/newsfirstlive-kannada/media/post_attachments/wp-content/uploads/2025/01/PARAMESHWAR.jpg)
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಸಿಎಂ ಗದ್ದುಗೆಗಾಗಿ ಪೈಪೋಟಿ ನಡೆಯುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷಗಿರಿಗಾಗಿ ಲಾಬಿಯೂ ಜೋರಾಗಿದೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಮ್ಮುಖದಲ್ಲೇ ಕೆಲ ಆಪ್ತ ಸಚಿವರು ಔತಣಕೂಟ ಹೆಸರಲ್ಲಿ ಸೇರಿ ಮಾತು ಕಥೆ ನಡೆಸಿದ್ದರು. ಇದು ನಾನಾ ಆಯಾಮದ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ದಲಿತ ಸಚಿವರು, ಶಾಸಕರಿಗೆ ಡಿನ್ನರ್ ಆಯೋಜನೆ ಮಾಡಿದ್ರು. ಇದು ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಡಿನ್ನರ್ ಮೀಟಿಂಗ್ ದಿಢೀರ್ ರದ್ದಾಗಿತ್ತು. ಆದ್ರೆ ಈಗ ಮತ್ತೆ ಸಚಿವರು ಒಟ್ಟಾಗಿ ಸೇರಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 1 ರಿಂದ ಈ ತಪ್ಪು ಮಾಡಿದ್ರೆ UPIನಿಂದ ನಡೆಯುವ ವ್ಯವಹಾರಗಳು ಕಂಪ್ಲೀಟ್ ಬಂದ್; ತಪ್ಪದೇ ಸ್ಟೋರಿ ಓದಿ!
ವಿಧಾನಸೌಧದ ಗೃಹ ಸಚಿವರ ಕೊಠಡಿಯಲ್ಲಿ ಸಚಿವರಾದ ಡಾ.ಜಿ ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಮೀಟಿಂಗ್ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಮತ್ತೆ ನಾಲ್ವರು ಸಚಿವರು ಸಂಚಲನ ಸೃಷ್ಟಿಸಿದ್ದಾರೆ.
ಸಿಎಂ ಗಾದಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇತ್ತೀಚೆಗೆ ಔತಣಕೂಟಕ್ಕೆ ಬ್ರೇಕ್ ಹಾಕಿದ್ದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದ್ದರು. ಡಿನ್ನರ್ಗೆ ವರಿಷ್ಠರು ಬ್ರೇಕ್ ಹಾಕಿದ್ದಕ್ಕೆ ಸಚಿವ ಪರಂ ಮತ್ತು ಆಪ್ತ ಸಚಿವರು ಅಸಮಾಧಾನಗೊಂಡಿದ್ದರು. ಈಗ ಮತ್ತೆ ಒಂದೆಡೆ ಸೇರಿ ಸಚಿವರು ಸಭೆ ನಡೆಸಿದ್ದರಿಂದ ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ಸಭೆಗಳಿಗೆಲ್ಲಾ ಕಾಂಗ್ರೆಸ್ ಹೈಕಮಾಂಡ್ ರೆಡ್ ಸಿಗ್ನಲ್ ತೋರಿಸಿದ್ರೂ ಸಚಿವರು ಸಭೆ ಮಾಡಿ ಮತ್ತೆ ಕುತೂಹಲ ಗರಿಗೆದರಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ಬಿಗ್ ಅಪ್ಡೇಟ್; ಬಜೆಟ್ ದಿನ LPG ಗ್ಯಾಸ್ ಬೆಲೆ ಹೆಚ್ಚಾಗುತ್ತಾ? ಕಡಿಮೆ ಆಗುತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ