/newsfirstlive-kannada/media/post_attachments/wp-content/uploads/2025/07/Sleeping-Prince.jpg)
ಬರೋಬ್ಬರಿ 20 ವರ್ಷಗಳ ಕಾಲ ಕೋಮಾದಲ್ಲಿದ್ದ 'ಸ್ಲೀಪಿಂಗ್ ಪ್ರಿನ್ಸ್' ನಿಧನರಾಗಿದ್ದಾರೆ. ಸ್ಲೀಪಿಂಗ್ ಪ್ರಿನ್ಸ್ ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್(36) ಮರಣ ಹೊಂದಿದ್ದಾರೆ.
ಇದನ್ನೂ ಓದಿ: ಕಿಪ್ಪಿ ಕೀರ್ತಿಗಾಗಿ ಕೋಬ್ರಾ VS ಕಪ್ಪೆ ಕಿತ್ತಾಟ.. ಪೊಲೀಸ್ ಠಾಣೆ ಮೆಟ್ಟಿಲೇರಿದ ಲವ್ ಸ್ಟೋರಿ..!
ಈ ಬಗ್ಗೆ ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ ಕುಟುಂಬ ದೃಢಪಡಿಸಿವೆ. ರಾಜಕುಮಾರ ಅಲ್-ವಲೀದ್ ಶನಿವಾರ ನಿಧನರಾಗಿದ್ದಾರೆ. ಇಂದು ಅಂದರೆ ಭಾನುವಾರ ರಿಯಾದ್‌ನಲ್ಲಿ ಅಲ್ ವಲೀದ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಂದೆ ಪ್ರಿನ್ಸ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ತಿಳಿಸಿದ್ದಾರೆ. ಜೊತೆಗೆ ಮಗನ ನಿಧನದ ಗೌರವ ಸೂಚಕವಾಗಿ ಮುಂದಿನ ಮೂರು ದಿನಗಳ ಕಾಲ ಅಂದರೆ ಭಾನುವಾರ, ಸೋಮವಾರ ಮತ್ತು ಮಂಗಳವಾರ ಸಂತಾಪ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೂ, ಮಗನ ನಿಧನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಂದೆ ಪ್ರಿನ್ಸ್ ಖಾಲಿದ್ ಭಾವುಕ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ದೇವರ ಚಿತ್ತ ಮತ್ತು ಆಜ್ಞೆ. ನಮ್ಮ ಪ್ರೀತಿಯ ಪುತ್ರ, ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನಕ್ಕೆ ನಾವು ತೀವ್ರ ಶೋಕಿಸುತ್ತೇವೆ. ಸರ್ವಶಕ್ತನಾದ ಅಲ್ಲಾಹನು ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ. ಕುಟುಂಬಸ್ಥರು ಮತ್ತು ಪ್ರೀತಿಪಾತ್ರರಿಗೆ ಸಾಂತ್ವನ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
Statement On the Passing of Prince Alwaleed bin Khaled bin Talal Al Saud pic.twitter.com/st19kxb7lC
— Global Imams Council (GIC) (@ImamsOrg)
Statement On the Passing of Prince Alwaleed bin Khaled bin Talal Al Saud pic.twitter.com/st19kxb7lC
— Global Imams Council (GIC) (@ImamsOrg) July 19, 2025
">July 19, 2025
ಇನ್ನೂ, ಸೌದಿ ಅರೇಬಿಯಾದ ರಾಜಕುಮಾರ ವಲೀದ್ 1990ರ ಏಪ್ರಿಲ್ನಲ್ಲಿ ಜನಿಸಿದ್ದರು. 2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಜಕುಮಾರ ಅಲ್-ವಲೀದ್ ಅಪಘಾತವಾಗಿತ್ತು. ಅಪಘಾತದಲ್ಲಿ ಮೆದುಳಿನ ರಕ್ತಸ್ರಾವವಾಗಿತ್ತು. ಬಳಿಕ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೆರಿಕ ಮತ್ತು ಸ್ಪೇನ್‌ನ ತಜ್ಞ ವೈದ್ಯರು ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಿದ್ದರು. ಆದ್ರೆ 15ನೇ ವಯಸ್ಸಿನ ಅಲ್-ವಲೀದ್ ಅವರಿಗೆ ಪ್ರಜ್ಞೆ ಮರಳಿ ಬರಲೇ ಇಲ್ಲ. ಇದಾದ ನಂತರ ಅವರನ್ನು ರಿಯಾದ್‌ನ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿ ಇರಿಸಲಾಯಿತು. ವೈದ್ಯರು ನೆರವಿನಲ್ಲಿ ದಿನದ 24 ಗಂಟೆಯೂ ಪ್ರಿನ್ಸ್ ಅಲ್ ವಲೀದ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ವೈರಲ್ ಆಗುತ್ತಲೇ ಇದ್ದವು. 20 ವರ್ಷಗಳ ಕಾಲ ಅವರು ಕೋಮಾದಲ್ಲಿದ್ದ ಸ್ಲೀಪಿಂಗ್ ಪ್ರಿನ್ಸ್ ಶನಿವಾರ ನಿಧನರಾಗಿದ್ದಾರೆ. ಈ ರಾಜಕುಮಾರ ಮಲ್ಲಗಿದ್ದಲ್ಲೇ ಇದ್ದರಿಂದ ಇವರಿಗೆ ‘ಸ್ಲೀಪಿಂಗ್ ಪ್ರಿನ್ಸ್’ ಅಂತ ಹೆಸರು ಬಂತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ