/newsfirstlive-kannada/media/post_attachments/wp-content/uploads/2025/04/VISA-BAN-SAUDI-ARABIA.jpg)
ಭಾರತ ಸೇರಿದಂತೆ ಒಟ್ಟು 14 ದೇಶಗಳಿಗೆ ಸೌದಿ ಅರೇಬಿಯಾ ವೀಸಾ ಬ್ಯಾನ್ ಮಾಡಿದೆ. ಸೌದಿ ಅರೇಬಿಯಾದಲ್ಲಿ ಜೂನ್ 4 ರಿಂದ 9 ರವರೆಗೆ ಹಜ್ ಸಂಭ್ರಮ ಕಳೆಗಟ್ಟಲಿದ್ದು ಇದೇ ಕಾರಣದಿಂದ ಭಾರತ ಸೇರಿ ಒಟ್ಟು 14 ದೇಶಗಳಿಗೆ ವೀಸಾ ಬ್ಯಾನ್ ಮಾಡಲಾಗಿದೆ.
ಬೇರೆ ಬೇರೆ ವೀಸಾಗಳಲ್ಲಿ ಸೌದಿ ಅರೇಬಿಯಾಗೆ ಬಂದು ಅಕ್ರಮವಾಗಿ ವಾಸ ಮಾಡುತ್ತಾರೆ. ಈ ಕಾರಣದಿಂದಾಗಿ 14 ದೇಶಗಳಿಗೆ ವೀಸಾ ಬ್ಯಾನ್ ಮಾಡಲಾಗಿದೆ. ಹಜ್ಗೆ ಸರಿಯಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ಬರುವವರನ್ನು ತಡೆಯಲು ವೀಸಾ ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ:ವಿಶ್ವದ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ತಲ್ಲಣ.. ಏನಿದು ಬ್ಲ್ಯಾಕ್ ಮಂಡೇ? ಇದರ ಇತಿಹಾಸ ಏನು?
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್ ಸೇರಿ ಒಟ್ಟು 14 ದೇಶಗಳಿಗೆ ವೀಸಾ ಬ್ಯಾನ್ ಮಾಡಲಾಗಿದೆ. ಆದರೇ ಏಪ್ರಿಲ್ 13ರೊಳಗೆ ಉಮ್ರಾ ವೀಸಾ ಪಡೆದಿರುವವರು ಸೌದಿಗೆ ಭೇಟಿ ನೀಡಬಹುದು. ರಿಜಿಸ್ಟ್ರೇಷನ್ ಮಾಡಿಕೊಳ್ಳದೇ ಹಜ್ ಯಾತ್ರೆಯಲ್ಲಿ ಪಾಳ್ಗೊಳ್ಳುವುದನ್ನ ತಡೆಯಲು ಸೌದಿ ಅರೇಬಿಯಾ ಸರ್ಕಾರ ವೀಸಾ ಬ್ಯಾನ್ ಮಾಡಿದೆ.
ಇನ್ನು ಹಜ್ ಯಾತ್ರೆಗೆ ಹೋಗುವವರ ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಿಕೊಂಡು ಸೂಕ್ತ ವೀಸಾ ಪಡೆದುಕೊಂಡು ಬರಬೇಕು ಎಂದು ಹೇಳಲಾಗಿದೆ. ಪ್ರತಿ ದೇಶಗಳಿಗೆ ಇಂತಿಷ್ಟು ಹಜ್ ಯಾತ್ರೆಗೆ ವೀಸಾ ಎಂದು ನೀಡಲು ಸೌದಿ ಅರೇಬಿಯಾ ಸಜ್ಜಾಗಿದೆ. ಸೌದಿ ಅರೇಬಿಯಾದಲ್ಲಿ ಅತಿಯಾದ ಜನದಟ್ಟಣೆ, ಉಷ್ಣ ಗಾಳಿಯಿಂದಾಗಿ ಸಾವು ನೋವು ಹೆಚ್ಚಾಗುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಉಷ್ಣ ಗಾಳಿಯಿಂದಾಗಿ ಸುಮಾರು 1,200 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ರೀತಿಯ ದುರಂತ ತಪ್ಪಿಸಲು ಈಗಲೇ ವೀಸಾ ಬ್ಯಾನ್ ಮಾಡಿದೆ ಸೌದಿ ಅರೇಬಿಯಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ