newsfirstkannada.com

ಕರ್ನಾಟಕದ ಭತ್ತದ ಮೂಲತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ; ಯಾರು ಈ ಸಾಧಕ?

Share :

Published January 25, 2024 at 10:47pm

Update January 25, 2024 at 11:02pm

    ಕಳೆದ 12 ವರ್ಷಗಳಿಂದ ಮರೆಯಾಗುತ್ತಿರೋ ದೇಸಿ ಭತ್ತದ ತಳಿಗಳು!

    ವಿವಿಧ-ವಿಶಿಷ್ಟ ಭತ್ತದ ಸಂರಕ್ಷಣೆಗೆ ಪಣತೊಟ್ಟ ಸತ್ಯನಾರಾಯಣ ಬೆಳೇರಿ

    ಸತ್ಯನಾರಾಯಣ ಬೆಳೇರಿ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರ

2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಕರ್ನಾಟಕದ ಕಾಸರಗೋಡಿನ ಸತ್ಯನಾರಾಯಣ ಬೇಳೇರಿ ಅವರಿಗೂ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಸತ್ಯನಾರಾಯಣ ಬೇಳೇರಿ ಕಾಸರಗೋಡಿನ ಭತ್ತ ಬೆಳೆಯುವ ರೈತ. ಇವರು 650ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ಬೆಳೆಗಳ ಕಾವಲುಗಾರನಾಗಿ ಗುರುತಿಸಿಕೊಂಡಿದ್ದಾರೆ. ಇವರ ಬಗ್ಗೆ ನ್ಯೂಸ್​ಫಸ್ಟ್​​ನಲ್ಲಿ ವಿಶೇಷ ಲೇಖನ ನಿಮಗಾಗಿ.

ಭತ್ತದ ಮೂಲತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿ..!

ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತಿನ ನೆಟ್ಟಣಿಗೆ ಗ್ರಾಮದ ಸಾಧಾರಣ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದವರು ಸತ್ಯನಾರಾಯಣ ಬೆಳೇರಿ. ಕಳೆದ 12 ವರ್ಷಗಳಿಂದ ಮರೆಯಾಗುತ್ತಿರುವ ದೇಸಿ ಭತ್ತದ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ದಶಕಗಳ ಹಿಂದೆ ಹಿರಿಯ ಗಾಂಧಿವಾದಿ, ಕೃಷಿ ತಪಸ್ವಿ ಚೇರ್ಕಾಡಿ ರಾಮಚಂದ್ರರಾಯರು ನೀಡಿದ ಒಂದು ಮುಷ್ಟಿಯಷ್ಟು “ರಾಜಕಯಮೆ” ಎಂಬ ದೇಸಿ ಭತ್ತದ ತಳಿಯೊಂದಿಗೆ ಆರಂಭವಾದ ಇವರ ಕೆಲಸ ಪ್ರಸ್ತುತ 650ಕ್ಕೂ ಹೆಚ್ಚಿನ ತಳಿಗಳ ಸಂರಕ್ಷಣೆಯವರೆಗೆ ತಲುಪಿದೆ.

ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ ಮತ್ತು ರಾಜಭೋಗ, ಉಪ್ಪುನೀರಿನಲ್ಲಿಯೂ ಬೆಳೆಯುವ ಕಗ್ಗ, ಬರನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಟಾ, ಫಿಲಿಪೈನ್ಸ್ ದೇಶದ ಮನಿಲಾ, ಸುಶ್ರುತನ ಕಾಲದ ಕಳಮೆ, ಬುದ್ಧನ ಕಾಲದ ಕಲಾನಾಮಕ್, ನೇರಳೆ ಬಣ್ಣದ ಡಾಂಬಾರ್ ಕಾಳಿ, ಕಾರ್ ರೆಡ್ ರೈಸ್, ಕಲಾಬತಿ, ನಜರ್ ಬಾತ್ ಅಲ್ಲದೇ ಮಣಿಪುರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಸೇರಿದಂತೆ ಭಾರತದ ಹೆಚ್ಚಿನೆಲ್ಲಾ ಪ್ರದೇಶಗಳ ಭತ್ತದ ತಳಿಗಳ ಸಂಗ್ರಹ ಇವರಲ್ಲಿದೆ.

ಸ್ಥಳೀಯ ಬೀಜ ವೈವಿಧ್ಯವನ್ನು ಸಂರಕ್ಷಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಕೇಂದ್ರ ಕೃಷಿ ಇಲಾಖೆಯು ನೀಡುವ Plant Genome Saviour Farmer Reward ಎಂಬ ರಾಷ್ಟ್ರೀಯ ಪುರಸ್ಕಾರಕ್ಕೆ ಇವರು ಪಾತ್ರರಾಗಿದ್ದಾರೆ. ಕೇಂದ್ರ ಕೃಷಿ ಸಚಿವರು ನವೆಂಬರ್ 11, 2021ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ 1.5 ಲಕ್ಷ ರೂಪಾಯಿ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಒಳಗೊಂಡ ಪುರಸ್ಕಾರವನ್ನು ನೀಡಿ ಸನ್ಮಾನಿಸಿದ್ದಾರೆ.

ಕಸಿ ಕಟ್ಟುವಿಕೆ, ಜೇನು ಸಾಕಣಿಕೆ, ಗಾರೆ ಕೆಲಸ, ಮರ ಕೆಲಸ, ಎಲೆಕ್ಟ್ರಿಕ್ ಮತ್ತು ಮೋಟಾರ್ ರಿವೈಂಡಿಂಗ್ ಕೆಲಸಗಳಲ್ಲೂ ಪರಿಣಿತರಾದ ಇವರು ರಚಿಸಿದ ಹಲವು ಕವಿತೆ, ಲೇಖನ, ವ್ಯಂಗ್ಯ ಚಿತ್ರಗಳು ನಾಡಿನ ಹಲವು ದಿನಪತ್ರಿಕೆ, ಮ್ಯಾಗಜಿನ್ ಗಳಲ್ಲಿ ಪ್ರಕಟವಾಗಿವೆ.

ಎಲ್ಲಾ ತಳಿಗಳು ಹೆಚ್ಚೆಂದರೆ 6-8 ತಿಂಗಳ ಕಾಲ ಬಾಳ್ವಿಕೆ ಬರುತ್ತವೆ. ಆದುದರಿಂದ ವರ್ಷಕ್ಕೊಮ್ಮೆಯಾದರೂ ಇವುಗಳನ್ನು ಮಣ್ಣಲ್ಲಿ ಬಿತ್ತಿ, ಬೆಳೆದು ಹೊಸ ಬೀಜಗಳನ್ನು ಸಂಗ್ರಹಿಸಬೇಕಾಗುತ್ತದೆ. ಕ್ರಿಮಿ-ಕೀಟ, ಇಲಿಗಳ ಉಪಟಳ, ಸಮಯಕ್ಕೆ ಸರಿಯಾಗಿ ನೀಡಬೇಕಾದ ಗೊಬ್ಬರ, ಪೋಷಕಾಂಶಗಳು ಸೇರಿದಂತೆ ಈ ಕಾರ್ಯಕ್ಕೆ ನೀಡಬೇಕಾದ ಸಮಯ, ಸಂಯಮ, ಏಕಾಗ್ರತೆ ನಮ್ಮ ಊಹೆಗೂ ನಿಲುಕದ್ದು. ಕೃಷಿ ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಕೆಲಸವನ್ನು ಇವರೊಬ್ಬರೇ ಅಚ್ಚುಕಟ್ಟಾಗಿ ಮಾಡುತ್ತಿರುವುದು ನಿಜಕ್ಕೂ ಭಗೀರಥ ಪ್ರಯತ್ನವೇ ಸರಿ. ಇಂತಹ ಅಚ್ಚ ಕನ್ನಡಿಗ ಸಾಧಕರು ನಮ್ಮ ಜಿಲ್ಲೆಯವರು ಎಂಬುದು ನಾವೆಲ್ಲರೂ ಗರ್ವಪಡಬೇಕಾದ ವಿಚಾರ. ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ರಾಜ್ಯ-ಕೇಂದ್ರ ಸರ್ಕಾರಗಳು ಇವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿ ಮತ್ತು ಇವರ ಅನುಭವವನ್ನು ಬಳಸಿಕೊಳ್ಳಲಿ ಎಂದು ಆಗ್ರಹಿಸೋಣ.

ಲೇಖಕರು: ರವಿನಾರಾಯಣ ಗುಣಾಜೆ, ಅಧ್ಯಕ್ಷರು, ವಿಕಾಸ ಟ್ರಸ್ಟ್

ಕರ್ನಾಟಕದ ಭತ್ತದ ಮೂಲತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ; ಯಾರು ಈ ಸಾಧಕ?

https://newsfirstlive.com/wp-content/uploads/2024/01/Satyanarayana-Beleri.jpg

Load More