newsfirstkannada.com

ಸಾವನ್ನೇ ಗೆದ್ದು ಬಂದ ಸಾತ್ವಿಕ್​​.. ಕೇಕ್​​ ಕತ್ತರಿಸಿ ಪೋಷಕರಿಂದ ಸಂಭ್ರಮ

Share :

Published April 6, 2024 at 6:15pm

Update April 6, 2024 at 6:17pm

  ಕೊಳವೆ ಬಾವಿಯಲ್ಲಿ 20 ಗಂಟೆ ಜೀವನ್ಮರಣದ ಮಧ್ಯೆ ಹೋರಾಡಿ ಬಂದ ಮಗು

  ಸಾವು ಗೆದ್ದು ಬಂದ 2 ವರ್ಷದ ಮಗುವಿನ ಆರೋಗ್ಯದಲ್ಲಿ ಸದ್ಯ ಬಹಳ ಚೇತರಿಕೆ

  ಮಕ್ಕಳ ಐಸಿಯು ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾತ್ವಿಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ವಿಜಯಪುರ: ಕೊಳವೆ ಬಾವಿಯಲ್ಲಿ 20 ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಹೋರಾಡಿ ಸಾವು ಗೆದ್ದು ಬಂದಿದ್ದ ಸಾತ್ವಿಕ್​ನನ್ನು​ ಜಿಲ್ಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾತ್ವಿಕ್ ಸದ್ಯ ಆರೋಗ್ಯವಾಗಿದ್ದಾನೆ. ಇದೇ ಖುಷಿಯಲ್ಲಿದ್ದ ಸಾತ್ವಿಕ್​ ಪೋಷಕರಾದ ತಂದೆ ಸತೀಶ್ ಹಾಗೂ ತಾಯಿ ಪೂಜಾ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

21 ಗಂಟೆಗಳ ಕಾಲ ಕೊಳವೆ ಬಾವಿಯೊಳಗೆ ಸಿಲುಕಿದ್ದ ಸಾತ್ವಿಕ್​ನನ್ನ ಹೊರ ತೆಗೆಯುತ್ತಿದ್ದಂತೆ ಇಂಡಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಲೆಕೆಳಗಾಗಿ ಬಿದ್ದಿದ್ದ ಹಿನ್ನೆಲೆ ಸ್ಕ್ಯಾನ್, ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ಐಸಿಯು ಕೇಂದ್ರದಲ್ಲಿ ಸಾತ್ವಿಕ್ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು.

ಇದನ್ನೂ ಓದಿ: ಸಾತ್ವಿಕ್‌ ಸಾಮಾನ್ಯನಲ್ಲ.. ಕೊಳವೆ ಬಾವಿಗೆ ಬಿದ್ದಿದ್ದ ಕಂದನ ರಿಪೋರ್ಟ್‌ಗೆ ಶಾಕ್ ಆದ ವೈದ್ಯರು; ಹೇಳಿದ್ದೇನು?

ತಲೆಕೆಳಗಾಗಿ 20 ಗಂಟೆ ಇದ್ದಿದ್ರಿಂದ ಮೆದುಳಿಗೆ ಏನಾದರೂ ಆಗಿರಬಹುದು ಅಂತ ವೈದ್ಯರು ಅಂದಾಜಿಸಿ ತಲೆ ಸಿಟಿ ಸ್ಕ್ಯಾನ್ ಮಾಡಿದ್ರು. ಆದ್ರೆ ರಿಪೋರ್ಟ್ ನಾರ್ಮಲ್ ನೋಡಿ ವೈದ್ಯರಿಗೂ ಆಶ್ಚರ್ಯ ಪಟ್ಟಿದ್ದರು. ಈಗ ಮಗುವಿನ ದೇಹದ ಎಲ್ಲಾ ಪರೀಕ್ಷೆಗಳ ರಿಪೋರ್ಟ್ ನಾರ್ಮಲ್ ಆಗಿದ್ದು. ಸದ್ಯ ಆರೋಗ್ಯವಾಗಿರೋ ಸಾತ್ವಿಕ್​ನನ್ನು​ ಜಿಲ್ಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇನ್ನು, ಈ ಬಗ್ಗೆ ಸಾತ್ವಿಕ ತಾಯಿ ಪೂಜಾ, ಇದನ್ನು ನೋಡಿದ್ರೆ ತುಂಬಾ ಖುಷಿ ಆಗ್ತಿದೆ. ಹೆತ್ತವಳು ನಾನಲ್ಲ. ಇಲ್ಲಿ ಕಷ್ಟಪಟ್ಟು ಬದುಕಿಸಿಕೊಟ್ಟ ಜಿಲ್ಲಾಧಿಕಾರಿಗಳು, ತುಂಬಾ ಚೆನ್ನಾಗಿ ನೋಡಿದ ವೈದ್ಯರಿಗೆ ಧನ್ಯವಾದಗಳು. ಇವನೇ ನನ್ನ ಮಗನಾ ಅಂತ ಒಂದು ರೀತಿ ಅನ್ನಿಸುತ್ತಿದೆ. ಮೊದಲಿನ ತರಹವಾಗಿ ಸಾತ್ವಿಕ್ ನಗುವುದು ಆಟ ಆಡುತ್ತಿದ್ದಾನೆ. ಏಪ್ರಿಲ್ 28ರಂದು ಸಾತ್ವಿಕ್​ಗೆ ಸಿದ್ದಲಿಂಗ ಎಂದು ನಾಮಕರಣ ಮಾಡ್ತೀವಿ. ಮನೆಯಿಂದ ಸಿದ್ದಲಿಂಗ ಮಠದವರೆಗೆ 1ಕಿಲೋ ಮೀಟರ್ ದೀರ್ಘ ದಂಡ ನಮಸ್ಕಾರ ಹಾಕುತ್ತೇವೆ. ಮಗನಿಗೊಸ್ಕರ ಪ್ರಾರ್ಥನೆ ಮಾಡಿದ ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವನ್ನೇ ಗೆದ್ದು ಬಂದ ಸಾತ್ವಿಕ್​​.. ಕೇಕ್​​ ಕತ್ತರಿಸಿ ಪೋಷಕರಿಂದ ಸಂಭ್ರಮ

https://newsfirstlive.com/wp-content/uploads/2024/04/satvik6.jpg

Load More