/newsfirstlive-kannada/media/post_attachments/wp-content/uploads/2025/03/SATISH-JARAKIHOLI-1.jpg)
ಸಚಿವ ಕೆ.ಎನ್.ರಾಜಣ್ಣ ಅವರು 48 ನಾಯಕರು ಹನಿಟ್ರ್ಯಾಪ್ ಆಗಿದ್ದಾರೆ ಎಂಬ ಆರೋಪಕ್ಕೆ ಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನ್ಯೂಸ್ಫಸ್ಟ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ರಾಜಣ್ಣ ಅಧಿವೇಶನದಲ್ಲಿ ಹೇಳಿದ್ದು ಒಳ್ಳೆಯದೇ ಆಯ್ತು ಎಂದು ಹೇಳಿದ್ದಾರೆ. ಮುಂದಿನ ಸ್ಟೆಪ್ ಅವರು ದೂರು ನೀಡಬೇಕಾಗಿರುವುದು. ಅವರು ಮಾಡಿದ ಆರೋಪಕ್ಕೆ ಅವರು ದೂರು ನೀಡುವುದು ಅವರ ಕರ್ತವ್ಯ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
40 ಅಲ್ಲ 400 ಮಂದಿಗೆ ಹನಿಟ್ರ್ಯಾಪ್ ಆಗಿರುವ ಸಾಧ್ಯತೆ ಇದೆ. ಇನ್ನೂ ಒಂದು ಸೊನ್ನೆ ಸೇರಿದ್ದರು ಆಶ್ಚರ್ಯವಿಲ್ಲ ಎಂದು ಸತೀಶ್ ಜಾರಕಿಹಿಹೊಳಿ ಇನ್ನೊಂದು ಆರೋಪ ಮಾಡಿದ್ದಾರೆ. ಕೇವಲ ರಾಜ್ಯ ನಾಯಕರಲ್ಲ, ದೆಹಲಿ ನಾಯಕರು ಹಾಗೂ ಅಧಿಕಾರಿಗಳು ಕೂಡ ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂದು ನ್ಯೂಸ್ಫಸ್ಟ್ ಎದುರು ಸತೀಶ್ ಜಾರಕಿಹೊಳಿ ಗಂಭೀರವಾದ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಒಬ್ಬರು, ಇಬ್ಬರೂ ಅಲ್ಲ.. 48 ನಾಯಕರ ಹನಿಟ್ರ್ಯಾಪ್; ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ VIDEO
ಕಳೆದ 20 ವರ್ಷಗಳಿಂದಲೂ ಹನಿಟ್ರ್ಯಾಪ್ ಆಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಅಂತ್ಯ ಹಾಡಬೇಕು. ದೆಹಲಿ ನಾಯಕರು ಪಾಪ ಅಮಾಯಕರು, ಅವರೂ ಹನಿಟ್ರ್ಯಾಪ್ಗೆ ಬಲೆಗೆ ಬಿದ್ದಿದ್ದಾರೆ. ಎಲ್ಲ ಪಕ್ಷದ ನಾಯಕರನ್ನೂ ಹನಿ ಟ್ರ್ಯಾಪ್ ಮಾಡಲಾಗಿದೆ. ಮೀನಿಗೆ ಬಲೆ ಬೀಸಿದಂತೆ ಬೀಸಿ ಹನಿಟ್ರ್ಯಾಪ್ ಮಾಡಿ ಅವರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಜಾರಕಿಹೊಳಿ ಆರೋಪ ಮಾಡಿದ್ದಾರೆ.
ಸಚಿವ ರಾಜಣ್ಣಗೆ ದೂರು ನೀಡುವಂತೆ ನಾನೇ ಹೇಳಿದ್ದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಈ ಜೇನುಬಲೆಗೆ ಬಿದ್ದಿದ್ದಾರೆ. ತಮಗೆ ಬೇಕಾದಾಗ ಯೂಸ್ ಮಾಡ್ತಾರೆ, ಸಿಎಂಗಳನ್ನೂ ಹೆದರಿಸ್ತಾರೆ. ಅಧಿಕಾರಿಗಳನ್ನು ಹೆದರಿಸಿ, ಸೈನ್ ಮಾಡಿಸಿಕೊಳ್ಳುತ್ತಾರೆ ಎಂದು ಆರೋಪಿಸಿರುವ ಸತೀಶ್ ಜಾರಕಿಹೊಳಿ, ಆದಷ್ಟು ಬೇಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮೊದಲು ಏನೂ ಇರಲ್ಲ, ನಂತರ ಸಿಎಂ ಆಗಿರುತ್ತಾರೆ. ಕರ್ನಾಟಕದಲ್ಲಿ ಹನಿಟ್ರ್ಯಾಪ್ ಆರಂಭವಾಗಿದೆ, ಅದು ಕರ್ನಾಟಕದಲ್ಲಿಯೇ ಅಂತ್ಯವಾಗಬೇಕು ಎಂದು ಆಗ್ರಹಿಸಿದ್ದು, ರಾಜಣ್ಣ ದೂರು ಕೊಟ್ಟರೆ ಸತ್ಯಾಂಶ ಹೊರಗೆ ಬರುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ನ್ಯೂಸ್ಫಸ್ಟ್ಗೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ