/newsfirstlive-kannada/media/post_attachments/wp-content/uploads/2025/04/Sleeping-Prince-Al-Waleed.jpg)
ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ ಅನ್ನೋ ಹಾಗೆ, ಸುಖದ ಸುಪ್ಪತ್ತಿಗೆ ಬದುಕಿ, ತೇಲಾಡಬೇಕಿದ್ದ ರಾಜಕುಮಾರನ ಸ್ಥಿತಿ ನೋಡಿ ಜನರು, ನಮ್ ಶತ್ರುಗೂ ಈ ಪರಿಸ್ಥಿತಿ ಬರಬಾರದು ಅಂತ ಬೇಜಾರ್ ಮಾಡಿಕೊಳ್ತಿದ್ದಾರೆ.
ಈ ರಾಜಕುಮಾರನ ಹೆಸರು ಅಲ್-ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅಂತ. ಸೌದಿ ರಾಜಮನೆತನವನ್ನ ಮುಂದುವರೆಸಬೇಕಿದ್ದ ಉತ್ತರಾಧಿಕಾರಿ ಅಂತಾನೇ ಹೇಳಬಹುದು. ಈ ರಾಜಕುಮಾರ ಮೊನ್ನೆ ತಾನೆ ತನ್ನ 36ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾನೆ. ಆದ್ರೆ, ಆ ಹುಟ್ಟುಹಬ್ಬವನ್ನ ಸಂಭ್ರಮ ಮಾಡಿದ್ದು ಆ ರಾಜಕುಮಾರ ಅಲ್ಲ. ಆತನ ಸ್ನೇಹಿತರು, ಬಂಧುಗಳು.
ಸೌದಿ ಅರೇಬಿಯಾ ದೇಶದ ಈ ರಾಜಕುಮಾರನಿಗೆ 2005ರ ಏಪ್ರಿಲ್ 18ನೇ ತಾರೀಖು, ಮಿಲಿಟರಿ ಕಾಲೇಜಿನಲ್ಲಿ ಓದೋ ಟೈಂನಲ್ಲಿ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ ಆಗಿತ್ತು. ರಕ್ತಸ್ರಾವವಾಗಿ ಆಸ್ಪತ್ರೆಗೂ ದಾಖಲಾಗ್ತಾರೆ. ಅವತ್ತಿನಿಂದ, ಅಂದ್ರೆ 2005ರಿಂದಲೂ ಕೂಡ ಸ್ವಲ್ಪವೂ ಪ್ರಜ್ಞೆಯೇ ಇಲ್ಲದೇ, ಕೋಮಾದಲ್ಲಿದ್ದಾರೆ. ಅಲ್-ವಲೀದ್ ರಿಯಾದ್‌ನ ರಾಜ ಅಬ್ದುಲಾಜೀಜ್ ಮೆಡಿಕಲ್ ಸಿಟಿಯಲ್ಲಿ ಯಂತ್ರಗಳ ಸಹಾಯದಿಂದ ಜೀವಂತವಾಗಿ ಕೋಮಾದಲ್ಲಿದ್ದಾರೆ. ಬರೋಬ್ಬರಿ 2 ದಶಕಗಳಿಂದ ಕೋಮಾದಲ್ಲೇ ಇರ್ತಾ ಇರೋದ್ರಿಂದ ಸೌದಿಯ ಈ ರಾಜಕುಮಾರನಿಗೆ ಸ್ಲೀಪಿಂಗ್ ಪ್ರಿನ್ಸ್ ಅಂದ್ರೇ ನಿದ್ರೆ ಮಾಡೋ ರಾಜಕುಮಾರ ಅಂತ ಕರೀತಾರೆ.
ಸೌದಿ ಅರೇಬಿಯಾದ ಸ್ಥಾಪಕ, ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗನೇ ಈ ರಾಜಕುಮಾರ. ರಾಜವೈಭೋಗ ಅನುಭವಿಸಬೇಕಿದ್ದ ಈ ಪ್ರಿನ್ಸ್ ಈಗ ಆಸ್ಪತ್ರೆಯ ಬೆಡ್ ಮೇಲೆಯೇ ಮಲಗಿದ್ದಾರೆ. ಡಾಕ್ಟರ್ಗಳು, ಆತನ ಜೀವ ಉಳಿಸೋಕೆ ಈಗಲೂ ಸಾಕಷ್ಟೂ ರೀತಿಯಲ್ಲಿ ಪ್ರಯತ್ನ ಪಡ್ತಾನೇ ಇದ್ದಾರೆ. ಈ ರಾಜಕುಮಾರನಿಗೆ ವೆಂಟಿಲೇಟರ್ ಹಾಗೂ ಫೀಡಿಂಗ್ ಟ್ಯೂಬ್ ಸಪೋರ್ಟ್ ಮಾಡ್ತಿವೆ. ಇನ್ನೊಂದು ಕಡೆ, ಅವರ ತಂದೆ ಮಾತ್ರ ನನ್ನ ಮಗ ಮತ್ತೆ ಕಣ್ಣು ಬಿಟ್ಟು ನಮ್ಮನ್ನ ನೋಡೇ ನೋಡ್ತಾನೆ ಅನ್ನೋ ಬಲವಾದ ಭರವಸೆಯಲ್ಲೇ ದಿನಗಳನ್ನ ಎಣಿಸ್ತಾ ಇದ್ದಾರೆ. ಅಕಸ್ಮಾತ್ ಆ ದೇವರು, ಆ್ಯಕ್ಸಿಡೆಂಟ್ನಲ್ಲೇ ಅವನು ಸಾಯಬೇಕೆಂದು ಅಂತ ಬಯಸಿದ್ರೆ, ಅವನೀಗ ಸಮಾಧಿಯಲ್ಲಿ ಇರುತ್ತಿದ್ದ ಅಂತ ರಾಜಕುಮಾರನ ತಂದೆ ಹೇಳ್ತಾರೆ.
ಇದನ್ನೂ ಓದಿ: ಪಾಕ್ ಬುಡಕ್ಕೆ ಬೆಂಕಿಯಿಟ್ಟ ಭಾರತದ ಒಂದೇ ಮೀಟಿಂಗ್.. ಸಿಂಧೂ ನದಿ ನೀರು ಒಪ್ಪಂದ ಅಮಾನತು ಸುಲಭನಾ..?
2019ರಲ್ಲಿ, ಈ ರಾಜಕುಮಾರ, ತನ್ನ ಮೆಲ್ಲನೇ ಬೆರಳುಗಳನ್ನ ಎತ್ತೋದು, ಚಿಕ್ಕದಾಗಿ ತಲೆ ಅಲ್ಲಡಿಸೋದನ್ನ ಮಾಡಿದ್ನಂತೆ. ಆದ್ರೆ ಈ ಲಕ್ಷಣಗಳು ಸಂಪೂರ್ಣವಾಗಿ ಮತ್ತೆ ಪ್ರಜ್ಞೆ ಬರೋಕೆ ಆಗಿರಲಿಲ್ಲ. 2025ರ ಏಪ್ರಿಲ್ 18ನೇ ತಾರೀಖು, ರಾಜಕುಮಾರನ ಹುಟ್ಟುಹಬ್ಬ ಇತ್ತು. ಹೀಗಾಗಿ ಸ್ನೇಹಿತರು, ಬಂಧುಗಳೆಲ್ಲಾ ಸೇರಿ ಆಸ್ಪತ್ರೆಯಲ್ಲೇ ರಾಜಕುಮಾರನಿಗೆ ಬರ್ತ್ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಬರ್ತ್ಡೇಯ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರು ಹಂಚಿಕೊಂಡಿದ್ದಾರೆ. ಹೀಗಾಗಿ ಮತ್ತೆ ಈ ರಾಜಕುಮಾರನ ಸುದ್ದಿ ಗೊತ್ತಾಗಿದೆ.
ಬಾಳಿ ಬದುಕಬೇಕಿತ್ತು. ಅಕ್ಷರಶಃ ರಾಜವೈಭೋಗದಲ್ಲಿ ತೇಲಾಡಬೇಕಿತ್ತು. ಕೇವಲ 36 ವರ್ಷದ ಒಬ್ಬ ವ್ಯಕ್ತಿ, 20 ವರ್ಷಗಳಿಂದ ಕಂಟಿನ್ಯೂಯಾಗಿ ಕೋಮಾದಲ್ಲೇ ಇದ್ದಾನೆ ಅಂತಂದ್ರೇ ಯಾರಿಗೆ ಆದ್ರೂ ಕರುಳು ಚುರುಕ್ ಅನ್ನುತ್ತೆ ಕಣ್ರಿ. ಮತ್ತೆ ಆ ರಾಜಕುಮಾರನಿಗೆ ಪ್ರಜ್ಞೆ ಬರಲಿ. ಅವನ ತಂದೆ ಇಟ್ಟಿರೋ ಆ ಒಂದು ಭರವಸೆ ಅಳಿಸಿ ಹೋಗದಂತೆ ಆಗಲಿ ಅಂತ ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ