ಸೌದಿ ಗ್ಲೋಬಲ್​ ಟಿ20 ಲೀಗ್​​ ವಿರುದ್ಧ BCCI ಕೆಂಗಣ್ಣು.. ವಿಶ್ವ ಕ್ರಿಕೆಟ್ ಬೋರ್ಡ್​ಗಳ ನಡುವೆ ಮನಸ್ತಾಪ..!

author-image
Ganesh
ಸೌದಿ ಗ್ಲೋಬಲ್​ ಟಿ20 ಲೀಗ್​​ ವಿರುದ್ಧ BCCI ಕೆಂಗಣ್ಣು.. ವಿಶ್ವ ಕ್ರಿಕೆಟ್ ಬೋರ್ಡ್​ಗಳ ನಡುವೆ ಮನಸ್ತಾಪ..!
Advertisment
  • ಸೌದಿ ಗ್ಲೋಬಲ್​ ಟಿ20 ಲೀಗ್​ಗೆ ಐಸಿಸಿ ನೀಡುತ್ತಾ ಸಮ್ಮತಿ..?
  • ಟಿ20 ಲೀಗ್​​​ ಮೇಲೆ 4300 ಕೋಟಿಗೂ ಅಧಿಕ ಹಣ ಹೂಡಿಕೆ
  • ವಿಶ್ವ ಕ್ರಿಕೆಟ್ ಬೋರ್ಡ್​ಗಳ ತಿಕ್ಕಾಟಕ್ಕೆ ಆಗುತ್ತಾ ಕಾರಣ?

ವಿಶ್ವ ಕ್ರಿಕೆಟ್​ನಲ್ಲಿ ದಿನಕ್ಕೊಂದು ಟಿ20 ಲೀಗ್ ಹುಟ್ತಾನೇ ಇದೆ. ಕ್ರಿಕೆಟ್​​ ಆಡದ ದೇಶಗಳಲ್ಲೂ ಟಿ20 ಲೀಗ್ಸ್​ ನಡೀತಿದೆ. ಇದೀಗ ಇದೇ ಹಾದಿಯಲ್ಲಿ ಸೌದಿ ಅರೇಬಿಯಾ, ಟಿ20 ಲೀಗ್​ ಆಯೋಜನೆಗೆ ಮುಂದಾಗಿದೆ. ಇದೇ ಲೀಗ್ ಆಯೋಜನೆ ವಿಶ್ವ ಕ್ರಿಕೆಟ್ ಬೋರ್ಡ್​ಗಳ ನಡುವೆ ಮನಸ್ತಾಪಕ್ಕೆ ಕಾರಣವಾಗ್ತಿದೆ.

ಟಿ20 ಲೀಗ್​​​ ಮೇಲೆ 4300 ಕೋಟಿಗೂ ಅಧಿಕ ಹಣ ಹೂಡಿಕೆ..!

ಈಗಾಗಲೇ ಫುಟ್ಬಾಲ್‌, ಫಾರ್ಮುಲಾ- ಒನ್​​​ನಂಥ ಕ್ರೀಡೆಗಳಲ್ಲಿ ಹಣ ಹೂಡಿರುವ ಸೌದಿ, ಈಗ ಕ್ರಿಕೆಟ್​ ಜಗತ್ತಿನಲ್ಲಿ ಹೊಸ ಛಾಪು ಮೂಡಿಸಲು ಮುಂದಾಗ್ತಿದೆ. ಅಷ್ಟೇ ಅಲ್ಲ, ವಿಶ್ವದ ಶ್ರೀಮಂತ ಲೀಗ್​ ಐಪಿಎಲ್​ಗೆ ಟಕ್ಕರ್ ನೀಡುವಂತ ಟಿ20 ಲೀಗ್​ ಆಯೋಜನೆ ಚಿಂತನೆಯಲ್ಲಿರುವ ಸೌಧಿ ಅರೇಬಿಯಾ, 4 ಸಾವಿರದ ಮುನ್ನೂರಕ್ಕೂ ಅಧಿಕ ಕೋಟಿ ಹಣ ಹೂಡಿಕೆ ಮಾಡಲು ರೆಡಿಯಾಗಿದೆ. ಎಲ್ಲಾ ಲೀಗ್​ಗಳಿಗೂ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಭಾರೀ ಪ್ರ್ಯಾನ್ ಅನ್ನೇ ಸಿದ್ದಪಡಿಸಿದೆ.

ಇದನ್ನೂ ಓದಿ:2ನೇ ಟೆಸ್ಟ್​ನಲ್ಲಿ ಸಾಯಿ ಸುದರ್ಶನ್​​ಗೆ ಕೊಕ್.. ಸ್ಟಾರ್​ ಆಲ್​ರೌಂಡರ್​ ತಂಡಕ್ಕೆ ಕಂಬ್ಯಾಕ್..!

ಹೇಗಿರಲಿದೆ ಲೀಗ್​ನ ರೂಪುರೇಷೆ..?

  • ನೂತನ ಟಿ20 ಲೀಗ್​ಗಾಗಿ 4300 ಕೋಟಿ ಹೂಡಿಕೆ
  •  ಹಣ ಹೂಡಿಕೆ ಮಾಡಲಿದೆ SRJ ಸ್ಪೋರ್ಟ್ಸ್​
  •  ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲಿವೆ 8 ತಂಡಗಳು
  •  ವರ್ಷದಲ್ಲಿ ವಿವಿಧ 4 ಸ್ಥಳಗಳಲ್ಲಿ ಟೂರ್ನಿ
  •  ಗ್ರ್ಯಾಂಡ್​ ಸ್ಲ್ಯಾಮ್​ ಮಾದರಿ ನಡೆಯಲಿದೆ ಲೀಗ್
  •  ಸೌದಿ ಅರೇಬಿಯಾದಲ್ಲಿ ಫೈನಲ್ ಪಂದ್ಯ ಆಯೋಜನೆ

ಟಿ20 ಲೀಗ್ ಹಿಂದಿದ್ದಾರೆ ಆಸ್ಟ್ರೇಲಿಯನ್ ಮೈಂಡ್

ಸೌದಿ ಟಿ20 ಲೀಗ್​ ಹಿಂದಿನ ಮಾಸ್ಟರ್ ಮೈಂಡ್ ಬೇರ್ಯಾರು ಅಲ್ಲ. ಆಸ್ಟ್ರೇಲಿಯಾದ ಕ್ರಿಕೆಟ್ ತಜ್ಞ ನೀಲ್ ಮ್ಯಾಕ್ಸ್‌ವೆಲ್‌. ಮಾಜಿ ಕ್ರಿಕೆಟಿಗನೂ ಆಗಿರುವ ನೀಲ್ ಮ್ಯಾಕ್ಸ್​ವೆಲ್​, ಆಸ್ಟ್ರೇಲಿಯಾ ನ್ಯೂ ಸೌತ್ ವೆಲ್ಸ್​ ಸೇವೆ ಸಲ್ಲಿಸಿದ್ದಾರೆ. ಇದೇ ನೀಲ್ ಮ್ಯಾಕ್ಸ್​ವೆಲ್, ಸೌದಿ ಅರೇಬಿಯಾದ ಟಿ20 ಲೀಗ್ ಸೃಷ್ಟಿಕರ್ತ.

ಇದನ್ನೂ ಓದಿ: ಮೊಹ್ಮದ್ ಶಮಿಗೆ ಹೈಕೋರ್ಟ್​ನಲ್ಲಿ ಹಿನ್ನಡೆ.. ಪತ್ನಿ, ಮಗಳಿಗೆ ಜೀವನಾಂಶದ ಒಟ್ಟು ಮೊತ್ತ ಕೇಳಿ ದಂಗು..!

SRJ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ಹೂಡಿಕೆ ಮಾಡಲು ಕಾರಣ ಡ್ಯಾನಿ ಟೌನ್‌ಸೆಂಡ್. ಆಸ್ಟ್ರೇಲಿಯಾದವರೇ ಆಗಿರುವ ಡ್ಯಾನಿ ಟೌನ್‌ಸೆಂಡ್, ಸದ್ಯ SRJ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್​ನ CEO ಆಗಿದ್ದಾರೆ. ಇವರಲ್ದೇ ಆಸ್ಟ್ರೇಲಿಯಾದ ಕ್ರೀಡಾ ಪ್ರಸಾರಕ ವಾಹಿನಿಯಾದ DAZN ಸಹ ಪಾಲು ಹೊಂದಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ, ಸೌದಿ ಟಿ20 ಲೀಗ್​ನ ಬೆಂಬಲಕ್ಕೆ ನಿಂತಿದೆ. 4 ಅವಧಿಗಳ ಈ ಟೂರ್ನಿಯ ಪೈಕಿ ಒಂದು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಬಿಗ್​ ಬ್ಯಾಷ್​ ಟೂರ್ನಿಯಿಂದ ನಿರೀಕ್ಷಿತ ಲಾಭ ಗಳಿಸದ ಕ್ರಿಕೆಟ್ ಆಸ್ಟ್ರೇಲಿಯಾ, ಸೌದಿ ಟಿ20 ಲೀಗ್​ನ ಬೆಂಬಲಿಸುವುದರೊಂದಿಗೆ ಹಣಗಳಿಸುವ ಲೆಕ್ಕಾಚಾರ ಹೊಂದಿದೆ.

ಹೊಸ ಲೀಗ್​ನ ಉದ್ದೇಶವೇನು? ಲಾಭವೇನು?

ಹೊಸ ಲೀಗ್​ನಿಂದ ಆದಾಯ ಸೃಷ್ಟಿಸುವ ಲೆಕ್ಕಾಚಾರ ಇದೆ. ಪ್ರಮುಖವಾಗಿ ಭಾರತ, ಇಂಗ್ಲೆಂಡ್ ಹೊರತು ಪಡೆಸಿ, ಇತರೆ ಕ್ರಿಕೆಟ್ ಆಡುವ ದೇಶಗಳನ್ನ ಆರ್ಥಿಕವಾಗಿ ಬಲಪಡಿಸಲು ಗುರಿಯಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಕ್ರಿಕೆಟ್ ಬೋರ್ಡ್​ಗಳಾದ ವೆಸ್ಟ್ ಇಂಡೀಸ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಗಳಿಗೆ ಲಾಭವಾಗಲಿದೆ. ಹೀಗಾಗಿ ಆಸ್ಟ್ರೇಲಿಯಾ ಜೊತೆ ಈ ದೇಶಗಳು ಸೌದಿ ಅರೇಬಿಯಾ ಟಿ20 ಲೀಗ್ ಬೆಂಬಲಿಸುವ ಸಾಧ್ಯತೆ ಇದ್ದೇ ಇದೆ.

ಸೌದಿ ಟಿ20 ಲೀಗ್​ಗೆ ಬಿಸಿಸಿಐ, ಇಸಿಬಿ ವಿರೋಧ..!

ಸೌದಿ ಅರೇಬಿಯಾದ ಟಿ20 ಲೀಗ್​ಗೆ ಬಿಸಿಸಿಐ ಹಾಗೂ ಇಸಿಬಿ ವಿರೋಧ ವ್ಯಕ್ತಪಡಿಸಿವೆ. ಇದಕ್ಕೆ ಕಾರಣ ಐಪಿಎಲ್ ಹಾಗೂ ದಿ ಹಡ್ರೆಂಡ್ ಲೀಗ್ ಆಗಿದೆ. ಇಡೀ ವರ್ಷ 4 ವಿವಿಧ ಸ್ಥಳಗಳಲ್ಲಿ ಆಯೋಜನೆ ಮಾಡಲಿದೆ. ವಿಶ್ವದ ನಗರಗಳ ಹೆಸರಲ್ಲಿ ನಡೆಯೋ ಈ ಟೂರ್ನಿಯಲ್ಲಿ ಅಧಿಕ ಹಣ ಸುರಿದ್ರೆ, ಸ್ಟಾರ್ ಕ್ರಿಕೆಟರ್ಸ್ ಸೌದಿ ಟಿ20ಯತ್ತ ಮುಖ ಮಾಡ್ತಾರೆ. ಇದರಿಂದ ಐಪಿಎಲ್​​​​, ದಿ ಹಂಡ್ರೆಡ್ ಲೀಗ್​ಗೆ ಭಾರೀ ಹೊಡೆತ ಗ್ಯಾರಂಟಿ.

ಇದನ್ನೂ ಓದಿ: 18 ತಿಂಗಳಿಂದ ನೋವಲ್ಲೇ ನರಳಾಟ.. ತಂಡಕ್ಕಾಗಿ ಜೀವ ಸವೆಸಿದ ಬೂಮ್ರಾ..!

ಮತ್ತೊಂದೆಡೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಹ ದಿ ಹಂಡ್ರೆಡ್​ ಲೀಗ್​ನಲ್ಲಿ ಭಾರೀ ಬದಲಾವಣೆ ಮಾಡಿದೆ. ದಿ ಹಡ್ರೆಂಡ್ ಲೀಗ್ ಫ್ರಾಂಚೈಸಿಗಳ ಶೇರ್​ಗಳನ್ನ ಐಪಿಎಲ್​ ಫ್ರಾಂಚೈಸಿಗಳಿಗೆ ನೀಡಿ, 7 ಸಾವಿರ ಕೋಟಿ ಗಳಿಸಿತ್ತು. ಐಪಿಎಲ್​ನಂತೆಯೇ ಭಾರೀ ಹಣ ಗಳಿಸುವ ಲೆಕ್ಕಾಚಾರದಲ್ಲಿತ್ತು. ಈ ಹೊತ್ತಿನಲ್ಲೇ ಸೌದಿ ಟಿ20 ಲೀಗ್ ಉಗಮವಾಗ್ತಿರೋದು ಇಂಗ್ಲೆಂಡ್​ಗೂ ಅಪಾಯವೇ ಆಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್ ಹಾಗೂ ಭಾರತ ಒಂದಾಗಿ, ಸೌದಿ ಟಿ20 ಲೀಗ್​ ಬಗ್ಗೆ ವಿರೋಧ ಮಾಡ್ತಿವೆ. ಆಟಗಾರರಿಗೆ ನೋ ಅಬ್ಜೆಕ್ಷನ್ ಲೆಟರ್ ನೀಡುವ ಲೆಕ್ಕಾಚಾರ ಇದೆ.

ಸೌದಿ ಗ್ಲೋಬಲ್​ ಟಿ20 ಲೀಗ್​ಗೆ ಐಸಿಸಿ ನೀಡುತ್ತಾ ಸಮ್ಮತಿ..?

ಭಾರತ ಹಾಗೂ ಇಂಗ್ಲೆಂಡ್, ಸೌದಿ ಟಿ20 ಲೀಗ್​ಗೆ ವಿರೋಧ ಮಾಡಿವೆ. ಈ ಕಾರಣಕ್ಕೆ ಐಸಿಸಿ, ಟಿ20 ಲೀಗ್​ಗೆ ಗ್ರೀನ್ ಸಿಗ್ನಲ್ ನೀಡುವುದು ಡೌಟ್. ಯಾಕಂದ್ರೆ, ವಿಶ್ವ ಕ್ರಿಕೆಟ್​​ನ ಬಿಗ್​ ಬಾಸ್​ ಬಿಸಿಸಿಐ. ಐಸಿಸಿ ಖಾಜಾನೆಗೆ ಬಿಸಿಸಿಐ ಕೋಟಿ ಕೋಟಿ ಹಣದ ಹೊಳೆ ಹರಿಸುತ್ತೆ. ಇದೆಲ್ಲದರ ನಡುವೆ ಭಾರತ, ಇಂಗ್ಲೆಂಡ್ ಬೆಂಬಲಕ್ಕೆ ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಇದೆ. ಮತ್ತೊಂದೆಡೆ ಐಸಿಸಿ ಅಧ್ಯಕ್ಷ ಜಯ ಶಾರೇ ಆಗಿದ್ದಾರೆ. ಈ ಕಾರಣಕ್ಕೆ ಐಸಿಸಿಯ ಅನುಮತಿ ನೀಡೋ ಚಾನ್ಸೇ ಇಲ್ಲ. ಆದ್ರೆ, ಇದು ವಿಶ್ವ ಕ್ರಿಕೆಟ್​ ಬೋರ್ಡ್ಸ್​ಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವುದು ಸುಳ್ಳಲ್ಲ.

ಇದನ್ನೂ ಓದಿ: IND vs ENG: ಭಾರತ ಫಸ್ಟ್ ಬ್ಯಾಟಿಂಗ್.. ತಂಡಲ್ಲಿ 3 ಬದಲಾವಣೆ, ಯಾರಿಗೆಲ್ಲ ಪ್ಲೇಯಿಂಗ್-11ನಿಂದ ಕೊಕ್?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment