/newsfirstlive-kannada/media/post_attachments/wp-content/uploads/2025/03/DEEPAK-HOODA-1.jpg)
ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ಮತ್ತು ಮಾಜಿ ಮಹಿಳಾ ಬಾಕ್ಸರ್ ಸ್ವೀಟಿ ಬೂರಾ ವಿಚ್ಛೇಧನ ಗಲಾಟೆ ತಾರಕಕ್ಕೇರಿದೆ. ಪೊಲೀಸ್ ಠಾಣೆಯಲ್ಲಿ ಪತಿಯ ಮೇಲೆ ಮಹಿಳಾ ಬಾಕ್ಸರ್ ಅಟ್ಯಾಕ್ ಮಾಡಿದ್ರು. ಈ ದೃಶ್ಯ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹೊಸದೊಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಸ್ವೀಟಿ ಬೂರಾ.. ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಪತಿ ಸಲಿಂಗಕಾಮಿ, ಅವರಿಗೆ ಹುಡುಗರಂದ್ರೆ ಇಷ್ಟ!
ವಿಚ್ಚೇಧನ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಮಾತುಕತೆ ವೇಳೆ ಸ್ವೀಟಿ ಬೂರಾ, ಪತಿ ಮೇಲೆ ಹಲ್ಲೆ ನಡೆಸಿದ್ರು. ಈ ವಿಚಾರವಾಗಿ ಸ್ಪಷ್ಟನೆ ನೀಡಲು ಸ್ವೀಟಿ, ವಿಡಿಯೋ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಬಗ್ಗೆ ಆರಂಭದಲ್ಲಿ ವಿವರಿಸಿದ ಅವರು, ಬಳಿಕ ದೀಪಕ್ ಹೂಡಾ ಅವರನ್ನು ಸಲಿಂಗಕಾಮಿ. ಹುಡುಗರು ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: KL ರಾಹುಲ್ ಬ್ಯಾಟಿಂಗ್ ಇಮಿಟೇಟ್ಗೆ ನಕ್ಕು.. ನಕ್ಕು ಸುಸ್ತಾದ ಡೆಲ್ಲಿ ಪ್ಲೇಯರ್ಸ್, ಮುಂದಿನ ಪಂದ್ಯ ಆಡ್ತಾರಾ ಕನ್ನಡಿಗ?
2015 ಏಷಿಯನ್ ಗೇಮ್ನಲ್ಲಿ ಭೇಟಿಯಾಗಿ.. ಬಳಿಕ ಪರಸ್ಪರ ಪ್ರೀತಿಸಿ.. 2022ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆರಂಭದಲ್ಲಿ ಚೆನ್ನಾಗೇ ಇದ್ದ ಜೋಡಿ ಅದೇನ್ ಆಯ್ತೋ. ಸದ್ಯ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಬಾಕ್ಸರ್ ಆಗಿರುವ ಸ್ವೀಟಿ ಬೂರಾ.. ಪತಿಯ ವಿರುದ್ಧ ವರದಕ್ಷಿಣಿ ಕಿರುಕುಳದ ಜೊತೆಗೆ ಹಲ್ಲೆ ಆರೋಪವನ್ನು ಮಾಡಿದ್ದರು. ಮಾರ್ಚ್ 15ರಂದು ಇಸ್ಸಾರ್ ಪೊಲೀಸ್ ಠಾಣೆಯಲ್ಲಿ ಮಾತುಕತೆ ವೇಳೆ ದೊಡ್ಡ ರದ್ಧಾಂತವೇ ನಡೆದಿತ್ತು. ಈ ದೃಶ್ಯ ವೈರಲ್ ಆಗ್ತಿದ್ದಂತೆ ಸ್ಪಷ್ಟನೆ ನೀಡಿರುವ ಸ್ವೀಟಿ ಬೂರಾ.. ಅಧಿಕಾರಿಗಳು ವಿಡಿಯೋವನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ.. ಒಂದೂವರೆ ತಿಂಗಳಿಂದ ಈ ಜೋಡಿಯ ರಂಪಾಟ ನಡೀತಿದ್ದು, ಇದೀಗ ಇದು ಸಾರ್ವಜನಿಕವಾಗಿ ಬಟಾಬಯಲಾಗಿದೆ. ಸದ್ಯ ಪತಿಯನ್ನು ಸಲಿಂಗಿ ಎಂದು ಸ್ವೀಟಿ ಬೂರಾ ಆರೋಪ ಮಾಡಿದ್ದು, ಇದಕ್ಕೆ ಕಬ್ಬಡಿ ಆಟಗಾರ ಏನ್ ಸ್ಪಷ್ಟನೆ ನೀಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಹಿರಿಯ ವ್ಯವಸ್ಥಾಪಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ.. ಒಟ್ಟು ಎಷ್ಟು ಉದ್ಯೋಗಗಳು ಇವೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್