/newsfirstlive-kannada/media/post_attachments/wp-content/uploads/2024/11/CANDY-AND-KID.jpg)
ಮಕ್ಕಳು ಮನೆಯಲ್ಲಿ ನಗುತ್ತಾ, ತೆವಳುತ್ತಾ, ತೊದಲುತ್ತಾ ಮನೆತುಂಬಾ ಓಡಾಡಿಕೊಂಡಾಗ ದೊಡ್ಡ ಹಬ್ಬವೇ ಮನೆಯಲ್ಲಿ ನೆರೆದಂತೆ ನಮಗೆ ಸಂಭ್ರಮವಾಗುತ್ತದೆ. ಮಕ್ಕಳು ಮನೆಯಲ್ಲಿ ಮಾಡು ಆಟ ತುಂಟಾಟಗಳೆಲ್ಲವೂ ನಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗುತ್ತವೆ. ಅಷ್ಟೇ ಏಕೆ ಮಕ್ಕಳಿರಲವ್ವಾ ಮನೆತುಂಬಾ ಎಂಬ ಗಾದೆಯೇ ನಮ್ಮಲ್ಲಿ ಇದೆ. ಮಕ್ಕಳನ್ನು ಬೆಳೆಸಲು ನಾವು ಅನೇಕ ಮಾರ್ಗಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಅವರ ಆರೋಗ್ಯ ಕೆಡದಂತೆ ಕಾಪಾಡಲು ಹಲವು ವೈದ್ಯರ ಸಲಹೆ ಪಡೆಯುತ್ತೇವೆ. ಅವರ ಆಹಾರ ಕ್ರಮ ಹೇಗಿರಬೇಕು? ಎಂಬದರ ಬಗ್ಗೆ ನಮಗೆ ನಾವೇ ಒಂದು ನಿರ್ಧಾರಕ್ಕೆ ಬರುತ್ತೇವೆ. ಆದ್ರೆ ಮನೆಯಲ್ಲಿ ಆಡುತ್ತಿದ್ದ ಮಗು ಮೊದಲ ಬಾರಿ ತಪ್ಪು ಹೆಜ್ಜೆಯಿಟ್ಟು ನಡೆಯುವುದನ್ನ ಕಲಿತಾಗ ನಾವು ಅದರ ಖುಷಿಗೆ ಮನೆಯಲ್ಲಿ ಹಲ್ವಾ ತಯಾರಿಸಿ ಮಗುವಿನ ಬಾಯಿಗಿಟ್ಟು ಸಂಭ್ರಮಿಸುತ್ತೇವೆ.
ಮಗು ಊಟ ಮಾಡಲೋ ಇಲ್ಲವೇ ಮಾತು ಕೇಳಲೋ ಹಠ ಮಾಡಿದಾಗ ಅವುಗಳ ಕೈಗೆ ಮೊದಲು ಸಿಗುವುದೇ ಕ್ಯಾಂಡಿಗಳು. ಇಲ್ಲಿಯೇ ನಾವು ಮಕ್ಕಳ ಆಹಾರ ಕ್ರಮದಲ್ಲಿ ದೊಡ್ಡ ತಪ್ಪು ಹೆಜ್ಜೆಯನ್ನಿಟ್ಟು ಬಿಡುತ್ತೇವೆ. ನಾವು ಈ ಹಿಂದೆಯೇ ಒಂದು ಲೇಖನದಲ್ಲಿ ಹೇಳಿದ್ದೇವು. ಮಗು ಹುಟ್ಟಿದ ಮೇಲೆ ಸುಮಾರು 1 ಸಾವಿರ ದಿನಗಳ ಕಾಲ ಅದರ ಹೊಟ್ಟೆಗೆ ಸಕ್ಕರೆ ಅಂಶ ಸೇರದಂತೆ ನೋಡಿಕೊಳ್ಳಿ ಎಂದು.
ಇದನ್ನೂ ಓದಿ:ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ
ಅದರ ಮುಂದುವರಿದ ಭಾಗವೇ ಇದು. ಮಕ್ಕಳು ಅಂತ ಬಂದಾಗ ಅವರ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸುವುದು ಅಗತ್ಯವಿರುತ್ತದೆ. ನಾವು ಮಕ್ಕಳನ್ನು ಮುದ್ದು ಮಾಡುವ ಭರದಲ್ಲಿ, ಅವರ ಸಣ್ಣ ಸಣ್ಣ ಖುಷಿ ಸಂಭ್ರಮವನ್ನು ನೀಡಿದಾಗ ಸಂಭ್ರಮಿಸುವ ಭರದಲ್ಲಿ ನಾವು ಅವರಿಗೆ ಸಿಹಿಯನ್ನು ತಿನಿಸಿ ಖುಷಿ ಪಡುತ್ತೇವೆ. ಆದ್ರೆ ಈ ರೂಢಿಯನ್ನು ಮುಂದುವರಿಸುವು ಮುನ್ನ ಕೊಂಚ ಎಚ್ಚರಿಕೆ ಇರಲಿ. ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ನಿಮ್ಮ ಮಗುವನ್ನು ಭವಿಷ್ಯದಲ್ಲಿ ಸಕ್ಕರೆ ಕಾಯಿಲೆಯ ರೋಗಿಯನ್ನಾಗಿ ಮಾಡುತ್ತಿದ್ದೀರಾ ಎಂಬ ಅರಿವು ಇರಲಿ.
ಇದನ್ನೂ ಓದಿ:ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
ಭಾರತ ಈಗಾಗಲೇ ಸಕ್ಕರೆ ಕಾಯಿಲೆ ಅನ್ನೋದು ವ್ಯಾಪಕವಾಗಿ ಹರಡಿಕೊಂಡಿದೆ. ಚೀನಾದ ನಂತರ ಅತಿಹೆಚ್ಚು ಸಕ್ಕರೆ ಕಾಯಿಲೆಗಳನ್ನು ಹೊಂದಿರುವ ಜನರ ಸಂಖ್ಯೆ ಭಾರತದಲ್ಲಿಯೇ ಇದ್ದಾರೆ. 7 ಕೋಟಿ 70 ಲಕ್ಷ ಜನರು ಎರಡನೇ ಪ್ರಕಾರದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ತುಂಬಾ ಆತಂಕ ಪಡುವ ವಿಷಯ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಮುಂದಿನ ದಿನಗಳಲ್ಲಿ ಅಂದ್ರೆ 2045ರಷ್ಟೊತ್ತಿಗೆ ಭಾರತದಲ್ಲಿ ಸುಮಾರು 13 ಕೋಟಿಗೂ ಅಧಿಕ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುವ ಜನರ ಇರಲಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿಮ್ಮ ಮಗುವಿನ ಆರೋಗ್ಯದ ರಕ್ಷಣೆ ಈಗ ನಿಮ್ಮ ಕೈಯಲ್ಲಿಯೇ ಇದೆ.
ಸಕ್ಕರೆಯಿಂದ ಮಕ್ಕಳನ್ನು ದೂರವಿಟ್ಟರೆ ಆಗುವ ಲಾಭಗಳೇನು?
ಕೆಲವು ವರ್ಷಗಳ ಕಾಲ ಮಗುವನ್ನು ಸಕ್ಕರೆಯಿಂದ ದೂರವಿಡಿ. ಸಿಹಿ ಪದಾರ್ಥಗಳಿಂದ ಅವರು ಅಂತರ ಕಾಪಾಡುವಂತಹ ಕಾರ್ಯವನ್ನು ಮಾಡಿ. ಅದರಲ್ಲೂ ಪ್ರಮುಖವಾಗಿ ಕ್ಯಾಂಡಿಗಳ, ಟಿಂಡರ್ ಜಾಯ್ ಇಂತಹ ಪದಾರ್ಥಗಳಿಂದ ಮಕ್ಕಳನ್ನು ದೂರ ಇಡುವುದು ತುಂಬಾ ಮುಖ್ಯವಾಗಿದೆ. ಆರಂಭದಲ್ಲಿಯೇ ಆಹಾರ ಕ್ರಮಗಳೇ ಮಕ್ಕಳನ್ನು ಭವಿಷ್ಯದ ದಿನಗಳಲ್ಲಿ ಹೆಚ್ಚು ಆರೋಗ್ಯವಾಗಿಡುತ್ತವೆ. ಸಿಕೆ ಬಿರ್ಲಾ ಆಸ್ಪತ್ರೆಯ ಮಕ್ಕಳ ತಜ್ಞೆ ಶ್ರೇಯಾ ದುಬೆ ಅವರು ಹೇಳುವ ಪ್ರಕಾರ ಬಾಲ್ಯದಲ್ಲಿ ಕಲಿಯುವ ಆಹಾರ ಕ್ರಮ ಹಾಗೂ ಜೀವನ ಶೈಲಿ ಅವರ ಮುಂದಿನ ಬದುಕಿಗೆ ದೊಡ್ಡ ಬುನಾದಿ ಎಂದು ಹೇಳುತ್ತಾರೆ. ಬಾಲ್ಯದಲ್ಲಿ ಹೆಚ್ಚು ಹೆಚ್ಚು ಸಕ್ಕರೆ ಅಂಶ ಹೊಂದಿರುವ ಈ ಕ್ಯಾಂಡಿಗಳನ್ನು ತಿನ್ನುವುದಿರಂದ ಮಕ್ಕಳಲ್ಲಿ ಭವಿಷ್ಯದಲ್ಲಿ ನಿಮ್ಮ ಮಕ್ಕಳ ದೇಹದಲ್ಲಿ ಹೆಚ್ಚು ಹೆಚ್ಚು ಗ್ಲುಕೋಸ್​ ಬಿಡುಗಡೆ ಆಗಲು ಆರಂಭವಾಗಿ ಅವರು ಸಕ್ಕರೆ ಕಾಯಿಲೆಯ ರೋಗಿಗಳಾಗುತ್ತಾರೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ.
ಡಾ ದುಬೆ ಹೇಳುವ ಪ್ರಕಾರ ಮಕ್ಕಳಿಗೆ ಅತಿಹೆಚ್ಚು ಸಕ್ಕರೆ ಅಂಶವನ್ನು ಸೇವಿಸಲು ಬಿಡುವುದರಿಂದ ಮುಂದೆ ಭವಿಷ್ಯದಲ್ಲಿ ಅವರ ಎರಡನೇ ಪ್ರಕಾರದ ಸಕ್ಕರೆ ಕಾಯಿಲೆಯಿಂದ ಅಂದ್ರೆ ಸೆಕೆಂಡ್ ಟೈಪ್ ಆಫ್ ಶುಗರ್​ನಿಂದ ಬಳಲುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಹೇಳುತ್ತಾರೆ. ಮಕ್ಕಳಿಗೆ ತೀರ ಮಿತವಾದ ಸಿಹಿ ಪದಾರ್ಥಗಳನ್ನು ನೀಡುವುದರಿಂದ ಈಗಿನಿಂದಲೇ ಅವರ ರಕ್ತದ ಸಕ್ಕರೆ ಕಾಯಿಲೆಯಿಂದ ತಡೆಯಲು ಸಾಧ್ಯವಾಗುತ್ತದೆ.ಅವರ ಎನರ್ಜಿ ಲೇವಲ್​ ಹೆಚ್ಚುತ್ತದೆ. ಸಕ್ಕರೆ ಕಾಯಿಲೆ ಹಾಗೂ ಮೆಟಾಬೊಲಿಕ್ ಡಿಸ್​ಆರ್ಡರ್​ನಂತಹ ಅಪಾಯದಿಂದ ಅವರನ್ನು ರಕ್ಷಿಸಲು ಸಹಾಯವಾಗುತ್ತದೆ ಎಂದು ಡಾ ದುಬೆ ಹೇಳಿದ್ದಾರೆ.
ಸಕ್ಕರೆಯ ಅಂಶವಿರುವ ಆಹಾರವನ್ನು ನೀವು ಮಕ್ಕಳಿಗೆ ನೀಡುವುದರಿಂದ ಈಗಾಗಲೇ ಹೇಳಿದಂತೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಅದರ ಜೊತೆಗೆ ದಂತಕ್ಕೆ ಸಂಬಂಧಿಸಿದ ಕಾಯಿಲೆಗಳು ಕೂಡ ಬರುತ್ತವೆ. ಅತಿ ಸಿಹಿ ಪದಾರ್ಥಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಕೂಡ ಕಡಿಮೆ ಆಗುತ್ತದೆ. ಅವರ ನಡುವಳಿಗೆ ಹಾಗೂ ನೆನಪಿನ ಶಕ್ತಿಯ ಮೇಲೆಯೂ ಕೂಡ ಇದು ಪ್ರಭಾವ ಬೀರುವ ಸಾಧ್ಯತೆ ಹೆಚ್ಚು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ