/newsfirstlive-kannada/media/post_attachments/wp-content/uploads/2023/10/MS-Dhoni.jpg)
ಕ್ರಿಕೆಟಿಗ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಸಾರ್ವಜನಿಕ ವಲಯದಲ್ಲಿ ಅತಿದೊಡ್ಡ ಫ್ಯಾನ್ಸ್ ಬೇಸ್ ಹೊಂದಿರುವ ಧೋನಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಾಗಿ ಇಂದು ಘೋಷಣೆ ಮಾಡಿದೆ.
ಎಸ್‌ಬಿಐನ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಮಾರ್ಕೆಟಿಂಗ್ ಮತ್ತು ಜಾಹೀರಾತಿನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಮಾತನಾಡಿ.. ಧೋನಿ ಅವರನ್ನು ನಮ್ಮ ಬ್ಯಾಂಕ್ನ ಬ್ರಾಂಡ್ ಅಂಬಾಸಿಡರ್ ಸೇರಿಸಿಕೊಳ್ಳುವುದಕ್ಕೆ ತುಂಬಾ ಸಂತೋಷವಾಗಿದೆ. ಎಸ್‌ಬಿಐ ಜತೆಗಿನ ಧೋನಿ ಒಡನಾಟ ನಮ್ಮ ಬ್ರ್ಯಾಂಡ್‌ಗೆ ಹೊಸ ಅವತಾರ ನೀಡಲಿದೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಸ್ತಿಗಳು, ಠೇವಣಿಗಳು, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ವಿಷಯದಲ್ಲಿ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ. ದೇಶದಲ್ಲೇ ಅತಿ ದೊಡ್ಡ ಸಾಲ ನೀಡುವ ಸಂಸ್ಥೆಯೂ ಆಗಿದ್ದು, ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಭಾರತೀಯ ಕುಟುಂಬಗಳ ಮನೆ ಖರೀದಿ ಕನಸುಗಳನ್ನು ಈಡೇರಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್