SBIನಲ್ಲಿ 2964 ಖಾಲಿ ಉದ್ಯೋಗಗಳು.. ಈ ಕೂಡಲೇ ಯಾರ್ ಯಾರು ಅರ್ಜಿ ಸಲ್ಲಿಸಬಹುದು?

author-image
Bheemappa
Updated On
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ನಡೆಸಬೇಕು.. ಉದ್ಯೋಗಾಕಾಂಕ್ಷಿಗಳು ಏನೇನು ಮಾಡಬೇಕು?
Advertisment
  • ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಿರುವ ಎಸ್​ಬಿಐ
  • ಬ್ಯಾಂಕ್​ನಲ್ಲಿ ಕೆಲಸ ಮಾಡಬೇಕು ಎನ್ನವವರಿಗೆ ಉತ್ತಮ ಅವಕಾಶ
  • ಕರ್ನಾಟಕದ ಈ ಕೇಂದ್ರಗಳಲ್ಲೂ ಹುದ್ದೆಯ ಪರೀಕ್ಷೆ ಬರೆಯಬಹುದು

ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಆಫರ್​​ ಕೊಟ್ಟಿದೆ. ಈ ಎಸ್​ಬಿಐನಲ್ಲಿ ಖಾಲಿ ಇರುವಂತ ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗೆ ಆಹ್ವಾನ ನೀಡಲಾಗಿದೆ. 500 ಅಲ್ಲ, 1000 ಉದ್ಯೋಗಗಳಲ್ಲ, ಬರೋಬ್ಬರಿ 2 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸದ್ಯ ಈ ಸಂಬಂಧ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ.

ಎಸ್​ಬಿಐನಲ್ಲಿ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿರುವವರು ಆನ್​ಲೈನ್​ನಲ್ಲಿ ಮೂಲಕ ಅರ್ಜಿ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆಗಳು ಆರಂಭವಾಗಿದ್ದು ಆಸಕ್ತರು ಈ ಕೂಡಲೇ ಅಪ್ಲೇ ಮಾಡಬಹುದು.

ಈ ಉದ್ಯೋಗಗಳು ಬೆಂಗಳೂರಿನಲ್ಲೂ ಇವೆ. ಹೀಗಾಗಿ ಕನ್ನಡಿಗರು ಕೂಡ ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇದು ಅಲ್ಲದೇ ಪರೀಕ್ಷಾ ಕೇಂದ್ರಗಳು ಕೂಡ ಕರ್ನಾಟಕದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಮೈಸೂರಿನಲ್ಲಿವೆ. ಅರ್ಜಿ ಸಲ್ಲಿಕೆ ಮಾಡಿದವರು ಈ ಕೇಂದ್ರಗಳಲ್ಲಿ  ಪರೀಕ್ಷೆ ಬರೆಯಬಹುದು.

ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು?
ಸರ್ಕಲ್ ಬೇಸ್ಡ್ ಆಫೀಸರ್ (CBO)
ಒಟ್ಟು ಹುದ್ದೆ - 2964

ಇದನ್ನೂ ಓದಿ:SSLC, ITI ಮುಗಿಸಿದವ್ರಿಗೆ ಸರ್ಕಾರಿ ಉದ್ಯೋಗ.. 9 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image

ವಿದ್ಯಾರ್ಹತೆ
ಯಾವುದೇ ಪದವಿ
ಮೆಡಿಕಲ್​, ಇಂಜಿನಿಯರಿಂಗ್​, ಸಿಎ, ಕಾಸ್ಟ್ ಅಕೌಂಟೆನ್ಸ್ ಮಾಡಿದವರಿಗೂ ಅವಕಾಶ ಇದೆ
​​
ವಯೋಮಿತಿ
21 ವರ್ಷದಿಂದ 30 ವಯಸ್ಸಿನ ಒಳಗಿನವರಿಗೆ ಅವಕಾಶ

ಅರ್ಜಿ ಶುಲ್ಕ ಎಷ್ಟು ಇದೆ?

750 ರೂಪಾಯಿಗಳು

ಆಯ್ಕೆ ಪ್ರಕ್ರಿಯೆ

  • ಆನ್‌ಲೈನ್ ಪರೀಕ್ಷೆ
  • ಸ್ಕ್ರೀನಿಂಗ್
  • ಸಂದರ್ಶನ
  • ಸ್ಥಳೀಯ ಭಾಷಾ ಪರೀಕ್ಷೆ

ವೇತನ ಶ್ರೇಣಿ
48,480 ರೂಪಾಯಿದಿಂದ 85,920

ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ 09 ಮೇ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 29 ಮೇ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment