‘ಕನ್ನಡ ಮಾತಾಡಲ್ಲ’ ಅಂತ ಧಿಮಾಕು ತೋರಿದ್ದ ಮ್ಯಾನೇಜರ್.. ಬೇಕಾಬಿಟ್ಟಿ ಕ್ಷಮೆಗೆ ಕನ್ನಡಿಗರಿಂದ ಆಕ್ರೋಶ

author-image
Veena Gangani
Updated On
‘ಕನ್ನಡ ಮಾತಾಡಲ್ಲ’ ಅಂತ ಧಿಮಾಕು ತೋರಿದ್ದ ಮ್ಯಾನೇಜರ್.. ಬೇಕಾಬಿಟ್ಟಿ ಕ್ಷಮೆಗೆ ಕನ್ನಡಿಗರಿಂದ ಆಕ್ರೋಶ
Advertisment
  • ಕನ್ನಡಿಗರ ಆಕ್ರೋಶಕ್ಕೆ ಮಣಿದ ಬ್ಯಾಂಕ್ ಮ್ಯಾನೇಜರ್ ಯೂಟರ್ನ್
  • ಕನ್ನಡ ಮಾತಾಡಲ್ಲ, ಹಿಂದಿ ಮಾತಾಡುತ್ತೇನೆ ಅಂತ ಹೇಳಿದ್ದ ಮ್ಯಾನೇಜರ್
  • ಕನ್ನಡಿಗರ ಪ್ರತಿಭಟನೆಯ ಭೀತಿಯಿಂದ ಕ್ಷಮೆ ಕೇಳಿದ್ರಾ ಬ್ಯಾಂಕ್ ಮ್ಯಾನೇಜರ್?

ಬೆಂಗಳೂರು: ಬೇರೆ, ಬೇರೆ ರಾಜ್ಯದವರು ಬೆಂಗಳೂರಿಗೆ ಬಂದು ಕೆಲಸ ಮಾಡ್ತಾರೆ. ಆದ್ರೆ, ಅವರಿಗೆಲ್ಲಾ ಕನ್ನಡ ಮಾತಾಡು ಅಂದ್ರೆ ಸಾಕು ನನಗೆ ಕನ್ನಡ್ ಗೊತ್ತಿಲ್ಲ. ನನಗೆ ಕನ್ನಡ ಬರೋದಿಲ್ಲ ಅಂತೇಲ್ಲಾ ಹೇಳಿ ಧಿಮಾಕು ತೋರಿಸುತ್ತಾರೆ.

ಇದನ್ನೂ ಓದಿ:ಮಂತ್ರಾಲಯ ಹುಂಡಿ ಎಣಿಕೆ; ಕೇವಲ 20 ದಿನದಲ್ಲಿ ಹರಿದು ಬಂದ ಕೋಟಿ ಕೋಟಿ ಹಣ, ಚಿನ್ನ, ಬೆಳ್ಳಿ

publive-image

ಆದ್ರೇ ಕರ್ನಾಟಕದಲ್ಲಿದ್ದು ಸ್ಥಳೀಯ ಭಾಷೆ ಕಲಿಯಲ್ಲ ಅಂದ್ರೆ ಹೇಗೆ ಹೇಳಿ. ಹೀಗೆ ನಾನು ಹಿಂದಿ ಮಾತಾಡುತ್ತೇನೆ, ಕನ್ನಡ ಬರೋದಿಲ್ಲ ಅಂತ ಹೇಳಿದವರಿಗೆ ಕನ್ನಡಿಗರು ಆಗಾಗ ತಕ್ಕ ಶಾಸ್ತಿ ಮಾಡೋದನ್ನ ನೋಡಿದ್ದೇವೆ. ಈ ನಡುವೆ ಎಸ್‌ಬಿಐ ಮಹಿಳಾ ಮ್ಯಾನೇಜರ್ ಕರ್ನಾಟಕದಲ್ಲಿರುವವರೆಗೆ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದು ದರ್ಪ ಮೆರೆದ ಘಟನೆ ಆನೇಕಲ್ ತಾಲೂಕು ಸೂರ್ಯ ನಗರ ಎಸ್​ಬಿಐನಲ್ಲಿ ನಡೆದಿತ್ತು.


">May 20, 2025

ಆ ಮ್ಯಾನೇಜರ್ ಕನ್ನಡ ಮಾತಾಡಲ್ಲ.. ಹಿಂದಿ ಮಾತಾಡ್ತೀನಿ ಎಂದು ಹೇಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು. ಹೀಗಾಗಿ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋ ವೈರಲ್​ ಆಗುತ್ತಿದ್ದಂತೆ, ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಂತೆ ಪ್ರತಿಭಟನೆಯ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ. ಆದ್ರೆ ಮ್ಯಾನೇಜರ್ ಕ್ಷಮೆಗೆ ಕನ್ನಡಿಗರು ಒಪ್ಪಿಗೆ ಸೂಚಿಸಿಲ್ಲ. ಮ್ಯಾನೇಜರ್ ಬಳಿ ತಪ್ಪು ಮಾಡಿದ ಪಶ್ಚಾತ್ತಾಪ ಕಾಣ್ತಿಲ್ಲ. ಕ್ಷಮೆ ಕೇಳುವುದರಲ್ಲಿ ಯಾವುದೇ ಬೇಸರ ಕಾಣ್ತಿಲ್ಲ. ಕಾಟಾಚಾರಕ್ಕೆ ಕ್ಷಮೆ ಕೇಳ್ತಿದ್ದಾರೆ ಅಂತ ಟೀಕಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬರವಣಿಗೆಯಲ್ಲಿ ಕ್ಷಮೆ ಕೇಳಬೇಕು ಅಂತ ಆಗ್ರಹಿಸುವಂತೆ, ಆಕೆಯನ್ನ ಕೆಲಸದಿಂದ ವಜಾಗೊಳಿಸಬೇಕು ಅಂತ ಕನ್ನಡ ಹೋರಾಟಗಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಂದು ಕರವೇ ಸಂಘಟನೆಯು ಬ್ಯಾಂಕ್ ಬಳಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment