/newsfirstlive-kannada/media/post_attachments/wp-content/uploads/2024/12/JOB_BANK-5.jpg)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ದಲ್ಲಿ ಖಾಲಿ ಇರುವಂತ ಉಪಾಧ್ಯಕ್ಷ (Corporate Communication and Marketing) ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಕೇವಲ ಇದೊಂದೇ ಕೆಲಸ ಇದ್ದು ಈ ಸ್ಥಾನ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಕಾಂಟ್ರಾಕ್ಟ್ ಬೇಸ್ ಉದ್ಯೋಗವಾಗಿದ್ದು ಅಪ್ಲೇ ಮಾಡಲು ಇಂದು ಕೊನೆ ದಿನವಾಗಿದೆ.
55 ವರ್ಷ ಮೇಲ್ಪಟ್ಟವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಆಯ್ಕೆ ಆದ ಅಭ್ಯರ್ಥಿಗೆ ಮುಂಬೈನಲ್ಲಿ ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಇದು ಗುತ್ತಿಗೆ ಆಧಾರದ ಉದ್ಯೋಗವಾಗಿದ್ದರಿಂದ ಕನಿಷ್ಠ ಮುಂದಿನ 5 ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವರ್ಷಕ್ಕೆ 1 ಕೋಟಿ ರೂಪಾಯಿಗಳಂತೆ ವೇತನ ನೀಡುತ್ತದೆ.
ಇದನ್ನೂ ಓದಿ:ಜಸ್ಟ್ 10th ಪಾಸ್ ಆದ ಯುವಕ, ಯುವತಿಯರಿಗೆ ಉದ್ಯೋಗ.. ಆದ್ರೆ ಇದರಲ್ಲಿ ನೀವು ಭಾಗವಹಿಸಿರಬೇಕು
ಈ ಕೆಲಸಕ್ಕೆ ಅರ್ಜಿ ಹಾಕಬೇಕು ಎನ್ನುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬಂಧಿಸಿದ ಮತ್ತು ಸೂಕ್ತವಾದ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷಗಳ ಅನುಭವ ಪಡೆದಿರಬೇಕು. ಅಭ್ಯರ್ಥಿಗಳು ವರ್ಗಗಳ ಮೀಸಲಾತಿ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್ಬಿಐ ನೇಮಕಾತಿ 2024ರ ಅಧಿಕೃತ ಅಧಿಸೂಚನೆ ಪೋಸ್ಟ್‌ನ ಅವಶ್ಯಕತೆಗಳಿಗೆ ಅನುಗುಣವಾಗಿ ಎಲ್ಲಾ ವಿಷಯಗಳಲ್ಲಿ ಅರ್ಹತಾ ಮಾನದಂಡಗಳನ್ನು ಅಭ್ಯರ್ಥಿ ಪೂರೈಸಬೇಕು. ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕ ಇಂದು ಸಂಜೆ ಒಳಗೆ ಅರ್ಜಿ ಸಲ್ಲಿಸಬೇಕು.
- ಅರ್ಜಿಯ ನೋಂದಣಿ ಮತ್ತು ಶುಲ್ಕ ಪಾವತಿಗೆ ಕೊನೆ ದಿನಾಂಕ- 06 ಡಿಸೆಂಬರ್ 2024
- ಅರ್ಜಿಯ ಪ್ರಿಂಟ್ ತೆಗೆದುಕೊಳ್ಳುವ ದಿನ- 21 ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ