SBIನಲ್ಲಿ 13,735 ಉದ್ಯೋಗಗಳು.. ಕೆಲವೇ ದಿನಗಳು ಬಾಕಿ, ಈ ಕೂಡಲೇ ಅಪ್ಲೇ ಮಾಡಿ

author-image
Bheemappa
Updated On
ಕರ್ನಾಟಕ ಲೋಕಾಯುಕ್ತದಿಂದ Group- C ಹುದ್ದೆಗಳ ನೇಮಕಾತಿ.. ಕೊನೆ ದಿನಾಂಕ ಯಾವಾಗ?
Advertisment
  • ಕರ್ನಾಟಕಕ್ಕೆ ಮೀಸಲಿರುವ ಒಟ್ಟು ಉದ್ಯೋಗಗಳು ಎಷ್ಟು..?
  • ಈ ಉದ್ಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ
  • ಯಾರು ಕೆಲಸಗಳಿಗೆ ಅಪ್ಲೇ ಮಾಡಬಹುದು?, ಮಾಹಿತಿ ಇದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​​ಬಿಐ) ದೇಶದ ಮಹತ್ವದ ಸಂಸ್ಥೆಯಾಗಿದ್ದು ಇಲ್ಲಿ ಕೆಲಸ ಮಾಡಲು ಸಾಕಷ್ಟು ಆಕಾಂಕ್ಷಿಗಳು ಕಾಯುತ್ತಿರುತ್ತಾರೆ. ಅದರಂತೆ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆಸಕ್ತರು ಜನವರಿ 7ರ ಒಳಗಾಗಿ ಅಪ್ಲೇ ಮಾಡಬಹುದು.

13,735 ಉದ್ಯೋಗಗಳನ್ನು ಸದ್ಯ ಎಸ್​​ಬಿಐ ಭರ್ತಿ ಮಾಡಲು ನಿರ್ಧರಿಸಿದೆ. ಈ ಬೃಹತ್​ ಪ್ರಮಾಣದ ನೇಮಕಾತಿಯಲ್ಲಿ ಕರ್ನಾಟಕಕ್ಕೂ 203 ಹುದ್ದೆಗಳು ಇವೆ. 2024ರ ಕೊನೆಯಲ್ಲಿ ಎಸ್​​ಬಿಐ ದೊಡ್ಡ ಮಟ್ಟದ ಉದ್ಯೋಗ ನೇಮಕ ಬಗ್ಗೆ ನೋಟಿಫಿಕೆಶನ್ ಹೊರಡಿಸಿತ್ತು. ಅದರಂತೆ ಕೊನೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಅರ್ಜಿ ಸಲ್ಲಿಸದೇ ಇರುವವರು ಈ ಕೂಡಲೇ ಸಲ್ಲಿಸಬಹುದು.

publive-image

ಇದನ್ನೂ ಓದಿDRDOನಲ್ಲಿ JRFಗೆ ಅರ್ಜಿ ಸಲ್ಲಿಕೆ ಮಾಡಬಹುದು.. ಪರೀಕ್ಷೆ ಇಲ್ಲ, ಸಂದರ್ಶನದಲ್ಲೇ ಅಭ್ಯರ್ಥಿಗಳ ಆಯ್ಕೆ

ಎಸ್​ಬಿಐ ಜೂನಿಯರ್ ಅಸೋಸಿಯೇಟ್ (Customer Support & Sales)/ Clerk ಹುದ್ದೆಗಳನ್ನು ತುಂಬುತ್ತಿದೆ. ಈ ಕೆಲಸಕ್ಕೆ ತಿಂಗಳಿಗೆ 24,050 ರಿಂದ 64,480 ರೂಪಾಯಿಗಳ ಸ್ಯಾಲರಿ ನೀಡಲಾಗುತ್ತದೆ. ದೇಶದ್ಯಾಂತ ಒಟ್ಟು 13,735 ಹುದ್ದೆಗಳು ಇವೆ. ಕೇಂದ್ರಾಡಳಿತ ಪ್ರದೇಶ ಲಡಾಖ್​ನಲ್ಲಿ 50 ಹುದ್ದೆಗಳಿವೆ. ಕರ್ನಾಟಕಕ್ಕೆ 203 ಹುದ್ದೆಗಳು ಇರುತ್ತವೆ.

ಪದವಿಯನ್ನು ಪೂರ್ಣಗೊಳಿಸಿರಬೇಕು

ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕು ಎಂದರೆ ಅಭ್ಯರ್ಥಿ ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು. 20 ರಿಂದ 28 ವಯಸ್ಸು ಆಗಿರಬೇಕು. ಎಸ್​ಸಿ, ಎಸ್​​ಟಿ, ವಿಶೇಷ ಚೇತನರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಜನರಲ್, ಒಬಿಸಿ ಹಾಗೂ ಇಡಬ್ಲುಎಸ್ ಸೇರಿ ಉಳಿದವರು 750 ರೂಪಾಯಿಗಳನ್ನು ಬ್ಯಾಂಕ್​​ಗೆ ಪಾವತಿಸಬೇಕು.

ಇನ್ನು ಆಯ್ಕೆ ಪ್ರಕ್ರಿಯೆಗೆ ಬಂದರೆ ಮೊದಲು ಪೂರ್ವಭಾವಿ ಪರೀಕ್ಷೆ (Preliminary Exam), ಬಳಿಕ ಮುಖ್ಯ ಪರೀಕ್ಷೆ (Mains Exam) ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಎಂದು 3 ಹಂತದಲ್ಲಿ ಎಕ್ಸಾಂ ಇರುತ್ತವೆ. ಈ ಪರೀಕ್ಷೆಗಳಲ್ಲಿ 4 ಪ್ರಶ್ನೆಗಳನ್ನು ತಪ್ಪಾಗಿ ಟಿಕ್ ಮಾಡಿದರೆ 1 ಅಂಕ ಕಡಿತ ಮಾಡಲಾಗುತ್ತದೆ. ಈ ಎಸ್​ಬಿಐ ಅರ್ಜಿಗಳು 17 ಡಿಸೆಂಬರ್​ನಲ್ಲಿ ಆರಂಭವಾಗಿದ್ದು 7 ಜನವರಿಯಂದು ಕೊನೆಗೊಳ್ಳುತ್ತವೆ. ಅರ್ಜಿ ಸಲ್ಲಿಕೆಗೆ ವೆಬ್​ಸೈಟ್- https://ibpsonline.ibps.in/sbidrjadec24/

ಮಾಹಿತಿಗಾಗಿ-
https://sbi.co.in/documents/77530/43947057/16122024_JA+2024+-Detailed+Advt.pdf/6b16e166-78df-2cc9-36a0-3680682d6434?t=1734354989415

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment