ಪತಿ ವಿರುದ್ಧ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ IPS ಪತ್ನಿ.. ಪೋಷಕರಿಗೆ ಬಹಿರಂಗ ಕ್ಷಮಾಪಣೆಗೆ ಸುಪ್ರೀಂ ಆದೇಶ

author-image
Ganesh
Updated On
ಪತಿ ವಿರುದ್ಧ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ IPS ಪತ್ನಿ.. ಪೋಷಕರಿಗೆ ಬಹಿರಂಗ ಕ್ಷಮಾಪಣೆಗೆ ಸುಪ್ರೀಂ ಆದೇಶ
Advertisment
  • ಮಹಿಳಾ ಪೊಲೀಸ್ ಅಧಿಕಾರಿಗೆ ಭಾರೀ ಮುಖಭಂಗ
  • ಮಾಜಿ ಪತಿ, ಮಾವನಿಗೆ ಬೇಷರತ್ ಕ್ಷಮೆ ಕೇಳಲು ಸೂಚನೆ
  • ಕುಟುಂಬ ಕಲ್ಯಾಣ ಸಮಿತಿಗೆ ಸುಪ್ರೀಂ ಅನುಮೋದನೆ

ಸುಪ್ರೀಂ ಕೋರ್ಟ್​ನ ಅಪರೂಪದ ಆದೇಶವೊಂದರಲ್ಲಿ ಮಹಿಳಾ ಐಪಿಎಸ್ ಅಧಿಕಾರಿಗೆ ತನ್ನ ಮಾಜಿ ಪತಿ, ಪತಿಯ ಪೋಷಕರಿಗೆ ಬೇಷರತ್ ಆಗಿ ಪತ್ರಿಕೆಗಳ ಮೂಲಕ ಕ್ಷಮೆ ಕೇಳಲು ಆದೇಶಿಸಿದೆ. ಮಾಜಿ ಪತಿ ಹಾಗೂ ಮಾವನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಮಹಿಳಾ ಐಪಿಎಸ್ ಅಧಿಕಾರಿ ಜೈಲಿಗೆ ಕಳಿಸಿದ್ದರು. ವರದಕ್ಷಿಣೆ ಕಿರುಕುಳ , ಹಲ್ಲೆ, ರೇಪ್ ಸೇರಿದಂತೆ ಅನೇಕ ಸುಳ್ಳು ಕೇಸ್ ಹಾಕಿ ಮಾಜಿ ಪತಿ ಹಾಗೂ ಮಾವನಿಗೆ ದೈಹಿಕ, ಮಾನಸಿಕ ಕಿರುಕುಳವನ್ನು ಮಹಿಳಾ ಐಪಿಎಸ್‌ ಅಧಿಕಾರಿ ದೂರು ನೀಡಿದ್ದರು.

ಹೀಗಾಗಿ ಈಗ ಸುಪ್ರೀಂಕೋರ್ಟ್, ಮಾಜಿ ಪತಿ ಹಾಗೂ ಮಾವನಿಗೆ ಬೇಷರತ್ ಕ್ಷಮೆ ಕೇಳಲು ಮಹಿಳಾ ಐಪಿಎಸ್ ಅಧಿಕಾರಿಗೆ ಸೂಚನೆ ನೀಡಿದೆ. ಜೊತೆಗೆ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಆಕೆಯ ಪೋಷಕರು ತಮ್ಮ ಕ್ಷಮಾಪಣೆಯನ್ನು ರಾಷ್ಟ್ರ ಮಟ್ಟದ ಪ್ರಮುಖ ಇಂಗ್ಲಿಷ್, ಹಿಂದಿ ಪತ್ರಿಕೆಗಳಲ್ಲಿ ಪ್ರಕಟಿಸಲು ಸೂಚನೆ ನೀಡಿದೆ. ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲೂ ಕ್ಷಮಾಪಣೆ ಕೇಳಬೇಕೆಂದು ಮಹಿಳಾ ಸುಳ್ಳು ಕೇಸ್​ನಿಂದಾಗಿ 109 ದಿನ ಮಹಿಳೆಯ ಪತಿ ಜೈಲಿನಲ್ಲಿದ್ದರು. ಮಹಿಳೆಯ ಮಾವ 103 ದಿನ ಜೈಲಿನಲ್ಲಿದ್ದರು. ಮಹಿಳೆಯ ಪತಿ, ಮಾವನಿಗಾದ ನೋವು, ಅಪಮಾನ, ಹಿಂಸೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ಗೊತ್ತಿಲ್ದೇ ತಪ್ಪಾಗಿದೆ ಎಂದ KGF ಬಾಬು.. ಅಮಿರ್​ ಖಾನ್, ಬಿಗ್​ಬಿ ಬಳಿ ಖರೀದಿಸಿದ್ದ ಕಾರುಗಳ ಟ್ಯಾಕ್ಸ್ ಪಾವತಿ!

publive-image

2018 ರಿಂದ ಬೇರೆ ಬೇರೆ ವಾಸ ಮಾಡುತ್ತಿರುವ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಪತಿಗೆ ವಿವಾಹ ವಿಚ್ಛೇದನವನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದೆ. ಜೊತೆಗೆ ಪತಿ ಹಾಗೂ ಪತಿಯ ಪೋಷಕರ ವಿರುದ್ಧ ದಾಖಲಿಸಿದ್ದ ಎಲ್ಲಾ ಕ್ರಿಮಿನಲ್ ಕೇಸ್​ಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ವಿವಾಹ ವಿಚ್ಛೇದನ ಪಡೆದ ದಂಪತಿಯ ಮಗಳನ್ನು ಮಹಿಳಾ ಐಪಿಎಸ್ ಅಧಿಕಾರಿಯ ವಶಕ್ಕೆ ಸುಪ್ರೀಂ ಕೋರ್ಟ್ ನೀಡಿದೆ. ಪತಿ, ಪೋಷಕರಿಗೆ ಮಗಳನ್ನು ಭೇಟಿಯಾಗಲು ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಸುಪ್ರೀಂ ಕೋರ್ಟ್​ನ ಸಿಜೆಐ ಬಿ.ಆರ್.ಗವಾಯಿ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ.

ಮಹಿಳಾ ಐಪಿಎಸ್ ಅಧಿಕಾರಿಯು ಪತಿ ಹಾಗೂ ಅವರ ಪೋಷಕರ ವಿರುದ್ಧ 6 ಪ್ರತ್ಯೇಕ ಕ್ರಿಮಿನಲ್ ಕೇಸ್​ಗಳನ್ನು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 498(ಎ) ಅಡಿ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದರು. ಜೊತೆಗೆ ಐಪಿಸಿ ಸೆಕ್ಷನ್ 307ರಡಿ ಕೊಲೆ ಯತ್ನ ಕೇಸ್ ಕೂಡ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 376ರಡಿ ರೇಪ್ ಕೇಸ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 406ರಡಿ ಕ್ರಿಮಿನಲ್ ನಂಬಿಕೆ ದ್ರೋಹ ಕೇಸ್ ದಾಖಲಿಸಿದ್ದರು. ಇವುಗಳಲ್ಲದೇ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಮೂರು ಕೇಸ್ ದಾಖಲಿಸಿದ್ದರು. ಕೌಟುಂಬಿಕ ಕೋರ್ಟ್​ನಲ್ಲಿ ಡಿವೋರ್ಸ್ ಮತ್ತು ಜೀವನಾಂಶ ಕೋರಿಯೂ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ರೈತನ ಮಗ ಸಜ್ಜು.. ಇಂದು ಅವಕಾಶ ಸಿಕ್ರೆ ಪರಿಶ್ರಮಕ್ಕೆ ಸಿಕ್ಕ ಬೆಲೆ..!

publive-image

ಪತ್ರಿಕೆಗಳಲ್ಲಿ ಯಾವ ಯಾವ ಅಂಶಗಳನ್ನು ಉಲ್ಲೇಖಿಸಿ ಕ್ಷಮಾಪಣೆ ಕೇಳಬೇಕು ಎಂಬುವುದರ ಬಗ್ಗೆಯೂ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಜೊತೆಗೆ ಮಹಿಳಾ ಐಪಿಎಸ್ ಅಧಿಕಾರಿಯೂ ತನ್ನ ಹುದ್ದೆ, ಅಧಿಕಾರವನ್ನು ಬಳಸಿಕೊಂಡು, ತನ್ನ ಸಹೋದ್ಯೋಗಿಗಳ ಅಧಿಕಾರವನ್ನು ಬಳಸಿಕೊಂಡು, ಮೂರನೇ ವ್ಯಕ್ತಿಗಳನ್ನು ಬಳಸಿಕೊಂಡು ಯಾವುದೇ ಕೇಸ್ ಗಳನ್ನು ಮಾಜಿ ಪತಿ ಹಾಗೂ ಅವರ ಪೋಷಕರ ವಿರುದ್ಧ ದಾಖಲಿಸಬಾರದು ಎಂದು ಕೂಡ ಸ್ಪಷ್ಟವಾಗಿ ಹೇಳಿದೆ. ಜೊತೆಗೆ ಮಹಿಳಾ ಐಪಿಎಸ್ ಅಧಿಕಾರಿಯೂ ಕೇಳುವ ಕ್ಷಮೆಯನ್ನು ಪತಿ ಹಾಗೂ ಅವರ ಕುಟುಂಬ ವರ್ಗ ಯಾವುದೇ ಕೋರ್ಟ್ ಮುಂದೆಯೂ ತಮ್ಮ ಪರವಾಗಿ ಬಳಸಿಕೊಳ್ಳದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆ ರೀತಿ ಏನಾದರೂ ಪತಿ, ಪತಿಯ ಕುಟುಂಬ ಮಾಡಿದರೆ, ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಕೂಡ ಸುಪ್ರೀಂ ಕೋರ್ಟ್ ಪತಿಗೆ ಎಚ್ಚರಿಸಿದೆ.

ಸಂವಿಧಾನದ 142ನೇ ವಿಧಿಯಡಿ ತನಗೆ ಇರುವ ಅಧಿಕಾರವನ್ನು ಬಳಸಿಕೊಂಡು ದಂಪತಿಗೆ ವಿವಾಹ ವಿಚ್ಛೇದನವನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದೆ. ಪತಿಯ ವಿರುದ್ಧ ಸಾಕಷ್ಟು ಕೇಸ್ ಹಾಕಿರುವುದರಿಂದ ಇಬ್ಬರು ಮತ್ತೆ ಒಂದಾಗುವ ಸಾಧ್ಯತೆ ಇಲ್ಲದಿರುವುದರಿಂದ ಡಿವೋರ್ಸ್ ಮಂಜೂರು ಮಾಡುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಪತಿ ಹಾಗೂ ಅವರ ಕುಟುಂಬದವರ ವಿರುದ್ಧ ದಾಖಲಿಸಿರುವ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್ ಕೇಸ್​ಗಳನ್ನು ರದ್ದುಪಡಿಸಿರುವುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿದೆ.

ಕುಟುಂಬ ಕಲ್ಯಾಣ ಸಮಿತಿಗೆ ಸುಪ್ರೀಂ ಕೋರ್ಟ್ ಅನುಮೋದನೆ

ಇದೇ ಆದೇಶದಲ್ಲಿ ಸುಪ್ರೀಂ ಕೋರ್ಟ್ , ವರದಕ್ಷಿಣೆ ಕಿರುಕುಳ ತಡೆಗೆ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳು ಇರಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಅನುಮೋದಿಸಿದೆ. ವೈವಾಹಿಕ ವಿವಾದಗಳಲ್ಲಿ ಐಪಿಸಿ ಸೆಕ್ಷನ್ 498(ಎ) ದುರ್ಬಳಕೆ ತಡೆಗೆ ಕುಟುಂಬ ಕಲ್ಯಾಣ ಸಮಿತಿಯ ಮೂಲಕ ಕ್ರಮಗಳನ್ನ ಕೈಗೊಳ್ಳಬೇಕೆಂದು ಈ ಹಿಂದೆಯೇ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ವರದಕ್ಷಿಣೆ ತಡೆ ಕಾಯಿದೆಯ ದುರ್ಬಳಕೆಗೆ ತಡೆಗೆ ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳು ಮುಂದೆಯೂ ಜಾರಿಯಲ್ಲಿರುತ್ತವೆ. ಪೊಲೀಸ್ ಅಧಿಕಾರಿಗಳು ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ಹೊಸ ಕೆಲಸ ಪ್ರಾರಂಭಿಸಲು ಒಳ್ಳೆ ದಿನ, ದೊಡ್ಡ ಪ್ರಮಾಣದ ಹೂಡಿಕೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ..!

publive-image

ಈ ಹಿಂದೆಯೂ ಅನೇಕ ಭಾರಿ ಸುಪ್ರೀಂ ಕೋರ್ಟ್, ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯು (ಐಪಿಸಿ ಸೆಕ್ಷನ್ 498 ಎ) ದುರ್ಬಳಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈಗ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 85ರಡಿ ವರದಕ್ಷಿಣೆ ಕಿರುಕುಳ ತಡೆ ಕೇಸ್​ಗಳನ್ನು ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗುತ್ತಿದೆ.

ಅಲಹಾಬಾದ್ ಹೈಕೋರ್ಟ್ ಮಾರ್ಗಸೂಚಿ ಪ್ರಕಾರ ಪತಿ ಹಾಗೂ ಅವರ ಕುಟುಂಬ ವರ್ಗದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ 2 ತಿಂಗಳವರೆಗೂ ಯಾರನ್ನೂ ಬಂಧಿಸಬಾರದು. 2 ತಿಂಗಳ ಕೂಲಿಂಗ್ ಪೀರಿಯಡ್‌ ಸಮಯ ಇರಬೇಕು. ತಕ್ಷಣವೇ ದೂರನ್ನು ಕುಟುಂಬ ಕಲ್ಯಾಣ ಸಮಿತಿಗೆ ವರ್ಗಾಯಿಸಬೇಕು.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment