/newsfirstlive-kannada/media/post_attachments/wp-content/uploads/2025/04/SAVINGS-ACCOUNT.jpg)
ಏಪ್ರಿಲ್ 5, 2025ರಿಂದ ಅಂದ್ರೆ ಇಂದಿನಿಂದ ಸೇವಿಂಗ್ಸ್ ಅಕೌಂಟ್ನಲ್ಲಿ ನೀವು ಅನೇಕ ಹಣಕಾಸು ಹಾಗೂ ಸರ್ಕಾರಿ ಉಪಯೋಗಗಳನ್ನು ಪಡೆಯಬಹುದು. ಜನರು ಸದಾ ಬ್ಯಾಂಕ್ನಲ್ಲಿ ಹಣವನ್ನು ಡೆಪಾಸಿಟ್ ಇಡುವುದು ಮತ್ತೆ ವಿತ್ಡ್ರಾ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಆದರೆ ಅನೇಕರಿಗೆ ಈ ವ್ಯವಹಾರಗಳ ಮೇಲೆ ಅನೇಕ ರೀತಿಯ ನಿಶ್ಚಿತ ನಿಯಮಗಳು ಇರುತ್ತವೆ ಎಂದು ಗೊತ್ತೇ ಇರುವುದಿಲ್ಲ.
ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಬೇಕಾದಷ್ಟು ಹಣ ಡಿಪಾಸಿಟ್ ಮಾಡಬಹುದು. ಇದಕ್ಕೆ ಇಷ್ಟೇ ಪ್ರಮಾಣದ ಮಿತಿ ಎಂಬುದು ಇಲ್ಲ. ಆದರೆ ನೀವು ನಗದು ಹಣವನ್ನು ಡೆಪಾಸಿಟ್ ಮಾಡಿದಾಗ ಕೆಲವೊಂದು ನಿರ್ಬಂಧಗಳು ಬರುತ್ತವೆ. ಡಿಜಿಟಲ್ ಮತ್ತು ಚೆಕ್ ಡೆಪಾಸಿಟ್ಗಳು ಫ್ರೀಯಾಗಿ ನಡೆಯುತ್ತವೆ. ಕ್ಯಾಶ್ ಡೆಪಾಸಿಟ್ ವಿಷಯಕ್ಕೆ ಬಂದಾಗ ಇನ್ಕಮ್ ಟ್ಯಾಕ್ಸ್ ನಿಯಗಳಲ್ಲಿ ಕೆಲವೊಂದು ಮಿತಿ ಮತ್ತು ಪರಿಶೀಲನೆಗೆ ಒಳಗಾಗುತ್ತವೆ.
ಇದನ್ನೂ ಓದಿ:ಯೂನಿವರ್ಸಿಟಿಯ 400 ಎಕರೆ ಭೂಮಿಗೆ ಕೈ ಹಾಕಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ..!
ತೆರಿಗೆ ಇಲಾಖೆಯ ನಿಯಮದ ಪ್ರಕಾರ ನೀವು 50 ಸಾವಿರ ರೂಪಾಯಿಗಿಂತ ಜಾಸ್ತಿ ಕ್ಯಾಶ್ ಡೆಪಾಸಿಟ್ ಮಾಡುವುದಿದ್ದರೆ ಕಡ್ಡಾಯವಾಗಿ ನೀವು ಬ್ಯಾಂಕ್ಗೆ ಪ್ಯಾನ್ ಪಾರ್ಡ್ ಸಲ್ಲಿಸಲೇಬೇಕು. ಇನ್ನು ನೀವು ದಿನಕ್ಕೆ 1 ಲಕ್ಷ ರೂಪಾಯಿ ಕ್ಯಾಶ್ ಡೆಪಾಸಿಟ್ ಮಾಡುವವರು ಆಗಿದ್ದರೆ ಅದರ ಸಂಪೂರ್ಣ ವಿವರ ಸಲ್ಲಿಸಬೇಕಾಗುತ್ತದೆ.
ಇನ್ನು ವಾರ್ಷಿಕವಾಗಿ ನೀವು 2.5 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್ ಮಾಡಿದ್ದೇ ಆದಲ್ಲಿ ಯಾವುದೇ ವೆರಿಫಿಕೇಷನ್ ಮತ್ತು ಕಡ್ಡಾಯ ನಿಯಮಗಳಿಲ್ಲದೆ ಆರಾಮವಾಗಿ ಮಾಡಿಕೊಳ್ಳಬಹುದು. ಆದರೆ ನಿಮ್ಮ ಕ್ಯಾಶ್ ಡೆಪಾಸಿಟ್ ಹಣಕಾಸು ವರ್ಷದ ಸಾಲಿನಲ್ಲಿ 10 ಲಕ್ಷ ಹಣವನ್ನು ಕ್ಯಾಶ್ ಡೆಪಾಸಿಟ್ ಮಾಡಿದಲ್ಲಿ, ನೀವು ಬ್ಯಾಂಕಿಗೆ ಹಾಗೂ ತೆರಿಗೆ ಇಲಾಖೆಗೆ ಹಣದ ಮೂಲದ ಬಗ್ಗೆ ಸ್ಪಷ್ಟೀಕರಣ ಕೊಡಬೇಕಾಗುತ್ತದೆ.
ಇದನ್ನೂ ಓದಿ:ಅಮೆರಿಕಾಗೇ ತಿರುಗುಬಾಣ ಆಯ್ತು ಟ್ರಂಪ್ ಸುಂಕ.. ಅಗ್ರ 500 ಶ್ರೀಮಂತರ ಜೇಬಿಗೆ ಕತ್ತರಿ..!
ವಾರ್ಷಿಕವಾಗಿ ನೀವು 10 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನು ಯಾವುದೇ ಬ್ಯಾಂಕ್ ಖಾತೆಯಲ್ಲಿ ಕ್ಯಾಶ್ ಡೆಪಾಸಿಟ್ ಮಾಡಿದಲ್ಲಿ ನಿಮ್ಮ ಪ್ರತಿಯೊಂದು ವ್ಯವಹಾರವನ್ನು ನಿಮ್ಮ ಬ್ಯಾಂಕ್ಗಳು ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತವೆ.
ಒಂದು ವೇಳೆ ನೀವು ಡೆಪಾಸಿಟ್ ಮಾಡಿದ ಹಣದ ಮೂಲವನ್ನು ಸ್ಪಷ್ಟವಾಗಿ ತೆರಿಗೆ ಇಲಾಖೆಗೆ ನೀಡುವಲ್ಲಿ ನೀವು ವಿಫಲಗೊಂಡಿದ್ದೆ ಆದರೆ ಅದು ತೆರಿಗೆ ಇಲಾಖೆಯ ಅಡಿಯಲ್ಲಿ ಬರುತ್ತದೆ. ಇದರಿಂದಾಗಿ ನೀವು ದಂಡ ಇಲ್ಲವೇ ತನಿಖೆಗೆ ಒಳಪಡಬೇಕಾದ ಸಂದರ್ಭವೂ ಕೂಡ ಬರುತ್ತದೆ.
ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದವರು ತಿಳಿಯಬೇಕಾದ ಕೆಲವು ಮಾಹಿತಿಗಳು
- ನೀವು ಅನಿಯಮಿತವಾಗಿ ನಿಮ್ಮ ಖಾತೆಯಲ್ಲಿ ಹಣವನ್ನು ಇಡಬಹುದು
- 50 ಸಾವಿರಕ್ಕಿಂತ ಮೇಲೆ ಕ್ಯಾಶ್ ಡೆಪಾಸಿಟ್ ಮಾಡುವುದಿದ್ದಲ್ಲಿ ಪಾನ್ ಕಾರ್ಡ್ ಕಡ್ಡಾಯ
- ನಿತ್ಯ ಕ್ಯಾಶ್ ಡಿಪಾಸಿಟ್ ಹಣದ ಮಿತಿ 1 ಲಕ್ಷ
- ವಾರ್ಷಿಕವಾಗಿ ಕ್ಯಾಶ್ ಡೆಪಾಸಿಟ್ನ ಮಿತಿ 10 ಲಕ್ಷ
- 10 ಲಕ್ಷಕ್ಕೂ ಮೀರಿದ ಡೆಪಾಸಿಟ್ಗೆ ಆದಾಯದ ಮೂಲ ತೋರಿಸಬೇಕು
- ಈ ನಿಯಮಗಳು ದೇಶದ ಪ್ರತಿಯೊಂದು ಬ್ಯಾಂಕ್ಗಳಿಗೂ ಅನ್ವಯವಾಗುತ್ತವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ