newsfirstkannada.com

×

SBI ಬ್ಯಾಂಕ್​ನಿಂದ ಭರ್ಜರಿ ಗುಡ್​ನ್ಯೂಸ್​; 10 ಸಾವಿರ ಹುದ್ದೆಗಳಿಗೆ ನೇಮಕಾತಿ; ಸಂಬಳ ಎಷ್ಟು?

Share :

Published October 8, 2024 at 6:18am

Update October 13, 2024 at 8:33pm

    ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

    ಬರೋಬ್ಬರಿ 10 ಸಾವಿರ ಹೊಸ ಹುದ್ದೆಗಳಿಗೆ ನೇಮಕಾತಿ

    ಶೇ. 85ರಷ್ಟು ಹುದ್ದೆಗಳಿಗೆ ಎಂಜಿನಿಯರ್​ಗಳಿಗೆ ಅವಕಾಶ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷ ಬರೋಬ್ಬರಿ 10 ಸಾವಿರ ಹೊಸ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಎಸ್​ಬಿಐ ಛೇರ್ಮನ್ ಸಿ.ಎಸ್​ ಶೆಟ್ಟಿ ನೀಡಿರೋ ಮಾಹಿತಿ ಪ್ರಕಾರ ಶೇ. 85ರಷ್ಟು ಹುದ್ದೆಗಳಿಗೆ ಎಂಜಿನಿಯರ್​ಗಳ ನೇಮಕಾತಿ ಆಗಲಿದೆ.

ಇತ್ತೀಚೆಗಷ್ಟೇ RBI ಡಿಜಿಟಲ್ ವಿಭಾಗದಲ್ಲಿ ಸರಿಯಾದ ರೀತಿಯಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲ ಅನ್ನೋ ಕಾರಣ ನೀಡಿ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರಿದೆ. ಕೇವಲ ಕೋಟಕ್​ ಮಾತ್ರವಲ್ಲ ಭಾರತದ ಬಹುತೇಕ ಬ್ಯಾಂಕ್​ಗಳಲ್ಲಿ ಹಳೆ ತಂತ್ರಜ್ಞಾನವೇ ಚಾಲ್ತಿಯಲ್ಲಿದೆ. ಹಾಗಾಗಿ RBI ಕ್ರಮಕ್ಕೆ ಮುಂದಾಗೋ ಮುನ್ನವೇ ಎಂಜಿನಿಯರುಗಳನ್ನು ನೇಮಕ ಮಾಡಿ ಬ್ಯಾಂಕಿಂಗ್​​ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸೋ ಪ್ಲಾನ್​​ ಎಸ್​​ಬಿಐನದ್ದು ಎಂದು ತಿಳಿದು ಬಂದಿದೆ.

ಎಸ್​ಬಿಐ ಮುಖ್ಯಸ್ಥರು ಏನಂದ್ರು?

ನೇಮಕ ಮಾಡಿಕೊಳ್ಳೋ ಎಲ್ಲರನ್ನು ನಾವು ಮೊದಲು ಬ್ಯಾಂಕಿಂಗ್​ಗೆ ಹಾಕುತ್ತೇವೆ. ಬಳಿಕ ಅವರ ಸಾಮರ್ಥ್ಯದ ಆಧಾರದ ಮೇರೆಗೆಬ ಐಟಿ ಅಥವಾ ಬಿಸಿನೆಸ್ ಜವಾಬ್ದಾರಿ ನೀಡಲಾಗುವುದು ಎಂದರು ಎಸ್​ಬಿಐ ಮುಖ್ಯಸ್ಥರು.

ಎಷ್ಟು ಹುದ್ದೆಗಳಿಗೆ ನೇಮಕಾತಿ?

ಮುಂದೆ ಬ್ಯಾಂಕಿಂಗ್ ಜ್ಞಾನ ಇರೋ ಎಂಜಿನಿಯರುಗಳಿಗೆ ಎಸ್​ಬಿಐ ನೇಮಕಾತಿಯಲ್ಲಿ ಆದ್ಯತೆ ಸಿಗಲಿದೆ. ಒಟ್ಟು 10 ಸಾವಿರ ಪ್ರೊಬೇಶನರಿ ಆಫೀಸರ್ಸ್​ ಮತ್ತು ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ ಆಗಲಿದೆ. ನೇಮಕವಾಗೋ ಎಲ್ಲರಿಗೂ ಆರಂಭಿಕ ತರಬೇತಿ ನೀಡಿ, ವಿವಿಧ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜನೆ ಮಾಡಲಾಗುವುದು. ಸಂಬಳ 45 ರಿಂದ 80 ಸಾವಿರ ಇರಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ 945 ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ಬರೋಬ್ಬರಿ 83 ಸಾವಿರ ಸಂಬಳ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SBI ಬ್ಯಾಂಕ್​ನಿಂದ ಭರ್ಜರಿ ಗುಡ್​ನ್ಯೂಸ್​; 10 ಸಾವಿರ ಹುದ್ದೆಗಳಿಗೆ ನೇಮಕಾತಿ; ಸಂಬಳ ಎಷ್ಟು?

https://newsfirstlive.com/wp-content/uploads/2024/09/JOB_SBI-1.jpg

Load More