ವಿಜಯ್ ದೇವರಕೊಂಡ ವಿರುದ್ಧ ಅಟ್ರಾಸಿಟಿ ಕೇಸ್.. ಬಂಧನ ಸಾಧ್ಯತೆ..

author-image
Veena Gangani
Updated On
ಪ್ರಕಾಶ್ ರಾಜ್​​ಗೆ ಬಿಗ್ ಶಾಕ್; ದೇವರಕೊಂಡ, ದಗ್ಗುಬಾಟಿಗೂ ಆಘಾತ, ಕಾದಿದೆ ಸಂಕಷ್ಟ..!
Advertisment
  • ಟಾಲಿವುಡ್​ ಸ್ಟಾರ್​ ವಿಜಯ್ ದೇವರಕೊಂಡಗೆ ಸಂಕಷ್ಟ
  • ವಿಜಯ್ ದೇವರಕೊಂಡ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
  • ಅಂದು ನಡೆದ ಕಾರ್ಯಕ್ರಮದಲ್ಲಿ ದೇವರಕೊಂಡ ಹೇಳಿದ್ದೇನು?

ಟಾಲಿವುಡ್​ ಸ್ಟಾರ್​ ವಿಜಯ್ ದೇವರಕೊಂಡಗೆ ಸಂಕಷ್ಟ ಎದುರಾಗಿದೆ. ಬುಡಕಟ್ಟು ಜನಾಂಗದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ನಟ ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್​ ಹೀರೋ?

publive-image

ಪೊಲೀಸರ ಪ್ರಕಾರ, ಏಪ್ರಿಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಟ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು 500 ವರ್ಷಗಳ ಹಿಂದಿನ ಬುಡಕಟ್ಟು ಯುದ್ಧಗಳಿಗೆ ಹೋಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

publive-image

ದೂರಿನ ಆಧಾರದ ಮೇಲೆ ಜೂನ್ 17ರಂದು ನಟನ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೂ, ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ಅರು ಸಲ್ಲಿಸಿದ ದೂರಿನಲ್ಲಿ, ಸೂರ್ಯ ನಟನೆಯ 'ರೆಟ್ರೋ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯ್ ದೇವರಕೊಂಡ ಅವರು ಬುಡಕಟ್ಟು ಜನಾಂಗದವರ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಅವರನ್ನು ಅವಮಾನಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.


">May 3, 2025

ಈ ಘಟನೆ ಬೆನ್ನಲ್ಲೇ ಮೇ 3ರಂದು ನಟ ಎಕ್ಸ್‌ ಖಾತೆಯಲ್ಲಿ 'ಯಾವುದೇ ಸಮುದಾಯವನ್ನು, ವಿಶೇಷವಾಗಿ ಪರಿಶಿಷ್ಟ ಪಂಗಡಗಳನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವಿಲ್ಲ. ನನ್ನ ಹೇಳಿಕೆಯು ತಪ್ಪಾಗಿ ಅರ್ಥೈಸಲ್ಪಟ್ಟಿದ್ದರೆ ಅಥವಾ ನೋವುಂಟುಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಶಾಂತಿ, ಪ್ರಗತಿ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡುವುದು ನನ್ನ ಏಕೈಕ ಉದ್ದೇಶವಾಗಿತ್ತು. ನಾನು ಒಗ್ಗಟ್ಟನ್ನು ಹೆಚ್ಚಿಸಲು ಬಯಸುತ್ತೇನೆ ಹೊರತು ಎಂದಿಗೂ ವಿಭಜಿಸಲು ಬಯಸುವುದಿಲ್ಲ' ಎಂದು ಬರೆದಿದ್ದಾರೆ. ಸದ್ಯ ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment