/newsfirstlive-kannada/media/post_attachments/wp-content/uploads/2024/12/JOBS_SBI_BANK.jpg)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಮಕಾಲೀನ ಲೆಕ್ಕ ಪರಿಶೋಧಕರ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಎಸ್‌ಬಿಐನಲ್ಲಿ ಹುದ್ದೆ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ದೇಶದ ಅತ್ಯುತ್ತಮ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಲು ಇದೊಂದು ಉತ್ತಮ ಅವಕಾಶ ಆಗಿದೆ. ಇನ್ನು ಬೆಂಗಳೂರಿಗೆ ಪ್ರತ್ಯೇಕವಾಗಿ 49 ಸ್ಥಾನಗಳು ಇವೆ. ಹೀಗಾಗಿ ಕರ್ನಾಟಕದವರು ಅರ್ಜಿ ಸಲ್ಲಿಕೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಗಳು ಇವೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳಿಗೆ ಇದು ಗೋಲ್ಡನ್ ಚಾನ್ಸ್ ಎನ್ನಬಹುದು. ಮೂರು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಅರ್ಹತೆ, ಆಯ್ಕೆ, ಅರ್ಜಿ ಶುಲ್ಕ, ಆಯ್ಕೆಯ ಮಾಡನದಂಡಗಳು, ಪ್ರಮುಖ ದಿನಾಂಕ ಮತ್ತು ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.
ಉದ್ಯೋಗದ ಹೆಸರು- ಸಮಕಾಲೀನ ಲೆಕ್ಕ ಪರಿಶೋಧಕ (Concurrent Auditor)
ಒಟ್ಟು ಉದ್ಯೋಗಗಳು- 1194
ಸ್ಯಾಲರಿ ಹೇಗಿದೆ- 45,000 ದಿಂದ 80,000 ರೂಪಾಯಿಗಳು
ಕೆಲಸ ಮಾಡುವ ಸ್ಥಳ- ಭಾರತದ್ಯಾಂತ
ಇದನ್ನೂ ಓದಿ:ಕರ್ನಾಟಕದ ಅಂಚೆ ಕಚೇರಿಗಳಲ್ಲಿನ 1,135 ಹುದ್ದೆಗಳಿಗೆ ಅರ್ಜಿ ಆಹ್ವಾನ.. SSLC ಪಾಸ್ ಆಗಿದ್ರೆ ಸಾಕು
ವಯಸ್ಸಿನ ಮಿತಿ- 63 ವರ್ಷದ ಒಳಗಿನ ಅಭ್ಯರ್ಥಿಗಳು
ಅರ್ಹತೆ- ಎಸ್‌ಬಿಐ ಮತ್ತು ಅದರ ಸಹವರ್ತಿ ಬ್ಯಾಂಕ್‌ಗಳ ನಿವೃತ್ತ ಅಧಿಕಾರಿಗಳು
ಅನುಭವ- ಆಡಿಟ್, ಕ್ರೆಡಿಟ್ ಅಥವಾ ಫಾರೆಕ್ಸ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ
ಆಯ್ಕೆ ಪ್ರಕ್ರಿಯೆ ಹೇಗಿದೆ?
ಹೆಸರುಗಳ ಶಾರ್ಟ್ ಲಿಸ್ಟ್
ಸಂದರ್ಶನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 18 ಫೆಬ್ರುವರಿ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 15 ಮಾರ್ಚ್ 2025
ವೆಬ್ಸೈಟ್- https://bank.sbi/web/careers
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ