Advertisment

ಬೆಳಗ್ಗೆ ಮಿ.ಪರ್ಫೆಕ್ಟ್.. ರಾತ್ರಿ ಫುಲ್ ವೈಲೆಂಟ್‌.. 700 ಹುಡುಗಿಯರಿಗೆ ಕಾಟ ಕೊಟ್ಟ ಕಿರಾತಕ ಇವನೊಬ್ಬನೇ!

author-image
admin
Updated On
ಬೆಳಗ್ಗೆ ಮಿ.ಪರ್ಫೆಕ್ಟ್.. ರಾತ್ರಿ ಫುಲ್ ವೈಲೆಂಟ್‌.. 700 ಹುಡುಗಿಯರಿಗೆ ಕಾಟ ಕೊಟ್ಟ ಕಿರಾತಕ ಇವನೊಬ್ಬನೇ!
Advertisment
  • ಬೆಳಗ್ಗೆ ಸೈಲೆಂಟ್​ HR, ರಾತ್ರಿ ಆಗ್ತಿದ್ದಂತೆ ವೈಲೆಂಟ್​ ಬೇಟೆಗಾರ!
  • ರಾತ್ರಿಯಾದ್ರೆ ಸಾಕು ಜಾಗೃತಗೊಳ್ತಿದ್ದ.. 700 ಮಂದಿ ಹುಡುಗಿಯರು
  • ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದು ರೋಚಕ ಸಿನಿಮಾ ರೀತಿ ಇದೆ

ಈತನನ್ನ ನೋಡಿದರೇ ಅನುಮಾನವೇ ಬರೋದಿಲ್ಲ. ಥೇಟ್​ ರಾಮನಷ್ಟೇ ಸೌಮ್ಯ ಸ್ವಭಾವದಿಂದ ವರ್ತಿಸುತ್ತಿದ್ದ. ಬೆಳಗ್ಗೆ ಅಚ್ಚುಕಟ್ಟಾಗಿ ಹೆಚ್​ಆರ್​ ರೀತಿ ಕೆಲಸ ಮಾಡುತ್ತಿದ್ದ. ಸಂಜೆಯಾದರೆ ಇವನೊಳಗಿನ ಮೃಗ ಜಾಗೃತವಾಗುತ್ತಿತ್ತು. ಅಷ್ಟಕ್ಕೂ ಇವನು ಮಾಡಿದ್ದೇನು ಗೊತ್ತಾ? ಅದುವೇ ರಣರೋಚಕ.

Advertisment

ತುಷಾರ್​ ಅಲ್ಲ.. ಇವನು ಪಕ್ಕಾ ಕಿರಾತಕ
ದೆಹಲಿ ಮೂಲದ ತುಷಾರ್​ ಬಿಸ್ತಾ ಬ್ಯುಸಿನೆಸ್​ ಅಡ್ಮಿನಿಸ್ಟ್ರೇಷನ್ ಮುಗಿಸಿ ಮೂರು ವರ್ಷಗಳಿಂದ ನೋಯ್ಡಾದ ಖಾಸಗಿ ಕಂಪನಿಯಲ್ಲಿ ಹೆಚ್​ಆರ್​ ಕೆಲಸ ನಿರ್ವಹಿಸುತ್ತಿದ್ದ. ಆಫೀಸ್​​ನಲ್ಲಿ ಪ್ರತಿಯೊಬ್ಬರೂ ತುಷಾರ್​ ಬಗ್ಗೆ ತುಟಿ ಬಿಚ್ಚುತ್ತಿರ್ಲಿಲ್ಲ. ಥೇಟ್​ ಆರ್ಯ 2 ಸಿನಿಮಾದ ಅಲ್ಲು ಅರ್ಜುನ್ ತರಹ ಮಿಸ್ಟರ್​ ಫರ್ಫೆಕ್ಟ್​ ರೀತಿ ವರ್ತಿಸುತ್ತಿದ್ದ. ಒಂದೇ ಒಂದು ಹುಡುಗಿಯ ಕಡೆಯೂ ಕಣ್ಣೆತ್ತಿ ನೋಡುತ್ತಿರಲಿಲ್ಲ. ಆದರೆ, ಸಂಜೆ ಬಳಿಕ ಚೇಂಜ್ ಆಗಿಬಿಡುತ್ತಿದ್ದ. ಯಾರೂ ಜೊತೆಗಿಲ್ಲ ಅನ್ನೋದು ಗೊತ್ತಾದ ಕೂಡಲೇ ಗೇಮ್ ಶುರುವಾಗ್ತಿತ್ತು.

publive-image

ರಾತ್ರಿ 700 ಹುಡುಗಿಯರನ್ನ ಅಳಿಸ್ತಿದ್ದ
ತುಷಾರ್​​ ಸೋಷಿಯಲ್ ಮೀಡಿಯಾದಲ್ಲಿ Bumble ಹಾಗೂ Snapchatನಲ್ಲಿ ಸಕ್ರಿಯ ಆಗ್ತಿದ್ದ. ಇದೇ ಜಾಲತಾಣಗಳ ಮೂಲಕವೇ ಸುಮಾರು 700 ಹುಡುಗಿಯರನ್ನು ಬಲೆಗೆ ಬೀಳಿಸಿಕೊಂಡಿದ್ದ. ಅದೂ ಸಹ 18 ವರ್ಷದಿಂದ 30 ವರ್ಷದೊಗಿನ ಹುಡುಗಿಯರನ್ನೇ ಬಲೆಗೆ ಹಾಕಿಕೊಂಡಿದ್ದ. ತಾನೊಬ್ಬ ಅಮೆರಿಕಾದ​ ಮಾಡೆಲ್​ ಅಂತ ಹೇಳಿಕೊಂಡು ಬಲೆಗೆ ಬೀಳಿಸಿದ್ದ. ಅದಕ್ಕಾಗಿಯೇ ಅಂದ ಚೆಂದದ ಫೋಟೋಗಳನ್ನು ಹಾಕಿಕೊಂಡು ಮರುಳು ಮಾಡಿದ್ದ. ಇವನನ್ನ ನಂಬಿದ ಹುಡುಗೀರು ತಮ್ಮ ಖಾಸಗಿ ಫೋಟೋ, ವಿಡಿಯೋಗಳನ್ನೂ ಕಳಿಸುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುತ್ತಿದ್ದ. ಎಷ್ಟೇ ತಮ್ಮ ಖಾಸಗಿ ಫೋಟೋ, ವಿಡಿಯೋ ಲೀಕ್ ಮಾಡಬಹುದು ಅನ್ನೋ ಭಯಕ್ಕೆ ಕೇಳಿದಷ್ಟು ಹಣ ಕೊಡ್ತಿದ್ರು. ಮತ್ತೊಂದಷ್ಟು ಮಂದಿಯಂತೂ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಪತ್ನಿಗೆ ಬಿಗ್ ರಿಲೀಫ್‌.. ಮೂವರಿಗೂ ಕೋರ್ಟ್‌ ಜಾಮೀನು ಮಂಜೂರು 

Advertisment

1000 ವಿಡಿಯೋ, ಆಡಿಯೋ ಸಿಕ್ಕಿವೆಯೇ?
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗೂ ಹೀಗೆಯೇ ತುಷಾರ್ ಬ್ಲಾಕ್​ಮೇಲ್ ಮಾಡಿದ್ದ. ಕೂಡಲೇ ಆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ಜನವರಿ 3ರ ಶುಕ್ರವಾರ ಈಸ್ಟ್​ ದೆಹಲಿ ಪೊಲೀಸರು ಪ್ಲಾನ್ ಮಾಡಿ ಷಾಕರ್​ಪೂರ್ ಏರಿಯಾದಲ್ಲಿ ತುಷಾರ್​ನನ್ನ ಬಂಧಿಸಿದ್ದಾರೆ. ಎಸಿಪಿ ಅರವಿಂದ್ ಯಾದವ್ ನೇತೃತ್ವದಲ್ಲಿ ಸೈಬರ್​ ಪೊಲೀಸರು ಗೋಮುಖ ವ್ಯಾಘ್ರನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ತುಷಾರ್​ನಿಂದ 13 ಕ್ರೆಡಿಟ್​ ಕಾರ್ಡ್, ನೂರಕ್ಕೂ ಅಧಿಕ ವಾಟ್ಸಾಪ್ ರೆಕಾರ್ಡಿಂಗ್, 1000ಕ್ಕೂ ಅಧಿಕ ಆಡಿಯೋ ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment