂತೆ ರೌಂಡ್ ಹಾಕ್ತಿವೆ.
/newsfirstlive-kannada/media/post_attachments/wp-content/uploads/2024/09/SATISH-JARKIHOLI.jpg)
ಮುಡಾ ಪ್ರಕರಣದಿಂದ ಸಿಎಂ ಮಂಡೆಬಿಸಿ ಹೆಚ್ಚಾಗಿದ್ದು, ನಾಯಕತ್ವ ಬದಲಾವಣೆ ಚರ್ಚೆಯ ಗಾಳಿ ಬೀಸ್ತಿದೆ. ಈ ರೇಸ್​ನಲ್ಲಿ ಯಾಱರಿಲ್ಲ. ಕಾಂಗ್ರೆಸ್ ನಾಯಕರ ಜೊತೆ ಕುಮಾರಸ್ವಾಮಿಯೂ ತಮ್ಮ ಹೆಸರನ್ನ ತೇಲಿ ಬಿಟ್ಟಿದ್ದಾರೆ. ಅದು ಇನ್ನೊಂದು ಲೆಕ್ಕ ಬಿಡಿ. ಸದ್ಯಕ್ಕೆ ಹಸ್ತಪಡೆಯಲ್ಲಿ ಹಲವರು ಸಿಎಂ ಕುರ್ಚಿಯೇರಲು ಕೈ ಎತ್ತಿ ನಿಂತಿದ್ದಾರೆ. ಅದರಲೊಬ್ಬರು ಸತೀಶ್ ಜಾರಕಿಹೊಳಿ.
ಇದನ್ನೂ ಓದಿ: ‘ಜಾಸ್ತಿ ಮಕ್ಕಳನ್ನು ಮಾಡಿಕೊಳ್ಳಿ‘; ಆಂಧ್ರಪ್ರದೇಶದ ಸಿಎಂ ಕೊಟ್ರು ಅಚ್ಚರಿಯ ಆಫರ್!
ಹಳ್ಳಿಯಿಂದ ದಿಲ್ಲಿಯವರೆಗೂ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಅನ್ನೋ ಮಳೆ ಸುರಿದಿದೆ. ಈ ಮಳೆಯ ಎಫೆಕ್ಟ್​ನಿಂದ ಸಾಹುಕಾರ್ ಪರ ಪೋಸ್ಟರ್​ಗಳು, ಮುಂದಿನ ಸಿಎಂ ಅನ್ನೋ ಘೋಷಣೆಗಳು ಹೋದೆಲೆಲ್ಲಾ ಕಾಣಸಿಕ್ಕಿದೆ. ವಿಜಯಪುರದಲ್ಲೂ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂಬ ಘೋಷಣೆ ಕೇಳಿಬಂದಿದೆ. ಪುತ್ರಿ ಪ್ರಿಯಾಂಕಾ ಮುಂದೆ ಅಪ್ಪನ ಹೆಸರು ಪ್ರತಿಧ್ವನಿಸಿದೆ.
/newsfirstlive-kannada/media/post_attachments/wp-content/uploads/2024/10/Priyanka-jarakiholi.jpg)
ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿಯವರಿಗೆ ಎಂಬ ಘೋಷಣೆಗಳು ಕೇಳಿ ಬರುತ್ತಿವೆ. ಹೀಗೆ ಅಭಿಮಾನಿಗಳ ಜೈಕಾರದ ಝೇಂಕಾರ ಬಗ್ಗೆ ಪ್ರಿಯಾಂಕಾ ಜಾರಕಿಹೊಳಿಯವರನ್ನೇ ಪ್ರಶ್ನಿಸಿದ್ರೆ ಸ್ಫೋಟಕ ಉತ್ತರವೊಂದನ್ನ ನೀಡಿದ್ರು. 2028ರಲ್ಲಿ ತಂದೆ ಸತೀಶ್ ಜಾರಕಿಹೊಳಿ ಆಗಬಹುದೆಂದ ಪುತ್ರಿ, ಏನೂ ಬೇಕಾದ್ರೂ ಆಗಬಹುದು ಅನ್ನೋ ಅನುಮಾನದ ಬಾಂಬ್ ಸ್ಫೋಟಿಸಿದ್ರು.
ಇದನ್ನೂ ಓದಿ: ಹೊಳೆಯಂತಾದ ಬೆಂಗಳೂರು.. ಒಂದಾ, ಎರಡಾ, ಸಾಲು ಸಾಲು ಅವಾಂತರಗಳ ನಡುವೆ ಸಂಕಷ್ಟದಲ್ಲಿ ಜನರು
ಎಲ್ಲಾ ಹೈಕಮಾಂಡ್​ಗೆ ಬಿಟ್ಟಿದ್ದು ಅಂತಾ ಹೇಳೋ ಮೂಲಕ ದೆಹಲಿ ಮಟ್ಟದಲ್ಲಿ ಚರ್ಚೆಯಾಗಿರಬಹುದು ಅನ್ನೋ ಸುಳಿವೊಂದನ್ನ ಬಿಟ್ಟುಕೊಟ್ಟಿದ್ದಾರೆ ಅಂತಾ ರಾಜಕೀಯ ವಿಶ್ಲೇಕರು ಹೇಳ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಸಿಎಂ ಆಕಾಂಕ್ಷಿಯೂ ಆಗಿರೋ ಡಿ.ಕೆ ಶಿವಕುಮಾರ್​ ಕೂಡ 2028ಕ್ಕೆ ನಮ್ಮ ಪಕ್ಷಕ್ಕೆ ಅಧಿಕಾರ ಅಂತಿದ್ದಾರೆ. ಆದ್ರೆ, ಇನ್ನೊಂದು ಹೆಜ್ಜೆ ಮುಂದೆ ಹೋಗಿರೋ ಬೆಳಗಾವಿ ಮಂದಿ 2028 ಸಿಎಂ ಆಗೋ ಆಸೆ ಹೊರಹಾಕಿದ್ದಾರೆ. ಇನ್ನೂ ಏನಾಗುತ್ತೋ? ಯಾಕಂದ್ರೆ ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us