/newsfirstlive-kannada/media/post_attachments/wp-content/uploads/2024/12/JOB_SBI-2.jpg)
ಬ್ಯಾಂಕ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಶುಭಸುದ್ದಿಯಾಗಿದೆ. ಏಕೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೊಡ್ಡ ಮಟ್ಟದಲ್ಲಿ ದೇಶದ್ಯಾಂತ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ. ಅರ್ಹ ಹಾಗೂ ಆಸಕ್ತಿ ಇರುವ ಉದ್ಯೋಗಾಕಾಂಕ್ಷಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈಗಾಗಲೇ ಎಸ್ಬಿಐ ನೋಟಿಫಿಕೆಶನ್ ರಿಲೀಸ್ ಮಾಡಿ ಮಾಹಿತಿ ನೀಡಿದೆ.
ಸರ್ಕಾರಿ ಕೆಲಸಕ್ಕೆ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಗೋಲ್ಡನ್ ಚಾನ್ಸ್ ಆಗಿದೆ. ಜೂನಿಯರ್ ಅಸೋಸಿಯೇಟ್ (Customer Support & Sales)/ Clerk ಕೆಲಸಗಳು ಖಾಲಿ ಇವೆ. ಒಟ್ಟು 14,344 ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಇದರಲ್ಲಿ ಬ್ಯಾಕ್ಲಾಗ್ ಹುದ್ದೆಗಳು ಸೇರಿದ್ದು ಇವು ಒಟ್ಟು 609 ಇವೆ. ಬ್ಯಾಂಕ್ನಲ್ಲಿ ಉದ್ಯೋಗ ಹುಡುಕುತ್ತಿರುವವರು ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಡಿಸೆಂಬರ್ 17 ರಿಂದಲೇ ಅರ್ಜಿ ಆರಂಭವಾಗಿದ್ದು 2025ರ ಜನವರಿ 7 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.
ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು
ಎಸ್ಬಿಐ ಭಾರತದ್ಯಾಂತ 14,344 ಹುದ್ದೆಗಳಿದ್ದು ಲಡಾಖ್ಗೆ 50 ಹುದ್ದೆಗಳಿವೆ. ಈ ಬೃಹತ್ ಪ್ರಮಾಣದ ನೇಮಕದಲ್ಲಿ ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ ಸೇರಿದಂತೆ ಕರ್ನಾಟಕಕ್ಕೂ 203 ಉದ್ಯೋಗಗಳು ಮೀಸಲಿವೆ. ಇನ್ನು ಈ ಕೆಲಸಗಳಿಗೆ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಅಭ್ಯರ್ಥಿಗಳು ಪಡೆದಿರಬೇಕು. ಹಾಗೇ ಮಾಸಿಕ ವೇತನವು 24,050 ರಿಂದ 64,480 ರೂಪಾಯಿಗಳು ಇದೆ.
ಇದನ್ನೂ ಓದಿ:SSLC, PUC ಮುಗಿಸಿದವ್ರಿಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಹುದ್ದೆಗಳು
ಆಯ್ಕೆ ಪ್ರಕ್ರಿಯೆ ಹೇಗಿದೆ..?
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ವಯಸ್ಸು 20 ರಿಂದ 28 ವರ್ಷಗಳ ಒಳಗೆ ಇರಬೇಕು. ಭಾರತದ ಪ್ರಜೆಯಾಗಿರಬೇಕು. ಅರ್ಜಿ ಸಲ್ಲಿಕೆ ಮಾಡುವ ಆಕಾಂಕ್ಷಿಗಳು ಬ್ಯಾಂಕ್ ನಡೆಸುವ ಪೂರ್ವಭಾವಿ ಪರೀಕ್ಷೆ (Preliminary Exam), ಮುಖ್ಯ ಪರೀಕ್ಷೆ (Mains Exam), ಭಾಷಾ ಪ್ರಾವೀಣ್ಯತೆ ಪರೀಕ್ಷೆ ಇವುಗಳಲ್ಲಿ ಉತ್ತೀರ್ಣರಾಗಬೇಕು. ಇವುಗಳ ನಂತರವೇ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಇನ್ನು ಪರೀಕ್ಷೆಯಲ್ಲಿ 4 ಪ್ರಶ್ನೆಗಳನ್ನು ತಪ್ಪಾಗಿ ಉತ್ತರಿಸಿದರೆ 1 ಅಂಕ ಕಡಿತ ಮಾಡಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸೂಕ್ಷ್ಮವಾಗಿ ಉತ್ತರಿಸಬೇಕು.
ಅರ್ಜಿ ಶುಲ್ಕ ವಿಷಯಕ್ಕೆ ಬಂದರೆ ಜನರಲ್, ಒಬಿಸಿ, ಎಡಬ್ಲುಎಸ್ ಅಭ್ಯರ್ಥಿಗಳು 750 ರೂಪಾಯಿಗಳನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು. ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಮಾಡಲು ಬಯಸುವ ಅಭ್ಯರ್ಥಿಗಳು ಈ ವೆಬ್ಸೈಟ್ಗೆ ಭೇಟಿ ನೀಡಿ.- https://ibpsonline.ibps.in/sbidrjadec24/
ಪೂರ್ಣ ಮಾಹಿತಿಗಾಗಿ-
https://sbi.co.in/documents/77530/43947057/16122024_JA+2024+-Detailed+Advt.pdf/6b16e166-78df-2cc9-36a0-3680682d6434?t=1734354989415
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ